ಬೆಂಗಳೂರು:ಸಿಟಿ ಮಾರ್ಕೆಟ್​ ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿ ಕೆಂಪು ಬಣ್ಣದ ಲೇಡಿಸ್​ ಪರ್ಸ್ ಹಿಡಿದು ಓಡಾಡುತ್ತಿದ್ದ ಮೂವರು ಖತರ್ನಾಕ್​ ಕಳ್ಳರು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದು, ಆ ಪರ್ಸ್​ನಲ್ಲಿ ಲಕ್ಷಾಂತರ ರೂ. ಬೆಲೆಬಾಳುವ ಬರೋಬ್ಬರಿ 80 ವಜ್ರದ ಹರಳು ಪತ್ತೆಯಾಗಿವೆ.
ದಕ್ಷಿಣ ಕನ್ನಡದ ಪುತ್ತೂರು ಮೂಲದ ರವಿಕುಮಾರ್​ (54), ಪ್ರವಿಣ್​ ಕುಮಾರ್​ (35), ಸುಧೀರ್​ (28) ಬಂಧಿತರು. ಈ ಮೂವರು ಆರೋಪಿಗಳು ಸೆ.1ರ ಸಂಜೆ 7.15ರಲ್ಲಿ ಚಿಕ್ಕಪೇಟೆಯಲ್ಲಿ ವಜ್ರದ ಹರಳುಗಳನ್ನು ಮಾರಾಟ ಮಾಡಲು ಬಂದಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಸಿಟಿ ಮಾರ್ಕೆಟ್​ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಈ ಮೂವರ ಚಲನ-ವಲನಗಳನ್ನು ಗಮನಿಸಿ ಅನುಮಾನದ ಮೇರೆಗೆ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಗೊಂದಲದ ಹೇಳಿಕೆ ನೀಡಿದ್ದರು. ಇವರ ಬಳಿ ಇದ್ದ ಕೆಂಪು ಬಣ್ಣದ ಲೇಡಿಸ್​ ಪರ್ಸ್​ ಅನ್ನು ಪರಿಶೀಲಿಸಿದಾಗ, ನೀಲಿ ಬಣ್ಣದ ಪೇಪರ್​ನಲ್ಲಿ 80 ವಜ್ರದ ಹರಳುಗಳು ಇದ್ದವು.ಇದನ್ನೂ ಓದಿರಿಮೊಬೈಲ್​ ಕಳ್ಳನ ವಿರುದ್ಧ ಹೋರಾಡಿ ಗೆದ್ದ ಕೂಲಿಕಾರನ ಮಗಳಿಗೆ ಸಿಕ್ತು ಬಂಪರ್​ ಬಹುಮಾನ!
ಇವುಗಳನ್ನು ಹೊಂದಲು, ಸಾಗಾಣಿಕೆ ಅಥವಾ ವಿಲೇವಾರಿ ಮಾಡಲು ಬೇಕಾದ ಯಾವುದೇ ದಾಖಲಾತಿ ಆರೋಪಿಗಳ ಬಳಿ ಇರಲಿಲ್ಲ. ಈ ವಜ್ರದ ಹರಳುಗಳನ್ನು ಅಸಲಿಯೇ ಎಂದು ಪರೀಕ್ಷಿಸಲು ಆಭರಣ ತಯಾರಿಸುವ ತಜ್ಞರೊಬ್ಬರನ್ನು ಸ್ಥಳಕ್ಕೆ ಕರೆಸಿ ಪರಿಶೀಲಿಸಿದಾಗ ಕಚ್ಚಾ ಹಾಗೂ ನೈಜ ವಜ್ರದ ಹರಳುಗಳು ಎಂಬುದು ಬೆಳಕಿಗೆ ಬಂದಿದೆ. ಇದರ ಅಂದಾಜು ಮೌಲ್ಯ 40 ಲಕ್ಷ ರೂಪಾಯಿ ಎಂದು ತಜ್ಞರು ಅಂದಾಜಿಸಿದ್ದಾರೆ.
ಈ ಆರೋಪಿಗಳು ಲಕ್ಷಾಂತರ ರೂ. ಬೆಲೆ ಬಾಳುವ ವಜ್ರದ ಹರಳುಗಳನ್ನು ಬೇರೆ ಕಡೆಗಳಲ್ಲಿ ಕಳ್ಳತನ ಮಾಡಿ ಅಂಚೆಪೇಟೆಯಲ್ಲಿರುವ ಚಿನ್ನದ ಆಭರಣ ತಯಾರಿಸುವ ಅಂಗಡಿಗಳಿಗೆ ಮಾರಾಟ ಮಾಡಲು ಬಂದಿರುವ ಸಾಧ್ಯತೆಗಳಿವೆ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.
ಸಿಟಿ ಮಾರ್ಕೆಟ್​ ಠಾಣೆ ಇನ್​ಸ್ಪೆಕ್ಟರ್​ ಕುಮಾರಸ್ವಾಮಿ ನೇತೃತ್ವದ ತಂಡ ಆರೋಪಿಗಳನ್ನು ವಿಚಾರಣೆಗೊಳಪಡಿಸಿದ್ದಾರೆ. ಪ್ರಕರಣದ ಹಿಂದೆ ಕಾಣದ ಪ್ರಭಾವಿಗಳು ಇರುವ ಬಗ್ಗೆ ಸಂಶಯ ವ್ಯಕ್ತವಾಗಿದೆ.
ಗುಂಡು ಹಾರಿಸಿಕೊಂಡ ಹಿರಿಯ ಐಪಿಎಸ್ ಅಧಿಕಾರಿ ಆರ್.ಪಿ.ಶರ್ಮಾ

ಅಪ್ಪ-ಅಮ್ಮನಿಗೂ ಹೇಳದೆ ಮದುವೆಯಾದ ಯುವತಿ ಗಂಡನ ಮನೆಯ ಕಿಟಕಿಯಲ್ಲಿ ಶವವಾದ್ಲು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − 15 =
Remember me
