1. ಪ್ಯಾನ್-ಆಧಾರ್ ಜೋಡಣೆ:ಪರ್ಮನೆಂಟ್ ಅಕೌಂಟ್ ನಂಬರ್ (ಪ್ಯಾನ್) ಮತ್ತು ಆಧಾರ್ ಸಂಖ್ಯೆ ಜೋಡಿಸುವುದಕ್ಕೆ ಇದೇ ಮಾರ್ಚ್ 31 ಕೊನೇ ದಿನ. ಅಷ್ಟರೊಳಗೆ ಈ ಕೆಲಸ ಆಗದಿದ್ದರೆ ಪ್ಯಾನ್ ನಿಷ್ಕ್ರಿಯವಾಗಲಿದೆ. ಅದೇ ರೀತಿ, ದಂಡವನ್ನೂ ಪಾವತಿಸಬೇಕಾದೀತು. ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 234ಎಚ್ ಪ್ರಕಾರ ದಂಡ ವಿಧಿಸಲಾಗುತ್ತದೆ. ದಂಡ ಮೊತ್ತವನ್ನು ಸರ್ಕಾರ ಇನ್ನೂ ಘೋಷಿಸಿಲ್ಲ. ಆದಾಗ್ಯೂ ಗರಿಷ್ಠ ದಂಡ ಮೊತ್ತ 1,000 ರೂಪಾಯಿ ಮೀರದು. ಇದಕ್ಕೆ ಹೊರತಾಗಿ, ಐಟಿಆರ್ ಸಲ್ಲಿಸಬೇಕಾದರೆ ಪ್ಯಾನ್ ಮತ್ತು ಆಧಾರ್ ಜೋಡಿಸಬೇಕಾದ್ದು ಅನಿವಾರ್ಯವಾಗಲಿದೆ. ಇವೆರಡೂ ಜೋಡಿಕೊಂಡಿರದೇ ಇದ್ದರೆ ಟ್ರೇಡಿಂಗ್, ಡಿಮ್ಯಾಟ್ ಖಾತೆ ಕೂಡ ಕೆಲಸ ಮಾಡದು.
2.ಬ್ಯಾಂಕ್ ಖಾತೆ ಕೆವೈಸಿ:ಬ್ಯಾಂಕ್ ಖಾತೆಗಳ ಕೆವೈಸಿ ಪೂರ್ಣಗೊಳಿಸುವುದಕ್ಕೆ ನಿಗದಿ ಪಡಿಸಿದ್ದ 2021ರ ಡಿಸೆಂಬರ್ 31ರ ಗಡುವನ್ನು 2022ರ ಮಾರ್ಚ್ 31ರ ತನಕ ಭಾರತೀಯ ರಿಸರ್ವ್ ಬ್ಯಾಂಕ್ (ಆರ್​ಬಿಐ) ವಿಸ್ತರಿಸಿದೆ. ಬ್ಯಾಂಕ್ ಗ್ರಾಹಕರು ತಮ್ಮ ಇತ್ತೀಚಿನ ಮಾಹಿತಿಯನ್ನು ಅಂದರೆ ಪ್ಯಾನ್, ವಿಳಾಸ ದೃಢೀ ಕರಿಸುವ ಆಧಾರ್, ಪಾಸ್​ಪೋರ್ಟ್ ಮತ್ತು ಇತರೆ ದಾಖಲೆಗಳನ್ನು ಬ್ಯಾಂಕ್ ಖಾತೆ ದೃಢೀಕರಣಕ್ಕೆ ನೀಡಬೇಕು. ಪ್ರಿವೆನ್ಶನ್ ಆಫ್ ಮನಿ-ಲಾಂಡರಿಂಗ್ ಆಕ್ಟ್ 2002, ಪ್ರಿವೆನ್ಶನ್ ಆಫ್ ಮನಿ ಲಾಂಡರಿಂಗ್ (ಮೇನ್​ಟೆನೆನ್ಸ್ ಆಫ್ ರೆಕಾರ್ಡ್ಸ್) ರೂಲ್ಸ್ 2005ರ ಪ್ರಕಾರ ಗ್ರಾಹಕರ ಕೆವೈಸಿಯನ್ನು ಬ್ಯಾಂಕ್​ಗಳು ಸಂಗ್ರಹಿಸುತ್ತಿವೆ.
