ಬೆಳಗಾವಿ:ಚುನಾವಣೆ ಘೋಷಣೆಗೂ ಮುನ್ನವೇ ಅಖಾಡಕ್ಕಿಳಿದ ಪೋಲೀಸರು ದಾಖಲೆ ಇಲ್ಲದೇ ಬೆಳಗಾವಿಯಲ್ಲಿ ಸಾಗಿಸುತ್ತಿದ್ದ ಹಣ ಹಾಗೂ ಸದಲಗಾ ದತವಾಡ ಚೆಕ್ ಪೋಸ್ಟ್‌ನಲ್ಲಿ ಸೀರೆಗಳ ಜಪ್ತಿ ಪಡೆಯಲಾಗಿದೆ.
ಬೆಳಗಾವಿ ನಗರದ ಹೊರ ವಲಯದ ಕಣಬರಗಿ ಚೆಕ್ ಪೋಸ್ಟ್​​ನಲ್ಲಿ ದಾಖಲೆ ಇಲ್ಲದೇ ಸಾಗಿಸುತ್ತಿದ್ದ ಒಂಬತ್ತು ಲಕ್ಷ ರೂ. ನಗದು ವಶಕ್ಕೆ ಪಡೆಯಲಾಗಿದೆ. ಬೆಳಗಾವಿ ನಗರದಿಂದ ಗೋಕಾಕ್ ತಾಲೂಕಿನ‌ ಅಂಕಲಗಿಗೆ ಹೊರಟ್ಟಿದ್ದ ಕಾರು ಇದಾಗಿತ್ತು. ಚೆಕ್ ಪೋಸ್ಟ್​​ನಲ್ಲಿ ಪರಿಶೀಲನೆ ವೇಳೆ ನಗದು ಪತ್ತೆಯಾಗಿದ್ದು, ಓರ್ವವನ ಬಂಧಿಸಿ ಮಾಳಮಾರುತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಇದನ್ನೂ ಓದಿ:ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಆಗ್ರಹ; ಸಿಎಂ ಬೊಮ್ಮಾಯಿಗೆ ಪತ್ರ
ಮತದಾರಿಗೆ ಹಂಚಲು ಕೊಂಡೊಯ್ಯುತ್ತಿದ್ದ ಸೀರೆಗಳ ಜಪ್ತಿ:ಚಿಕ್ಕೋಡಿಯ ಸದಲಗಾ ದತವಾಡ ಚೆಕ್ ಪೋಸ್ಟ್​​ನಲ್ಲಿ ಸೀರೆಗಳನ್ನು ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಸುಮಾರು 16 ಲಕ್ಷ ಬೆಲೆ ಬಾಳುವ ಸೀರೆಗಳನ್ನು ವಶಕ್ಕೆ ಪಡೆಯಲಾಗಿದೆ. ರಾಯಬಾಗ ಮತಕ್ಷೇತ್ರದಲ್ಲಿ ಹಂಚಿಕೆ ಮಾಡಲು ಕೊಂಡೊಯ್ಯುತ್ತಿದ್ದ ಸೀರೆಗಳು ಎನ್ನಲಾಗಿದೆ. ವಾಹನ ಚಾಲಕ ಹಾಗೂ ಕ್ಲೀನರ್ ವಾಹನವನ್ನೂ ವಶಕ್ಕೆ ಪಡೆದ ಪೊಲೀಸರು. ಸದಲಗಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಇನ್ಮುಂದೆ ಬಿಸಿಯೂಟದೊಂದಿಗೆ ಸಿಗಲಿದೆ ರಾಗಿ ಮಾಲ್ಟ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten + 10 =
Remember me
