ರಾಜ್ಯದಲ್ಲಿ ಪರಿಸರ ದಿನಾಚರಣೆ ಅಂಗವಾಗಿ 8 ಕೋಟಿ ಸಸಿಗಳನ್ನು ನೆಡಲು ಯೋಜಿಸಲಾಗಿದೆ. ಜನಮುಖಿಯಾಗಿ ಅರಣ್ಯ ಇಲಾಖೆಯನ್ನು ಬದಲಾಯಿಸುವ ನಿಟ್ಟಿನಲ್ಲಿಯೂ ಹಲವು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಸಮುದಾಯ ಪಾಲ್ಗೊಳ್ಳುವಿಕೆಗೆ ಕಾರ್ಯಕ್ರಮ ರೂಪಿಸಲಾಗಿದೆ. ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೂ ಮುಂದಾಗಿದ್ದೇವೆ… -ಅರಣ್ಯ ಸಚಿವ ಆನಂದ್ ಸಿಂಗ್ ವಿಜಯವಾಣಿ ಸಂದರ್ಶನದಲ್ಲಿ ಹೇಳಿದ ಮಾತುಗಳಿವು. ಸಂದರ್ಶನದ ಪೂರ್ಣವಿವರ ಇಲ್ಲಿದೆ.
# ಸಚಿವರಾದ ಮೇಲೆ ಏನೇನು ಕ್ರಮ ಕೈಗೊಂಡಿದ್ದೀರಿ?
ನಮ್ಮ ನಾಯಕರಾದ ಯಡಿಯೂರಪ್ಪ ಅರಣ್ಯ ಇಲಾಖೆ ಜವಾಬ್ದಾರಿಯನ್ನು ನೀಡಿದ್ದು, ಅದನ್ನು ಸಮರ್ಪಕವಾಗಿ ಕಾರ್ಯನಿರ್ವಹಣೆ ಮಾಡಲು ಮುಂದಾಗಿದ್ದೇನೆ. ಇಲಾಖೆಗೆ ಹೊಸ ದಿಕ್ಕು ದಿಸೆ ತೋರಿಸುವ ನಿಟ್ಟಿನಲ್ಲಿ ತಂಡವಾಗಿ ಕೆಲಸ ಮಾಡುವ ಕಾರ್ಯಕ್ರಮ ಹಾಕಿಕೊಂಡಿದ್ದೇವೆ. ಇನ್ನು ಮುಂದಕ್ಕೆ ನರ್ಸರಿ ಸಸಿಗಳ ಬದಲಿಗೆ ನಾವೇ ಗಿಡಗಳನ್ನು ಅಭಿವೃದ್ಧಿ ಮಾಡಿ ವಿತರಣೆ ಮಾಡಲು ನಿರ್ಧರಿಸಲಾಗಿದೆ.
# ಏನೇನು ಕಾರ್ಯಕ್ರಮ ಆಯೋಜಿಸಿದ್ದೀರಿ?
ಪ್ರತಿ ವರ್ಷವೂ ಪರಿಸರಕ್ಕೆ ಸಂಬಂದಿಸಿದಂತೆ ಈ ಬಾರಿಯೂ ಬಯೋ ಡೈವರ್​ಸಿಟಿ ಬಗ್ಗೆ ಕ್ವಿಜ್, ಆನ್​ಲೈನ್ ಪೇಂಟಿಂಗ್, ಪರಿಸರ ಗೀತೆ, ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಹಲವು ಸ್ಪರ್ಧೆಗಳನ್ನು ಏರ್ಪಡಿಸಿದ್ದೇವೆ. ಆದರೆ ಈ ಬಾರಿ ಎಲ್ಲವೂ ಡಿಜಿಟಲ್ ಮೂಲಕವೇ ಸ್ಪರ್ಧೆ ಮಾಡಲಾಗುತ್ತಿದೆ.
