ಬೆಂಗಳೂರು:ಮಂಡ್ಯ ಉಪ ನೋಂದಣಿ ಕಚೇರಿಯಲ್ಲಿ ಚಲನ್‌ಗಳನ್ನು ತಿದ್ದಿ ಸರ್ಕಾರಕ್ಕೆ ನಷ್ಟ ಉಂಟುಮಾಡಿದ್ದ ಪ್ರಕರಣದಲ್ಲಿ ಐವರು ಸಬ್ ರಿಜಿಸ್ಟ್ರಾರ್ ಸೇರಿ 9 ಮಂದಿಯನ್ನು ಸೇವೆಯಿಂದ ವಜಾ ಮಾಡಿ ಸರ್ಕಾರ ಆದೇಶಿಸಿದೆ.
ತುರುವೇಕೆರೆ ಉಪನೋಂದಣಾಧಿಕಾರಿ ಎಸ್.ಎನ್.ಪ್ರಭಾ, ನಂಜನಗೂಡಿನ ಎಚ್.ಎಸ್. ಚಲುವರಾಜು, ಸಿಂಧನೂರಿನ ಎಂ. ಉಮೇಶ್, ಶಿರಾದ ಸಿ.ವಿಜಯ ಹಾಗೂ ಮಳವಳ್ಳಿ ಸಬ್ ರಿಜಿಸ್ಟ್ರಾರ್ ಕಚೇರಿಯ ದ್ವಿತೀಯ ದರ್ಜೆ ಸಹಾಯಕ ಶ್ರೀನಿವಾಸಲು, ಶ್ರೀರಂಗಪಟ್ಟಣದ ಎಸ್‌ಡಿಎ ಎ.ಸಿ. ಸುನಂದ, ಮಳವಳ್ಳಿಯ ಎಸ್‌ಡಿಎ ಲೀಲಾವತಿ ಸೇವೆಯಿಂದ ವಜಾಗೊಂಡವರು. ಹಿರಿಯ ಉಪನೋಂದಣಾಧಿಕಾರಿ ಪಿ.ವಿ. ವೀರರಾಜೇಅರಸ್ ನಿಧನರಾಗಿದ್ದು, ಉಮೇಶ್, ವಿಜಯ, ಶ್ರೀನಿವಾಸಲು ನಿವೃತ್ತಿ ಆಗಿದ್ದಾರೆ.
ಇವರು 2005-06ರಲ್ಲಿ ಸೇವೆ ಸಲ್ಲಿಸುತ್ತಿದ್ದಾಗ ಚಲನ್‌ಗಳನ್ನು ತಿದ್ದಿ ಸರ್ಕಾರಕ್ಕೆ ನಷ್ಟ ಮಾಡಿದ್ದ ಆರೋಪಕ್ಕೆ ಗುರಿಯಾಗಿದ್ದರು. ಆದರೆ, ಇದನ್ನು ನಿರಾಕರಿಸಿದ ಕಾರಣಕ್ಕೆ ನಿವೃತ್ತ ನ್ಯಾಯಾಧೀಶರಾದ ಬಿ.ರಂಗಸ್ವಾಮಿ ಅವರನ್ನು ವಿಚಾರಣಾಧಿಕಾರಿ ನೇಮಕ ಮಾಡಲಾಗಿತ್ತು. ವಿಚಾರಣೆ ವೇಳೆ ಪ್ರಭಾ 77 ಪ್ರಕರಣಗಳಲ್ಲಿ 6.36 ಲಕ್ಷ ರೂ., ಚಲುವರಾಜು 13 ಪ್ರಕರಣಗಳಲ್ಲಿ 1.78 ಲಕ್ಷ ರೂ., ಉಮೇಶ್ 4 ಪ್ರಕರಣಗಳಲ್ಲಿ 42 ಸಾವಿರ ರೂ., ವಿಜಯ 9 ಕೇಸಿನಲ್ಲಿ 1.01 ಲಕ್ಷ ರೂ., ಶ್ರೀನಿವಾಸಲು 2 ಕೇಸಿನಲ್ಲಿ 5 ಸಾವಿರ ರೂ., ಸುನಂದ 8 ಕೇಸಿನಲ್ಲಿ 62 ಸಾವಿರ ರೂ. ಹಾಗೂ ಲೀಲಾವತಿ 40 ಪ್ರಕರಣದಲ್ಲಿ 5.29 ಲಕ್ಷ ರೂಪಾಯಿಯನ್ನು ಸರ್ಕಾರಕ್ಕೆ ನಷ್ಟ ಮಾಡಿರುವುದು ಬೆಳಕಿಗೆ ಬಂದಿತ್ತು.