3. ಡಿಮ್ಯಾಟ್, ಟ್ರೇಡಿಂಗ್ ಖಾತೆ ಕೆವೈಸಿ:ಸೆಕ್ಯುರಿಟೀಸ್ ಆಂಡ್ ಎಕ್ಸ್​ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) ಕಳೆದ ವರ್ಷ ಏಪ್ರಿಲ್​ನಲ್ಲಿ ಪ್ರಕಟಿಸಿದ್ದ ಸುತ್ತೋಲೆ ಪ್ರಕಾರ, ಠೇವಣಿದಾರರು ಅಂದರೆ ಎನ್​ಎಸ್​ಡಿಎಲ್ ಮತ್ತು ಸಿಎಸ್​ಡಿಎಲ್ ನ ಖಾತೆದಾರರು ತಮ್ಮ ಡಿಮ್ಯಾಟ್ ಮತ್ತು ಟ್ರೇಡಿಂಗ್ ಖಾತೆಗಳನ್ನು ಆರು ಮುಖ್ಯ ದಾಖಲೆ ನೀಡಿ ಕೆವೈಸಿ ಅಪ್ಡೇಟ್ ಮಾಡಿಕೊಳ್ಳಬೇಕು. ಡಿಮ್ಯಾಟ್, ಟ್ರೇಡಿಂಗ್ ಖಾತೆಗಳ ಕೆವೈಸಿಗೆ ಹೆಸರು, ವಿಳಾಸ, ಪ್ಯಾನ್, ಸರಿಯಾದ ಮೊಬೈಲ್ ಸಂಖ್ಯೆ, ಇಮೇಲ್ ಐಡಿ, ಆದಾಯ ಸ್ತರ ವಿವರ ಸೇರಿಸಬೇಕು.
4. ಸಣ್ಣ ಉಳಿತಾಯ ಖಾತೆ-ಪಿಒ ಖಾತೆ ಜೋಡಣೆ:ಸಣ್ಣ ಉಳಿತಾಯ ಖಾತೆಯನ್ನು ಅಂಚೆ ಇಲಾಖೆಯ ಉಳಿತಾಯ ಖಾತೆ ಅಥವಾ ಬ್ಯಾಂಕ್ ಖಾತೆಗೆ ಜೋಡಿಸಬೇಕು. ಇತ್ತೀಚೆಗೆ ಈ ಕುರಿತು ಅಂಚೆ ಇಲಾಖೆ ಸುತ್ತೋಲೆ ಪ್ರಕಟಿಸಿತ್ತು. ಏ.1ರಿಂದಾಚೆಗೆ ಎಂಐಎಸ್.ಎಸ್​ಸಿಎಸ್​ಎಸ್/ಟಿಡಿ ಖಾತೆಗಳಲ್ಲಿ ಜಮೆಯಾದ ಬಡ್ಡಿಯನ್ನು ಪೋಸ್ಟ್ ಆಫೀಸ್ ಉಳಿತಾಯ ಖಾತೆ ಅಥವಾ ಬ್ಯಾಂಕ್ ಖಾತೆಗೆ ವರ್ಗಾವಣೆ ಆಗಲಿದೆ. ಒಂದೊಮ್ಮೆ ಈ ಖಾತೆಗಳನ್ನು ಉಳಿತಾಯ ಖಾತೆಗೆ ಜೋಡಿಸಲಾಗದೇ ಇದ್ದರೆ ಆಗ, ಬಡ್ಡಿಯನ್ನು ಚೆಕ್ ಮೂಲಕ ಪಾವತಿಸಲಾಗುತ್ತದೆ.
5. ಪಿಪಿಎಫ್​ಗೆ ದೇಣಿಗೆ:ಪಬ್ಲಿಕ್ ಪ್ರಾವಿಡೆಂಟ್ ಫಂಡ್ (ಪಿಪಿಎಫ್) ದೇಣಿಗೆ ಪ್ರತಿವರ್ಷ ಕನಿಷ್ಠ 500 ರೂಪಾಯಿ ಪಾವತಿಸುವುದು ಕಡ್ಡಾಯ. ಇಲ್ಲದಿದ್ದರೆ ಖಾತೆ ನಿಷ್ಕ್ರಿಯವಾಗುತ್ತದೆ. ಇದನ್ನು ಮತ್ತೆ ಸಕ್ರಿಯಗೊಳಿಸಬೇಕಾದರೆ ಸಣ್ಣ ಪ್ರಮಾಣದ ಶುಲ್ಕವನ್ನೂ ಗ್ರಾಹಕರು ಪಾವತಿಸಬೇಕಾಗುತ್ತದೆ.
