ಬೆಂಗಳೂರು:ರಾಜ್ಯದಲ್ಲಿ ಕರೊನಾ ಏರುಗತಿಯಲ್ಲಿಯೇ ಸಾಗಿದೆ. ಕಳೆದ ನಾಲ್ಕೈದು ದಿನಗಳಿಂದ ಹೊಸದಾಗಿ ಸೋಂಕಿಗೆ ಒಳಗಾಗುತ್ತಿರುವವರ ಸಂಖ್ಯೆ ಸತತವಾಗಿ 8 ಸಾವಿರಕ್ಕಿಂತಲೂ ಅಧಿಕವಾಗಿದೆ. ಶುಕ್ರವಾರ ಒಂದೇ ದಿನ 8,852 ಜನರು ಸೋಮಕಿಗೆ ಒಳಗಾಗಿದ್ದಾರೆ. ಆ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 3,35,928ಕ್ಕೆ ಏರಿದೆ.
ಅಂತೆಯೇ ಆಸ್ಪತ್ರೆಯಿಂದ ಬಿಡುಗಡೆಯಾದವರು 7,101 ಆಗಿದೆ. ಚೇತರಿಕೆ ಕಂಡ ಒಟ್ಟು ಜನರ ಸಂಖ್ಯೆ 2,42,229 ಆಗಿದೆ ಎಂದು ಆರೋಗ್ಯ ಇಲಾಖೆ ಪ್ರಕಟಿಸಿರುವ ವರದಿಯಲ್ಲಿ ಮಾಹಿತಿ ನೀಡಲಾಗಿದೆ.
ಇದನ್ನೂ ಓದಿ;ಭಾರತದಿಂದ ಕರೊನಾ ಲಸಿಕೆ ಪಡೆಯುವ ಮೊದಲ ರಾಷ್ಟ್ರ ಬಾಂಗ್ಲಾ; ಪುಣೆ ಕಂಪನಿಯಲ್ಲಿ ಬಂಡವಾಳ ಹೂಡಿದ ಬೆಕ್ಸಿಮ್ಕೋ
ಸಾವಿನ ಸಂಖ್ಯೆ ಕೂಡ ನೂರು ದಾಟಿದ್ದು, 106 ಜನರು ಮೃತಪಡುವುದರೊಂದಿಗೆ ಈವರೆಗೆ 5,589 ಜನರು ಕೋವಿಡ್​ಗೆ ಬಲಿಯಾಗಿದ್ದಾರೆ. ಸದ್ಯ 760 ಜನರ ಸ್ಥಿತಿ ಗಂಭೀರವಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇನ್ನು, ರಾಜಧಾನಿಯಲ್ಲಿ 2,821 ಜನರು ಹೊಸದಾಗಿ ಸೋಂಕಿಗೆ ಒಳಗಾಗಿದ್ದಾರೆ. ಬೆಂಗಳೂರಿನಲ್ಲಿರುವ ಒಟ್ಟು ಕೋವಿಡ್​ ರೋಗಿಗಳ ಸಂಖ್ಯೆ 1,27,263ಕ್ಕೆ ತಲುಪಿದೆ. ಶುಕ್ರವಾರ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆದವರ ಸಂಖ್ಯೆ 2,406 ಆಗಿದ್ದರೆ, ಒಟ್ಟು ಗುಣವಾದವರು 87,621. ಇನ್ನು 27 ಜನರು ಸಾವಿಗೀಡಾಗುವ ಮೂಲಕ 1,938 ಜನರು ಕರೊನಾದಿಂದ ಮೃತಪಟ್ಟಂತಾಗಿದೆ.
ಇದನ್ನೂ ಓದಿ;ಗಾಳಿಯಲ್ಲಿರುವ ಕರೊನಾ ವೈರಸ್​ ಪತ್ತೆಹಚ್ಚುವ ಸಾಧನ ಆವಿಷ್ಕಾರ; 10-15 ಸೆಕೆಂಡ್​ಗಳಲ್ಲಿ ಫಲಿತಾಂಶ
ರಾಜಧಾನಿ ಮಾತ್ರವಲ್ಲದೇ, ಜಿಲ್ಲೆಗಳಲ್ಲೂ ಕೂಡ ಕರೊನಾ ಸೋಂಕಿತರ ಸಂಖ್ಯೆ ಭಾರಿ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿದೆ. ಈ ಕಾರಣದಿಂದಾಗಿಯೇ, ಕೋವಿಡ್​ ರೋಗಿಗಳ ಸಂಖ್ಯೆ ಕೇಳಗಿಳಿಯುತ್ತಲೇ ಇಲ್ಲ ಎಂದು ವಿಶ್ಲೇಷಿಸಲಾಗಿದೆ.
ಜಿಲ್ಲಾವಾರು ಕೋವಿಡ್​ ಅಂಕಿ-ಅಂಶ

9 ತಾಸಿನ ನಿದ್ದೆಯೇ ಉದ್ಯೋಗ; ಲಕ್ಷ ರೂ. ಸಂಬಳ; ಷರತ್ತುಗಳು ಅನ್ವಯ….!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 4 =
Remember me