ಇದನ್ನೂ ಓದಿ:ಗಂಡ ಮಲಗಿದ್ದಾಗಲೇ ಮನೆಯೊಳಗೆ ನಡೆಯಿತು ದುರಂತ; ಬಾಗಿಲು ಒಡೆದು ಕೋಣೆಗೆ ಹೊಕ್ಕವನಿಗೆ ತೀವ್ರ ಆಘಾತ!
ಇದನ್ನು ಪ್ರಶ್ನಿಸಿ ನೋಟಿಸ್ ಜಾರಿ ಮಾಡಿದಾಗ ಆರೋಪಿಗಳು ನಿರಾಕರಿಸಿದ್ದರು. ಈ ಕುರಿತು ಮಂಡ್ಯ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಕೇಸ್ ದಾಖಲಾಗಿತ್ತು. ಈ ನಡುವೆ ಉಮೇಶ್, ವಿಜಯ, ಶ್ರೀನಿವಾಸಲು ನಿವೃತ್ತಿ ಆಗಿದ್ದಾರೆ. ಪ್ರಕರಣದ ವಾದ-ಪ್ರತಿವಾದ ಆಲಿಸಿದ ಮಂಡ್ಯ ಪ್ರಿನ್ಸಿಪಲ್ ಸಿವಿಲ್ ನ್ಯಾಯಾಲಯ ಮತ್ತು ಜೆಎಂಎಫ್​ಸಿ ಕೋರ್ಟ್, ಸೇವೆಯಲ್ಲಿ ಇರುವ ಪ್ರಭಾ, ಚಲುವರಾಜು, ಸುನಂದ, ಲೀಲಾವತಿಗೆ 2 ವರ್ಷ ಶಿಕ್ಷೆ ವಿಧಿಸಿ ಆದೇಶಿಸಿತ್ತು. ನ್ಯಾಯಾಲಯದಲ್ಲಿ ಅಧಿಕಾರಿ, ನೌಕರರನ್ನು ಅಪರಾಧಿ ಎಂದು ಶಿಕ್ಷೆಯಾದ ಕಾರಣ ಅವರನ್ನು ಸೇವೆಯಿಂದ ವಜಾ ಮಾಡಿರುವುದಾಗಿ ನೋಂದಣಿ ಮತ್ತು ಮುದ್ರಾಂಕ ಇಲಾಖೆ ಆಯುಕ್ತ ಕೆ.ಪಿ.ಮೋಹನ್ ರಾಜ್ ಆದೇಶಿಸಿದ್ದಾರೆ.
ಕರ್ನಾಟಕದ ‘ಸಿಂಗಂ’ ಕೆ. ಅಣ್ಣಾಮಲೈ ಈಗ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ

ವಾಹನ ಸವಾರರೇ ಗಮನಿಸಿ.. ಆರು ತಿಂಗಳ ಬಳಿಕ ಆ ದಾಖಲೆ ಸಿಗಲ್ಲ…

ಪೊಲೀಸರು ಡಿಜಿಟಲ್ ದಾಖಲೆ ತಿರಸ್ಕರಿಸುವಂತಿಲ್ಲ: ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ಸೂಚನೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 2 =
Remember me
