ಯಾದಗಿರಿ:ಏನೂ ಅರಿಯದ ಪುಟ್ಟ ಕಂದಮ್ಮನನ್ನು ಕುಡಿದ ಅಮಲಿನಲ್ಲಿ ಪಾಪಿ ತಂದೆಯೊಬ್ಬ ಕತ್ತು ಹಿಸುಕಿ ಕೊಂದ ಅಮಾನುಷ ಕೃತ್ಯ ಗುರಮಠಕಲ್ ತಾಲೂಕಿನ ಬದ್ದೆಪಲ್ಲಿ‌‌ ಗ್ರಾಮದಲ್ಲಿ ನಡೆದಿದೆ.
9 ತಿಂಗಳ ಮಗು ತನುಶ್ರೀ ಕೊಲೆಯಾದ ಕಂದಮ್ಮ. ಈ ಮಗುವಿನ ತಂದೆ ರಾಮು ಕೊಲೆಗಾರ. ಕುಡಿತ ಚಟ ಅಂಟಿಸಿಕೊಂಡಿದ್ದ ರಾಮು, ಎಂದಿನಂತೆ ಬುಧವಾರವೂ ಕುಡಿದುಕೊಂಡು ಮನೆಗೆ ಹೋಗಿದ್ದ. ಮಗುವನ್ನು ನೋಡಿಕೊಳ್ಳುತ್ತೇನೆ, ನೀನು ಹತ್ತಿ ಬಿಡಿಸಲು ಹೋಗು ಎಂದು ಹೆಂಡತಿಯನ್ನು ಕಳಿಸಿದ್ದ. ಮಗು ಎಚ್ಚರವಾಗಿ ಜೋರಾಗಿ ಅಳುತ್ತಿತ್ತು. ಮಗುವನ್ನು ಸಂತೈಸಲು ಪ್ರಯತ್ನಿಸಿದ್ದಾನೆ. ಮಗು ಅಳುವುದನ್ನು ನಿಲ್ಲಿಸದ ಕಾರಣ ನಶೆಯಲ್ಲಿ ಸಣ್ಣ ಹಗ್ಗವನ್ನ ಕೊರಳಿಗೆ ಬಿಗಿದು ಉಸಿರು ನಿಲ್ಲಿಸಿದ್ದಾನೆ.
ನಂತರ ಮಗು ನಿದ್ದೆ ಮಾಡುತ್ತಿದೆ ಎಂದು ಹೇಳಿ ಪಕ್ಕದ ಮನೆಯ ಅಜ್ಜಿಯ ಕೈಯಲ್ಲಿ ಶವ ಕೊಟ್ಟು, ಜಮೀನಿನತ್ತ ಹೋಗಿದ್ದಾನೆ. ಮಗು ಮಲಗಿದೆಯಾ? ಎಂದು ಪತ್ನಿ ಕೇಳಿದಾಗ, ತಾನು ಮಾಡಿದ ಕೃತ್ಯದ ಬಗ್ಗೆ ಪತ್ನಿಗೆ ವಿವರಿಸುತ್ತಾ, ಅಜ್ಜಿ ಕೈಗೆ ಕೊಟ್ಟು ಬಂದಿದ್ದಾಗಿ ತಿಳಿಸಿದ್ದಾನೆ.
ಇದರಿಂದ ದಿಗ್ಭ್ರಮೆಗೊಂಡ ಪತ್ನಿ, ಮನೆಗೆ ಓಡಿ ಹೋಗಿ ನೋಡಿದಾಗ ಮಗು ಸತ್ತಿರುವುದು ಗೊತ್ತಾಗಿದೆ. ಹೆಂಡತಿ‌ ನೀಡಿದ‌ ದೂರಿನ ಮೇರೆಗೆ ಸೈದಾಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ರಾಮುನನ್ನು ಬಂಧಿಸಿದ್ದಾರೆ.
ರಾಮ-ಕೃಷ್ಣ ಇತಿಹಾಸ ಪುರುಷರಲ್ಲ! ಮತ್ತೊಂದು ವಿವಾದ ಸೃಷ್ಟಿಸಿದ ನಿವೃತ್ತ ನ್ಯಾ. ವಸಂತ ಮುಳಸಾವಳಗಿ

ಶಾಮಿಯಾನದ ಕಂಬ ಮುಟ್ಟಿದ ವಿದ್ಯಾರ್ಥಿ ಸಾವು: ಈಜು ಸ್ಪರ್ಧೆಗೆ ರಾಮನಗರಕ್ಕೆ ಆಗಮಿಸಿದ್ದವ ದುರಂತ ಅಂತ್ಯ

ಯುವಕನಿಗೆ ಮದ್ವೆ ಆಸೆ ಹುಟ್ಟಿಸಿ ಹಾಸನದ ಮಹಿಳೆ ಹೀಗಾ ಮಾಡೋದು? ನನ್ನಾಕೆ ಡಿಸಿ… ಅಂತ ಖುಷಿಯಲ್ಲಿದ್ದವನಿಗೆ ಭಾರೀ ಸಂಕಷ್ಟ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve − 3 =
Remember me
