ಶ್ರೀಕಾಂತ್ ಶೇಷಾದ್ರಿ ಬೆಂಗಳೂರು
ರಾಜ್ಯ ವಿಪತ್ತು ನಿಧಿಯಿಂದ ಸರ್ಕಾರ ಮೂರು ರೀತಿಯಲ್ಲಿ ಹಣ ಬಳಸಿಕೊಳ್ಳುತ್ತಿದ್ದು, ಈ ವರೆಗೆ ಬರೋಬ್ಬರಿ 190 ಕೋಟಿ ರೂ. ವೆಚ್ಚ ಮಾಡಿದೆ. ಹಾಗೇ ಒಟ್ಟು 255 ಕೋಟಿ ರೂ. ವೆಚ್ಚಕ್ಕೆ ಅನುಮೋದನೆಯನ್ನೂ ನೀಡಿದೆ.
ಪುನರ್ವಸತಿ ಕೇಂದ್ರ ನಿರ್ವಹಣೆ, ಕ್ವಾರಂಟೈನ್- ಕಂಟೇನ್ಮೆಂಟ್ ಝೋನ್ ವ್ಯವಸ್ಥೆಗೆ ಹಾಗೂ ಕೋವಿಡ್ ಆಸ್ಪತ್ರೆಗಳ ಸೌಲಭ್ಯಗಳ ಉನ್ನತೀಕರಣಕ್ಕೆ ರಾಜ್ಯ ವಿಪತ್ತು ನಿಧಿ ಹಣವನ್ನು ಆದ್ಯತೆ ಮೇಲೆ ಬಳಸಿಕೊಳ್ಳಲಾಗುತ್ತಿದೆ.
ಕರೊನಾ ಸೋಂಕು ಹಿನ್ನೆಲೆಯಲ್ಲಿ ಈ 3 ಸಂಗತಿಗಳು ಬಹಳ ಪ್ರಾಮುಖ್ಯತೆ ಪಡೆದುಕೊಳ್ಳುತ್ತವೆ. ಸಂಕಷ್ಟದಲ್ಲಿ ಇರುವವರು ಉಪವಾಸ ಬೀಳದಂತೆ ಊಟ-ದಿನಸಿ ವಿತರಿಸುವುದು, ಕ್ವಾರಂಟೈನ್ ಮಾಡಬೇಕಾದವರಿಗೆ ಅಗತ್ಯ ಸೌಲಭ್ಯ ಕಲ್ಪಿಸುವುದು, ಕಂಟೇನ್​ವೆುಂಟ್ ವ್ಯವಸ್ಥೆ ಹಾಗೂ ಆಸ್ಪತ್ರೆಗಳಲ್ಲಿ ಅಗತ್ಯ ಪರಿಕರ ಖರೀದಿಸುವುದು ಮುಖ್ಯ. ಈ ನಿಟ್ಟಿನಲ್ಲಿ ಹಣ ಬಳಸಿಕೊಳ್ಳಲಾಗಿದೆ ಎಂಬುದು ಕಂದಾಯ ಇಲಾಖೆ (ವಿಪತ್ತು ನಿರ್ವಹಣೆ) ಮಾಹಿತಿಯಾಗಿದೆ.