# ಅರಣ್ಯ ಇಲಾಖೆಗೆ ಕಾಯಕಲ್ಪ ಎಂದಿರಿ?
ಹೌದು. ಅರಣ್ಯ ಇಲಾಖೆಯ ಕಾನೂನುಗಳನ್ನು ಇನ್ನಷ್ಟು ಬಲಪಡಿಸಬೇಕಾಗಿದೆ. ಅರಣ್ಯ ಉತ್ಪನ್ನಗಳನ್ನು ಕಳ್ಳ ಸಾಗಾಣಿಕೆ ಮಾಡುವವರ ಮೇಲೆ ಶಿಕ್ಷೆ ಪ್ರಮಾಣ ಹೆಚ್ಚಿಸಬೇಕಾಗಿದೆ. ವನ್ಯಜೀವಿಗಳನ್ನು ಹತ್ಯೆ ಮಾಡುವವರ ಮೇಲೆ ಕ್ರಮ ಬಿಗಿಗೊಳಿಸಬೇಕಾಗಿದೆ. ಈ ನಿಟ್ಟಿನಲ್ಲಿ ಒಂದಷ್ಟು ಬದಲಾವಣೆ ತರಲಾಗುವುದು.
# ವೇತನ ತಾರತಮ್ಯ ನಿವಾರಣೆಗೆ ಕ್ರಮ..
ಆನೆಗಳನ್ನು ಪಳಗಿಸಲು ಮಾವುತರು ಮುಖ್ಯ. ಆದರೆ, ಮಾವುತರಿಗೆ ಶೈಕ್ಷಣಿಕ ಅರ್ಹತೆಗಳು ಇರುವುದಿಲ್ಲ. ಹಾಗಾಗಿ ಅವರಿಗೆ ವೇತನ ಹೆಚ್ಚಳ ಮಾಡಲು ಕಾನುನು ತೊಡಕುಗಳಿದ್ದವು. ಈಗ ಅರಣ್ಯ ರಕ್ಷಕರಿಗೆ (ಫಾರೆಸ್ಟ್ ಗಾರ್ಡ್) ಸರಿಸಮಾನವಾದ ವೇತನ ನೀಡಲು ಸಿಎಂ ಅಧ್ಯಕ್ಷತೆಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದೆ. ಇನ್ನು ಮುಂದಿನ ದಿನಗಳಲ್ಲಿ ಇನ್ನಷ್ಟು ಸುಧಾರಣೆ ಕ್ರಮ ಕೈಗೊಳ್ಳಲಾಗುವುದು.
# ರಾಜ್ಯದಲ್ಲಿ ಅರಣ್ಯ ಅಭಿವೃದ್ಧಿಗೆ ಕ್ರಮ?
ಸಸಿ ನೆಡುವ ಮತ್ತು ಸಂರಕ್ಷಣೆ ವಿಷಯದಲ್ಲಿ ರಾಜ್ಯ ಮುಂಚೂಣಿಯಲ್ಲಿದೆ. ಕೇಂದ್ರ ಸರ್ಕಾರದ ಎಸ್​ಎಫ್​ಆರ್ ವರದಿ ಪ್ರಕಾರವೇ, 66 ಸಾವಿರ ಹೆಕ್ಟೇರ್ ಇದ್ದ ಅರಣ್ಯ ಪ್ರದೇಶ ಈಗ 80 ಸಾವಿರ ಹೆಕ್ಟೇರ್​ಗೆ ವಿಸ್ತರಣೆ ಆಗಿದೆ ಎನ್ನುವುದನ್ನು ಧೃಢೀಕರಿಸಿದೆ. ರಾಜ್ಯದಲ್ಲಿ 2.40 ಹೆಕ್ಟೇರ್ ಹೆಚ್ಚಳವಾಗಿರುವುದು ದೊಡ್ಡ ಸಾಧನೆ. ಕೇಂದ್ರ ಸರ್ಕಾರ, ಬೇರೆ ರಾಜ್ಯಗಳಿಗೆ ಕರ್ನಾಟಕದ ಸಾಧನೆಯನ್ನೆ ಉದಾಹರಣೆಯನ್ನಾಗಿ ನೀಡುತ್ತಿದೆ.
# ಅರಣ್ಯ ಉತ್ಪನ್ನದಿಂದ ಹೆಚ್ಚು ಲಾಭ ಬರುತ್ತಿದೆಯೇ?
ಅರಣ್ಯ ಉತ್ಪನ್ನಗಳಿಂದ ವಾರ್ಷಿಕ 299 ಕೋಟಿ ರೂ. ಆದಾಯ ಬರುತ್ತಿದೆ. ಇದನ್ನು ಇನ್ನು ಹೆಚ್ಚಿಸಲು ಚರ್ಚೆ ಮಾಡಲಾಗಿದ್ದು, ಯೋಜನೆ ರೂಪಿಸಲಾಗುವುದು.
