ಹೊಸಕೋಟೆ:ಮಾವಿನಕಾಯಿ ಇಲ್ಲವೇ ತರಕಾರಿ ತುಂಬುವ ನೂರಾರು ಕ್ರೇಟ್​ಗಳನ್ನು ಹೊತ್ತು ಸಾಗುತ್ತಿದ್ದ ಟೆಂಪೋದಲ್ಲಿ 85 ಕೆಜಿ ಗಾಂಜಾ ಪತ್ತೆಯಾಗಿದೆ!
ಅಂತಾರಾಷ್ಟ್ರೀಯ ಮಾದಕ ವಸ್ತುಗಳ ವಿರೋಧಿ ದಿನವೇ ಬೃಹತ್ ಕಾರ್ಯಾಚರಣೆ ನಡೆಸಿದ ಹೊಸಕೋಟೆ ಪೊಲೀಸರು, ಅಕ್ರಮವಾಗಿ ಗಾಂಜಾ ಸಾಗಿಸುತ್ತಿದ್ದ ಮೂವರು ಆರೋಪಿಗಳನ್ನು ಮಾಲು ಸಮೇತ ಬಂಧಿಸಿದ್ದಾರೆ.ಇದನ್ನೂ ಓದಿರಿಕಪ್ಪು-ಬಿಳುಪು ಟಿವಿ ಮಾರಾಟ ಮಾಡಿದ್ರೆ ಕೋಟಿ ಹಣ ಸಿಗುತ್ತೆ!
ಆಂಧ್ರಪ್ರದೇಶ ಮೂಲದ ರಮೇಶ್(30), ಸೀನು(25) ಮತ್ತು ವಿಕ್ರಂ ಅಹಮ್ಮದ್ ಖಾನ್ (25) ಬಂಧಿತರು. ಇವರು ತರಕಾರಿ-ಹಣ್ಣು ಸಾಗಣೆ ಸೋಗಿನಲ್ಲಿ ಟೆಂಪೋದಲ್ಲಿ ಖಾಲಿ ಕ್ರೇಟ್​ಗಳನ್ನು ತುಂಬಿಕೊಂಡು, ಅದರ ನಡುವೆ ಯಾರಿಗೂ ಅನುಮಾನ ಬರದಂತೆ ಎರಡ್ಮೂರು ಕೆಜಿ ತೂಕದಷ್ಟು ಚಿಕ್ಕಚಿಕ್ಕ ಪೊಟ್ಟಣದಂತೆ 85 ಕೆಜಿ ಗಾಂಜಾವನ್ನು ತರುತ್ತಿದ್ದರು.
ಆಂಧ್ರದಿಂದ ಬೆಂಗಳೂರಿನ ಎಲೆಕ್ಟ್ರಾನಿಕ್​ ಸಿಟಿಗೆ ಗಾಂಜಾ ಸಾಗಿಸುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಹೊಸಕೋಟೆಯ ಎಂವಿಜೆ ಕಾಲೇಜಿನ ಬಳಿ ಕಾರ್ಯಾಚರಣೆ ನಡೆಸಿದ ಪೊಲೀಸರು ಗಾಂಜಾವನ್ನು ವಶಕ್ಕೆ ಪಡೆದಿದ್ದಾರೆ.
https://www.facebook.com/VVani4U/videos/3128740903877985/
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven − 5 =
Remember me
