ಬೆಂಗಳೂರು:ಆಗಸ್ಟ್ 23 ರಿಂದ 9 ಮತ್ತು 10ನೇ ತರಗತಿಗಳನ್ನು ಭೌತಿಕವಾಗಿ ನಡೆಸಲು ರಾಜ್ಯ ಸರ್ಕಾರದ ಅಧಿಕೃತ ಆದೇಶ ಹೊರಬಿದ್ದಿದೆ. ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಪ್ರೌಢಶಾಲೆಗಳಲ್ಲಿ ಪ್ರತಿ ದಿನ ಬೆಳಗಿನ ಹೊತ್ತಿನಲ್ಲಿ ಅರ್ಧ ದಿನ ಭೌತಿಕ ತರಗತಿಗಳನ್ನು ನಡೆಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಆದೇಶಿಸಿದೆ.
ಆದಾಗ್ಯೂ ಭೌತಿಕವಾಗಿ ತರಗತಿಗಳಿಗೆ ಹಾಜರಾಗುವುದು ಕಡ್ಡಾಯವಲ್ಲ. ಆನ್​ಲೈನ್ ಅಥವಾ ಪರ್ಯಾಯ ವಿಧಾನದಲ್ಲೂ ವಿದ್ಯಾರ್ಥಿಗಳು ಹಾಜರಾಗಬಹುದು. ಶಾಲೆಗೆ ಹಾಜರಾಗಲು ಬಯಸದ ವಿದ್ಯಾರ್ಥಿಗಳಿಗೆ ಶಾಲೆಗಳು ಈಗ ಅನುಸರಿಸುತ್ತಿರುವ ಪರ್ಯಾಯ ಕಲಿಕೆ ವಿಧಾನಗಳನ್ನು ಮುಂದುವರಿಸಿಕೊಂಡು ಹೋಗಬೇಕು ಎಂದು ಆದೇಶದಲ್ಲಿ ಹೇಳಲಾಗಿದೆ.
ಇದನ್ನೂ ಓದಿ:ಶಾಲೆ-ಕಾಲೇಜು ಆರಂಭ: ಶಿಕ್ಷಕರಿಗೆ ಲಸಿಕೆ, ಮಕ್ಕಳಿಗೆ ಮಾಸ್ಕ್​
ಮಕ್ಕಳು ಭೌತಿಕವಾಗಿ ಶಾಲೆಗೆ ಹಾಜರಾಗುವಾಗ ಪೋಷಕರ ಅನುಮತಿ ಪತ್ರ ತರುವುದು ಕಡ್ಡಾಯವಾಗಿದೆ. ಈ ಪತ್ರದಲ್ಲಿ ಮಗುವಿಗೆ ಕರೊನಾ ಸೋಂಕಿನ ಯಾವುದೇ ಲಕ್ಷಣಗಳಿಲ್ಲ ಎಂದು ದೃಢೀಕರಿಸಿರಬೇಕು. ಮಕ್ಕಳು ಅಗತ್ಯಕ್ಕೆ ತಕ್ಕಂತೆ ಉಪಾಹಾರ ಮತ್ತು ನೀರನ್ನು ಮನೆಯಿಂದಲೇ ತರಬೇಕು. ಶಾಲೆಗಳಲ್ಲಿ ಮಕ್ಕಳಿಗೆ ಕುಡಿಯಲು ಶುದ್ಧೀಕರಿಸಿದ ಬಿಸಿನೀರಿನ ವ್ಯವಸ್ಥೆ ಮಾಡಬೇಕು ಎಂದಿದೆ.
ವೇಳಾಪಟ್ಟಿ:ಶಾಲೆಗಳ ಕೊಠಡಿ, ಶಿಕ್ಷಕರ ಸಂಖ್ಯೆ ಮತ್ತು ವಿದ್ಯಾರ್ಥಿಗಳ ಸಂಖ್ಯೆಯನ್ನು ಆಧರಿಸಿ, ಮಕ್ಕಳ ನಡುವೆ ಭೌತಿಕ ಅಂತರ ಕಾಪಾಡಿಕೊಳ್ಳುವ ಉದ್ದೇಶದಿಂದ 15 ರಿಂದ 20 ಮಕ್ಕಳ ತಂಡಗಳನ್ನು ಮಾಡಿ ತರಗತಿಗಳನ್ನು ನಡೆಸಬೇಕು. ಸೋಮವಾರದಿಂದ ಶುಕ್ರವಾರ ಬೆಳಿಗ್ಗೆ 10 ರಿಂದ 1.30 ರವರೆಗೆ ತರಗತಿಗಳನ್ನು ನಡೆಸಬೇಕು. ಶನಿವಾರದಂದು 10 ರಿಂದ 12.50 ರವರೆಗೆ ನಡೆಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ:ಒಲಿಂಪಿಕ್ಸ್​ ಪದಕ ಗೆದ್ದ ಸಿಂಧುಗೆ ಐಸ್ ​ಕ್ರೀಂ ಕೊಡಿಸಿದ ಪ್ರಧಾನಿ ಮೋದಿ!
ಈ ನಿಟ್ಟಿನಲ್ಲಿ ಶಾಲೆಗಳಲ್ಲಿ ಅನುಸರಿಸಬೇಕಾದ ಪ್ರಮಾಣಿತ ಕಾರ್ಯಾಚರಣೆ ವಿಧಾನ(ಎಸ್​ಒಪಿ)ಯನ್ನು ಕೂಡ ಸರ್ಕಾರ ವಿವರವಾಗಿ ಹೊರಡಿಸಿದೆ. 9ನೇ ಮತ್ತು 10ನೇ ತರಗತಿಗಳನ್ನು ನಡೆಸಲು ಮಾದರಿ ವೇಳಾಪಟ್ಟಿಯನ್ನು ಸಹ ನೀಡಿರುವ ಶಿಕ್ಷಣ ಇಲಾಖೆ, ಮಧ್ಯಾಹ್ನದ ನಂತರ ಶಿಕ್ಷಕರು 8ನೇ ತರಗತಿಯ ವಿದ್ಯಾರ್ಥಿಗಳಿಗೆ ಆನ್​ಲೈನ್​ ಅಥವಾ ಪರ್ಯಾಯ ವಿಧಾನದ ತರಗತಿಗಳನ್ನು ನಡೆಸಬೇಕು ಎಂದು ಹೇಳಿದೆ.



ಶಾಲೆ ಶುರು, ಬೆಂಚಿಗೊಬ್ರು ಅಥವಾ ಇಬ್ರು; ಆ ಕಡೆಯಿಂದ ಬಂದು ಈ ಕಡೆಯಿಂದ ಹೋಗ್ಬೇಕು, ಕೆಮ್ಮಿದ್ರೆ ಮನೆಗೆ: ಇಲ್ಲಿದೆ ಎಸ್​ಒಪಿ ಡಿಟೇಲ್ಸ್​..
VIDEO| ಗದ್ದೆಗಿಳಿದು ಭತ್ತ ನಾಟಿ ಮಾಡಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ!
ಮಗುವಿನ ಗುಲ್ಲಕ ಒಡೆದು ದಂಡ ಕಟ್ಟಲು ಮುಂದಾದ ಆಟೋ ಚಾಲಕ! ಪೊಲೀಸರು ಮಾಡಿದ್ದೇನು..?!


ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಟ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
Sign in to your account
Please enter an answer in digits:five + 9 =
Remember me
