ಬೆಂಗಳೂರು:ಸರ್ಕಾರದ ಬೊಕ್ಕಸಕ್ಕೆ ಹೆಚ್ಚು ಆದಾಯ ತಂದುಕೊಡುವ ಅಬಕಾರಿ ಇಲಾಖೆಯ ನೌಕರರಿಗೆ ಖಜಾನೆ 2ರ ತಂತ್ರಾಂಶ ಗೊಂದಲ ಹಾಗೂ ವೇತನ ಆಗವಷ್ಟೂ ಬಜೆಟ್ ಬಿಡುಗಡೆ ಆಗದ ಹಿನ್ನೆಲೆಯಲ್ಲಿ ಕಳೆದ 8 ತಿಂಗಳಿಂದ ವೇತನ ಆಗಿಲ್ಲ. ಇದರಿಂದ ಬಹಳಷ್ಟು ನೌಕರರು ಆರ್ಥಿಕ ನಿರ್ವಹಣೆಗೆ ಪರದಾಡುವಂತಾಗಿದೆ.
ಸರ್ಕಾರವು 2020-21 ಸಾಲಿನಲ್ಲಿ ಇಲಾಖೆಗೆ 22,700 ಕೋಟಿ ರೂ. ಆದಾಯ ಗುರಿ ನೀಡಿದೆ. ಪ್ರತಿ ತಿಂಗಳು ಸರ್ಕಾರಕ್ಕೆ ಸರಾಸರಿ 1,800 ರಿಂದ 2,000 ಕೋಟಿ ರೂ. ಮದ್ಯ ಮಾರಾಟದಿಂದ ಆದಾಯ ಬರುತ್ತಿದೆ. ಆದರೆ, ಇಲಾಖೆಯಲ್ಲಿ ಕೆಲಸ ಮಾಡುವ ನೌಕರರಿಗೆ ವೇತನ ನೀಡಲು ಬಜೆಟ್ ಸಮಸ್ಯೆ ಎದುರಾಗಿದೆ. ಜತೆಗೆ, ಖಜಾನೆ 2ರ ತಂತ್ರಾಂಶ ಗೊಂದಲ ಹಾಗೂ ಸರ್ವರ್ ಸಮಸ್ಯೆಯಿಂದ ವೇತನ ವಿಳಂಬವಾಗುತ್ತಿದೆ.
ಮಾನವ ಸಂಪನ್ಮೂಲ ನಿರ್ವಹಣೆ ವ್ಯವಸ್ಥೆಯನ್ನು (ಎಚ್‌ಆರ್‌ಎಂಎಸ್) ಖಜಾನೆ-1ರಿಂದ ಖಜಾನೆ -2ರ ತಂತ್ರಾಂಶಕ್ಕೆ ಈಗಾಗಲೇ ವರ್ಗಾಯಿಸಲಾಗಿದೆ. ಈ ಕಾರಣಕ್ಕೆ ಸಮಸ್ಯೆ ಉದ್ಬವಿಸಿದೆ. ಇದಕ್ಕೂ ಮುನ್ನ ಖಜಾನೆ 1ರಲ್ಲಿ ಬಿಲ್‌ಗಳನ್ನು ತಯಾರಿಸಿ ಖಜಾನೆಗೆ ಸಲ್ಲಿಸಿದ್ದಾಗ ವೇತನ ಆಗುತ್ತಿತ್ತು. ಆದರೆ ಇದೀಗ, ಬಿಲ್ ತಯಾರಿಕೆ, ಬಿಲ್‌ಗಳನ್ನು ಖಜಾನೆಗೆ ಸಲ್ಲಿಸುವುದು, ಜಮೆ, ಸಂದಾಯ, ಠೇವಣಿ ನಿರ್ವಹಣೆಯನ್ನು ಖಜಾನೆ2 ತಂತ್ರಾಂಶದ ಮೂಲಕವೇ ನಿರ್ವಹಿಸಲಾಗುತ್ತಿದೆ. ಆದ್ದರಿಂದ, ಸಿಬ್ಬಂದಿಗೆ ವೇತನ ವಿಳಂಬವಾಗುತ್ತಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 + 18 =
Remember me
