ವಿಜಯಪುರ:ಸಿಹಿ ಸಿಹಿಯಾದ, ರುಚಿಕರ ಹಣ್ಣನ್ನು ತಿನ್ನುವ ಆಸೆಯಿಂದ ಕೆಲವರು ಫಲ ನೀಡುವ ಮರಗಳನ್ನು ಬೆಳೆದಿರುವ ಮನೆಗಳಿಗೆ ನುಗ್ಗಿ ಹಣ್ಣು ಕಸಿದು ಪರಾರಿಯಾಗುತ್ತಾರೆ. ಇದರಿಂದ ಕುಪಿತಗೊಳ್ಳುವ ಮನೆ ಅಥವಾ ತೋಟದ ಮಾಲೀಕರು, ಕಳ್ಳತನ ಮಾಡುವವರ ವಿರುದ್ಧ ಕಿಡಿಕಾರುತ್ತಾರೆ. ಆದ್ರೆ, ವಿಜಯಪುರದ ದೇವನಹಳ್ಳಿ ತಾಲೂಕು ಇರಿಗೇನಹಳ್ಳಿಯಲ್ಲಿ ರೈತ ಟಿ.ಶಾಮಣ್ಣ ಅವರ ತೋಟದಲ್ಲಿ 80ಕ್ಕೂ ಹೆಚ್ಚು ಹಲಸಿನ ಮರಗಳನ್ನು ಅಪರಿಚಿತರು ಕಡಿದುಕೊಂಡು ಹೋಗಿರುವ ಘಟನೆ ಬೆಳಕಿಗೆ ಬಂದಿದ್ದು, ಪ್ರಕರಣ ವಿಜಯಪುರ ಠಾಣೆಯಲ್ಲಿ ದಾಖಲಾಗಿದೆ.
ಇದನ್ನೂ ಓದಿ:ದೆಹಲಿ ಏರ್‌ಪೋರ್ಟ್‌ ಮೇಲ್ಛಾವಣಿ ಕುಸಿತ: ಮೃತರಿಗೆ ₹20 ಲಕ್ಷ, ಗಾಯಾಳುಗಳಿಗೆ ₹3 ಲಕ್ಷ ಪರಿಹಾರ ಘೋಷಿಸಿದ ಕೇಂದ್ರ
2011ರಲ್ಲಿ ಲಾಲ್ ಬಾಗ್​ನಿಂದ ಮಧುರ ಹಾಗೂ ಬೇಲಿಚಂದ್ರ ತಳಿಯ ಹಲಸಿನ ಸಸಿಗಳನ್ನು ಖರೀದಿಸಿಕೊಂಡು ಬಂದು ನಾಟಿ ಮಾಡಿದ್ದೆವು. ಈ ಪೈಕಿ ಕೆಲವು ಮರಗಳು ಎರಡು ವರ್ಷಗಳ ಹಿಂದೆ ಕೆರೆಗಳು ತುಂಬಿದ್ದ ಸಮಯದಲ್ಲಿ ಒಣಗಿದ್ದವು. ಉಳಿದ 80ಕ್ಕೂ ಹೆಚ್ಚು ಮರಗಳು ಉತ್ತಮವಾಗಿ ಫಸಲು ಬಿಡುತ್ತಿದ್ದವು. ಪ್ರತಿವರ್ಷ ಬೆಳೆ ಬಂದಾಗ 2-3 ಲಕ್ಷ ರೂಪಾಯಿಗೆ ಬೆಳೆ ಮಾರಾಟ ಮಾಡುತ್ತಿದ್ದೆ, ಈ ಬಾರಿ ಫಸಲು ಮಾರಾಟ ಮಾಡಿ, ಭೂತಾನ್ ಕಡೆಗೆ ಪ್ರವಾಸ ಹೋಗಿದ್ದಾಗ ಯಾರೋ ಮರಗಳನ್ನು ಕಟಾವು ಮಾಡಿಕೊಂಡು, ಕೊಂಬೆಗಳನ್ನೂ ಬಿಡದೆ ಕದ್ದೊಯ್ದಿದ್ದಾರೆ ಎಂದು ತೋಟದ ಮಾಲೀಕ ಟಿ.ಶಾಮಣ್ಣ ತಮ್ಮ ದುಃಖವನ್ನು ತೋಡಿಕೊಂಡಿದ್ದಾರೆ.
ಪ್ರವಾಸದಿಂದ ವಾಪಸ್ ಬಂದ ನಂತರ ತೋಟದ ಕಡೆಗೆ ಹೋದಾಗ ಮರಗಳಿಲ್ಲದೆ ಇರುವುದನ್ನು ಗಮನಿಸಿದಾಗ ಆಘಾತವಾಯಿತು. ಅಕ್ಕಪಕ್ಕದಲ್ಲಿ ವಿಚಾರಿಸಿದಾಗ ಯಾರೋ ಟ್ರ್ಯಾಕ್ಟರ್​ಗಳನ್ನು ತಂದು, ಹಲಸಿನ ಮರಗಳನ್ನು ಕಟಾವು ಮಾಡಿಕೊಂಡು, ತುಂಬಿಸಿಕೊಂಡು ಸ್ಥಳದಿಂದ ಪರಾರಿಯಾಗಿರುವುದು ತಿಳಿದುಬಂದಿದೆ ಎಂದು ಹೇಳಿದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ಇದೀಗ ಇಲ್ಲಿನ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದೇನೆ ಎಂದಿದ್ದಾರೆ.
ರೋಹಿತ್ ಮತ್ತು ವಿರಾಟ್​ಗೆ ಇದೇ ಫೈನಲ್​ ಟಿ20 ವಿಶ್ವಕಪ್​! ಹೊಸ ಅಧ್ಯಾಯಕ್ಕೆ ಸಜ್ಜಾದ ಬಿಸಿಸಿಐ

ಇವರಿಗೋಸ್ಕರ ಆದ್ರೂ ನೀವು ಟಿ20 ವಿಶ್ವಕಪ್​ ಗೆಲ್ಲಬೇಕು! ರೋಹಿತ್ ಪಡೆಗೆ ನವಜೋತ್ ಸಿಂಗ್​ ಸಿಧು ಮನವಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − 14 =
Remember me