6. ಪಿಎಂ ಕಿಸಾನ್ ಖಾತೆ ಕೆವೈಸಿ:ಪಿಎಂ ಕಿಸಾನ್ ಫಲಾನುಭವಿ ರೈತರು ಆನ್​ಲೈನ್ ಅಥವಾ ಆಫ್​ಲೈನ್ ಮೂಲಕ ಕೆವೈಸಿಯನ್ನು ಮಾ.31ರ ಒಳಗೆ ಅಪ್ಡೇಟ್ ಮಾಡಬೇಕು. ಹೀಗೆ ಮಾಡಿದರೆ ಮಾತ್ರವೇ ಮುಂದಿನ ಕಂತಿನ ಹಣ ಬ್ಯಾಂಕ್ ಖಾತೆಗೆ ಜಮೆ ಆಗಲಿದೆ. ಪಿಎಂ ಕಿಸಾನ್ ವೆಬ್​ಸೈಟ್ ಪ್ರಕಾರ, ಪಿಎಂ ಕಿಸಾನ್ ನೋಂದಾಯಿತ ಕೃಷಿಕರಿಗೆ ಇಕೆವೈಸಿ ಕಡ್ಡಾಯ ಎಂದು ಸಂದೇಶ ನೀಡಲಾಗಿದೆ.
7. ಐಟಿ ರಿಟರ್ನ್ಸ್ ಸಲ್ಲಿಕೆ:2021-22ನೇ ಆರ್ಥಿಕ ವರ್ಷದ ಆದಾಯ ತೆರಿಗೆ ರಿಟರ್ನ್ಸ್ ಅನ್ನು ವಿಳಂಬವಾಗಿ ಅಥವಾ ಪರಿಷ್ಕರಿಸಿ ಸಲ್ಲಿಸುವುದಕ್ಕೆ ಮಾರ್ಚ್ 31 ಕೊನೇ ದಿನ. ಇದಾದ ಬಳಿಕ ಆದಾಯ ತೆರಿಗೆ ಕಾಯ್ದೆ 234 ಎಫ್ ಪ್ರಕಾರ 5,000 ರೂ. ದಂಡ ಪಾವತಿಸಿ ಐಟಿಆರ್ ಸಲ್ಲಿಸಬೇಕಾಗುತ್ತದೆ. ಇದಕ್ಕೆ ಹೊರತಾಗಿ, 5 ಲಕ್ಷ ರೂ. ಒಳಗೆ ಆದಾಯ ಇರುವಂಥವರು ವಿಳಂಬ ಐಟಿಆರ್ ಸಲ್ಲಿಕೆಗೆ ಗರಿಷ್ಠ 1,000 ರೂ. ದಂಡ ಪಾವತಿಸಬೇಕಾದೀತು.
8. ಪಿಎಂಎವೈ ವಸತಿ ಸಬ್ಸಿಡಿ:ಪ್ರಧಾನಮಂತ್ರಿ ಆವಾಸ್ ಯೋಜನಾ (ಪಿಎಂಎವೈ- ಅರ್ಬನ್) ಎಂಬುದು ಕ್ರೆಡಿಟ್ ಲಿಂಕ್ಡ್ ಸಬ್ಸಿಡಿ ಸ್ಕೀಮ್ ಆಗಿದ್ದು, 2015ರ ಜೂನ್​ನಲ್ಲಿ ಚಾಲ್ತಿಗೆ ಬಂದಿದೆ. ಮೂರನೇ ಮತ್ತು ಅಂತಿಮ ಹಂತದ ಪಿಎಂಎವೈ ಮಾರ್ಚ್ 31ಕ್ಕೆ ಕೊನೆಗೊಳ್ಳುತ್ತಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven − 10 =
Remember me
