ಬೆಂಗಳೂರು:ರಾಜ್ಯದಲ್ಲಿ ಈ ಬಾರಿಯ ಪ್ರವಾಹದಿಂದ ಒಟ್ಟಾರೆ 8,071 ಕೋಟಿ ರೂ. ನಷ್ಟವಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೋಮವಾರ ಕೇಂದ್ರ ಅಧ್ಯಯನ ತಂಡಕ್ಕೆ ಮಾಹಿತಿ ನೀಡಿದರು. ಹಾನಿ ಸಮೀಕ್ಷೆಗೆಂದು ಆಗಮಿಸಿರುವ ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯದ ಜಂಟಿ ಕಾರ್ಯದರ್ಶಿ ಕೆ.ವಿ.ಪ್ರತಾಪ್ ನೇತೃತ್ವದ ತಂಡ, ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಭೇಟಿಯಾಗಿ ಪ್ರವಾಹದಿಂದಾದ ನಷ್ಟದ ಮಾಹಿತಿ ಪಡೆಯಿತು. ರಾಜ್ಯದಲ್ಲಿ ಹಿಂದಿನ 2 ವರ್ಷವೂ ಭಾರಿ ಮಳೆ, ಪ್ರವಾಹ, ಭೂಕುಸಿತ ಉಂಟಾಗಿ 22 ಜಿಲ್ಲೆಗಳು ತತ್ತರಿಸಿದ್ದವು. ಈ ಬಾರಿ ಕರೊನಾ ಸಂಕಷ್ಟದ ನಡುವೆ ಪ್ರವಾಹ ಅಪ್ಪಳಿಸಿ 4.03 ಲಕ್ಷ ಹೆಕ್ಟೇರ್ ಬೆಳೆ, ರಸ್ತೆ, ಸೇತುವೆ, ವಿದ್ಯುತ್ ಕಂಬ, ಮನೆಗಳು, ಸರ್ಕಾರಿ ಕಟ್ಟಡಗಳಿಗೆ ಹಾನಿಯಾಗಿದೆ ಎಂದು ಬಿಎಸ್​ವೈ ವಿವರಿಸಿದರು.
ವಿಕೋಪವನ್ನು ತಡೆಯಬಲ್ಲ ಬಹುದೊಡ್ಡ ಮರು ನಿರ್ಮಾಣ ಯೋಜನೆಗಳಿಗೆ ಚಾಲನೆ ನೀಡಿ, ಕಳೆದ ವರ್ಷ 1,500 ಕೋಟಿ ರೂ. ವೆಚ್ಚ ಮಾಡಿದ್ದು, ಈ ಬಾರಿ 200 ಕೋಟಿ ರೂ. ಭರಿಸಲಿದೆ. ರಾಜ್ಯ ವಿಕೋಪ ಅಪಾಯ ನಿರ್ವಹಣಾ ನಿಧಿಯಡಿ 4 ಪ್ರತ್ಯೇಕ ನಿಧಿ ಗವಾಕ್ಷಿಗಳನ್ನು ಕೇಂದ್ರ ಸೃಜಿಸಿದ್ದು, ಕರೊನಾದಿಂದಾಗಿ ತಡೆಯುಂಟಾಗಿದೆ ಎಂದರು.
ರಾಜ್ಯ ವಿಕೋಪ ಪರಿಹಾರ ನಿಧಿಯಡಿ ಕರೊನಾ ಹಾಗೂ ಪ್ರವಾಹಕ್ಕಾಗಿ 460 ಕೋಟಿ ರೂ. ಬಿಡುಗಡೆಯಾಗಿದೆ. ಒಟ್ಟಾರೆ 8,071 ಕೋಟಿ ರೂ. ನಷ್ಟವಾಗಿದ್ದರೂ ರಾಜ್ಯ ವಿಕೋಪ ಪರಿಹಾರ ನಿಧಿಯ ನಿಯಮಾವಳಿ ಪ್ರಕಾರ 628.70 ಕೋಟಿ ರೂ. ಆಗುತ್ತದೆ. ಕರೊನಾ ಪ್ರಕರಣಗಳ ನಿಯಂತ್ರಣ ಹಾಗೂ ಪ್ರವಾಹ ಪರಿಸ್ಥಿತಿ ನಿಭಾಯಿಸಲು ಹೆಚ್ಚಿನ ನೆರವಿನ ಅಗತ್ಯವಿದೆ ಎಂದು ಕೋರಿದ ಬಿಎಸ್​ವೈ, ರಾಜ್ಯ ವಿಕೋಪ ಪರಿಹಾರ ನಿರ್ವಹಣಾ ಯೋಜನೆ 2020 ಅನ್ನು ಪ್ರಾಧಿಕಾರ ಅನುಮೋದಿಸಿದೆ. ಯೋಜನೆಯು ಅಲ್ಪಾವಧಿ, ಮಧ್ಯಮಾವಧಿ ಹಾಗೂ ದೀರ್ಘಾವಧಿ ಮರು ನಿರ್ಮಾಣ ಚಟುವಟಿಕೆಗಳನ್ನು ಹೊಂದಿದೆ ಎಂದು ತಿಳಿಸಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 3 =
Remember me