ಇದನ್ನೂ ಓದಿಕೆ.ಎನ್.ರಾಜಣ್ಣ, ನಾನೂ ಕೂಡಿಕೊಂಡು ಮೈತ್ರಿ ಸರ್ಕಾರ ಪತನ ಮಾಡಿದೆವು
ಕರೊನಾ ಆರಂಭದಿಂದ ಈ ವರೆಗೆ ರಾಜ್ಯಾದ್ಯಂತ 4303 ಪರಿಹಾರ ಕೇಂದ್ರಗಳನ್ನು ಗುರುತಿಸಲಾಗಿತ್ತು. ಪ್ರಸ್ತುತ 3900 ಪರಿಹಾರ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಸರ್ಕಾರದ ಕಡೆಯಿಂದಲೇ ಪರಿಹಾರ ಕೇಂದ್ರ ಆರಂಭಿಸಲು ಉದ್ದೇಶಿಸಲಾಗಿತ್ತಾದರೂ, ವಲಸೆ ಕಾರ್ವಿುಕರು ತಾವಿದ್ದ ಸ್ಥಳ ಬಿಟ್ಟು ಬರಲಿಲ್ಲ. ಹೀಗಾಗಿ ಬಹುತೇಕ ಕಡೆ ಅವರಿದ್ದ ಕಡೆಗಳಲ್ಲಿ ಸಿದ್ಧ ಆಹಾರ ಅಥವಾ ದಿನಸಿ ಒದಗಿಸಲಾಗಿದೆ.
ಎರಡನೇ ಭಾಗವಾಗಿ ಕ್ವಾರಂಟೈನ್ ಕೇಂದ್ರಗಳಿಗೆ ಮತ್ತು ಕಂಟೇನ್ಮೆಂಟ್ ಪ್ರದೇಶಗಳ ನಿರ್ವಹಣೆಗೆ ವೆಚ್ಚ ಮಾಡಲು ಬಿಬಿಎಂಪಿ ಸೇರಿ ಜಿಲ್ಲಾಧಿಕಾರಿಗಳಿಗೆ ಅವಕಾಶ ನೀಡಲಾಗಿದೆ. ಬಿಬಿಎಂಪಿಯೊಂದಕ್ಕೆ 25 ಕೋಟಿ ರೂ. ನೀಡಲಾಗಿದೆ. ಜತೆಗೆ ಪೊಲೀಸ್ ಇಲಾಖೆಗೆ 5 ಕೋಟಿ, ಬಂಧೀಖಾನೆ ನಿರ್ವಹಣೆಗಾಗಿ 2 ಕೋಟಿ ರೂ. ನೀಡಲಾಗಿದೆ. ಒಟ್ಟಾರೆ ಜಿಲ್ಲಾಧಿಕಾರಿಗಳಿಗೆ 255 ಕೋಟಿ ರೂ. ನೀಡಿದ್ದು 155 ಕೋಟಿ ರೂ. ವೆಚ್ಚ ಮಾಡಿದ್ದಾರೆ.
ಇದನ್ನೂ ಓದಿಕೊನೆಗೂ ಸೆರೆಯಾಯ್ತು ಮಗುವನ್ನು ತಿಂದ ಚಿರತೆ!
1054 ಕೋಟಿ ರೂ. ಮೀಸಲು: ಪ್ರಮುಖವಾಗಿ ಕರೊನಾ ರೋಗಿಗಳಿಗೆ ಚಿಕಿತ್ಸೆ ನೀಡುವ ಆಸ್ಪತ್ರೆಗಳ ಸೌಲಭ್ಯ ಹೆಚ್ಚಿಸುವ ಉದ್ದೇಶದಿಂದ ಪರಿಕರ ಖರೀದಿ, ಥರ್ಮಲ್ ಸ್ಕಾ್ಯನಿಂಗ್, ಪಿಪಿಇ ಕಿಟ್ ಖರೀದಿಗಾಗಿ 80 ಕೋಟಿ ರೂ. ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಗೆ ಬಳಸಿಕೊಳ್ಳಲಾಗುತ್ತಿದೆ. ಒಟ್ಟಾರೆ ಈ ಆರ್ಥಿಕ ವರ್ಷದಲ್ಲಿ ರಾಜ್ಯ ವಿಪತ್ತು ನಿಧಿಗೆ 1054 ಕೋಟಿ ರೂ. ಮೀಸಲಾಗಿದೆ. ಇದರಲ್ಲಿ ಕೇಂದ್ರದ ಶೇ.75 ಅನುದಾನವಾದರೆ ರಾಜ್ಯದ ಪಾಲು ಶೇ.20 ಆಗುತ್ತದೆ. ಕೇಂದ್ರದಿಂದ ಮೊದಲ ಕಂತಾಗಿ 395 ಕೋಟಿ ರೂ. ಬಿಡುಗಡೆಯಾಗಿದೆ. ಸದ್ಯ ಕಳೆದ ಸಾಲಿನ ಬಾಕಿ ಉಳಿದಿದ್ದ 66 ಕೋಟಿ ರೂ. ಜತೆಗೆ 190 ಕೋಟಿ ರೂ. ಕರೊನಾ ನಿರ್ವಹಣೆಗೆ ಈವರೆಗೆ ವೆಚ್ಚ ಮಾಡಲಾಗಿದೆ.