# ಆನೆ ದಾಳಿ, ವನ್ಯಪ್ರಾಣಿಗಳ ಸಂಘರ್ಷ ಬಗ್ಗೆ ಕ್ರಮ?
ಆನೆಗಳ ದಾಳಿ ದೊಡ್ಡ ಸಮಸ್ಯೆ ಜತೆಗೆ ಸವಾಲಾಗಿದೆ. ಆನೆಗಳ ದಾಳಿಯನ್ನು ಸಮರ್ಥವಾಗಿ ತಡೆಯಲು ಕಂದಕ ತೋಡುವುದರೊಟ್ಟಿಗೆ ಈಗ ರೈಲ್ವೆ ಕಂಬಿಗಳನ್ನ ಅಳವಡಿಸಿ ಬೇಲಿ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳಲಾಗುವುದು. ಹುಲಿ, ಚಿರತೆ, ಕರಡಿ ಮತ್ತಿತರ ವನ್ಯಜೀವಿಗಳ ದಾಳಿಗೆ ಸಂಬಂಧಿಸಿದಂತೆ ಸಂತ್ರಸ್ತ ಕುಟುಂಬಗಳಿಗೆ ಕೊಡುವ ಪರಿಹಾರವನ್ನು ಹೆಚ್ಚಳ ಮಾಡಲಾಗಿದೆ.
# ಪರಿಸರ ದಿನಾಚರಣೆ ಈ ಬಾರಿ ಹೇಗೆ ಆಚರಿಸುವಿರಿ?
ಸಂಭ್ರಮ ಸಡಗರಗಳಿಂದ ಪರಿಸರ ದಿನಾಚರಣೆ ಆಚರಣೆ ಮಾಡಲು ಕರೊನಾ ಅಡ್ಡಿಯಾಗಿದೆ. ಆದ್ದರಿಂದ ಮುಖ್ಯಮಂತ್ರಿಗಳ ಗೃಹ ಕಚೇರಿ ಬಳಿಯೇ ಪರಿಸರ ದಿನಾಚರಣೆಗೆ ಸಿಎಂ ಯಡಿಯೂರಪ್ಪ ಚಾಲನೆ ನೀಡಲಿದ್ದಾರೆ. ಎಲ್ಲ ಭಾಗದಲ್ಲಿಯೂ ಸರಳವಾಗಿ ಪರಿಸರ ದಿನಾಚರಣೆ ಮಾಡಲು ಸೂಚಿಸಲಾಗಿದೆ.
# ಪರಿಸರ ಬಗ್ಗೆ ಇನ್ನೂ ಏನೇನು ಯೋಜನೆಗಳಿವೆ?
ಪರಿಸರ ಎನ್ನುವುದು ಕೇವಲ ಅರಣ್ಯ ಇಲಾಖೆಗೆ ಸಂಬಂಧಿಸಿದ್ದಲ್ಲ, ಜನಸಾಮಾನ್ಯರಿಗೆ ಸಂಬಂಧಿಸಿದ್ದು. ಆದ್ದರಿಂದ ಎಲ್ಲರೂ ಅರಣ್ಯ ರಕ್ಷಣೆಯಲ್ಲಿ ತೊಡಗಿಸಿಕೊಳ್ಳಬೇಕು ಎನ್ನುವುದು ನಮ್ಮ ನಿರೀಕ್ಷೆ. ಈ ನಿಟ್ಟಿನಲ್ಲಿ ಸಮುದಾಯ ಪಾಲ್ಗೊಳ್ಳುವಿಕೆ ಮಾಡಲು ಚಿಂತನೆ ನಡೆದಿದೆ.
ಬೇಡಮ್ಮ ಆನ್​ಲೈನ್ ಗುಮ್ಮ: ತಜ್ಞರು, ವೈದ್ಯರು, ನಟರ ಆಕ್ರೋಶ, ಇಲಾಖೆಯಲ್ಲೇ ಆಕ್ಷೇಪ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight + three =
Remember me