ಲಾಕ್​ಡೌನ್ ಸಂದರ್ಭ ರಾಜ್ಯ ಸರ್ಕಾರ ಎಷ್ಟು ಹಣ ಯಾವುದಕ್ಕೆ ಬಳಸಿದೆ ಎಂದು ಜನರಿಗೆ ಲೆಕ್ಕ ಕೊಡಬೇಕೆಂದು ಪ್ರತಿಪಕ್ಷ ಒತ್ತಡ ಹೇರಲಾರಂಭಿಸಿದೆ. ಈ ವೇಳೆ ಸರ್ಕಾರ ವಿಪತ್ತು ನಿರ್ವಹಣೆ ನಿಧಿಯಿಂದ 255 ಕೋಟಿ ರೂಪಾಯಿಯನ್ನು ಈ ವರೆಗೆ ಕರೊನಾ ನಿರ್ವಹಣೆಗೆ ಬಳಸಿಕೊಂಡಿದೆ. ಇದರ ಹೊರತಾಗಿ ಆರೋಗ್ಯ ಇಲಾಖೆ ತನ್ನ ಅವಕಾಶದಲ್ಲಿ ಖರೀದಿಗಳನ್ನು ಮಾಡಿದೆ. ಹಣಕಾಸು ಇಲಾಖೆ ಸಹ ಈ ತುರ್ತು ಸಂದರ್ಭದಲ್ಲಿ ವೆಚ್ಚ ಮಾಡಲು ಆರೋಗ್ಯ ಇಲಾಖೆಗೆ ಮುಕ್ತ ಅವಕಾಶ ನೀಡಿದೆ.
ಪರಿಷ್ಕೃತ ಮಾರ್ಗಸೂಚಿ
ಸಾಮಾನ್ಯವಾಗಿ ರಾಜ್ಯ ವಿಪತ್ತು ನಿಧಿಯನ್ನು ನೈಸರ್ಗಿಕ ವಿಪತ್ತು ಬಳಸಿಕೊಳ್ಳಲಾಗುತ್ತೆ. ಆದರೆ, ಕರೊನಾವನ್ನು ವಿಪತ್ತು ಎಂದು ಘೋಷಿಸಿರುವುದರಿಂದ ಅದರ ಹಣ ಬಳಸಿಕೊಳ್ಳಲು ಅವಕಾಶ ಮಾಡಿಕೊಡಲಾಗಿತ್ತು. ಹಣ ಬಳಕೆಗೆ ಪರಿಷ್ಕೃತ ಮಾರ್ಗಸೂಚಿ ಕಳಿಸಿದ್ದು, ಯಾವ ಕೆಲಸಕ್ಕೆ ಎಷ್ಟು ಬಳಸಬಹುದೆಂಬ ಮಿತಿಯನ್ನೂ ಹಾಕಲಾಗಿತ್ತು.
ಕೋವಿಡ್​ನಿಂದ ತತ್ತರಿಸಿದ ವಿಶ್ವದ ಯಾವುದೇ ರಾಷ್ಟ್ರ ಇಷ್ಟು ದೊಡ್ಡ ಪ್ರಮಾಣದ ಆರ್ಥಿಕ ನೆರವು ಘೋಷಣೆ ಮಾಡಿಲ್ಲ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen + 2 =
Remember me
