ಬೆಂಗಳೂರು:ರಾಜ್ಯದಲ್ಲಿ ಕಳೆದ ವರ್ಷದ ಈ ಅವಧಿಗೆ ಹೋಲಿಸಿದರೆ ಮದ್ಯ ಮಾರಾಟದಿಂದ ಬಂದ ಆದಾಯಕ್ಕಿಂತಲೂ, ಈ ಬಾರಿಯ ಆದಾಯ ಕಡಿಮೆಯಾಗಿದೆ. ಆದರೂ ಮೇ ತಿಂಗಳಿಂದ ಸೆಪ್ಟೆಂಬರ್​ವರೆಗೆ ನಡೆದ ವಹಿವಾಟಿನಲ್ಲಿ ತುಸು ಚೇತರಿಕೆ ಕಂಡುಬಂದಿದೆ.
ಕಳೆದ ವರ್ಷ ಇದೇ ಅವಧಿಯಲ್ಲಿ ಮದ್ಯ ಮಾರಾಟದಿಂದ  10,880 ಕೋಟಿ ರೂ. ಮದ್ಯದಿಂದ ಆದಾಯ ಬಂದಿತ್ತು. ಆದರೆ, ಈ ಬಾರಿ ಇದೇ ಅವಧಿಯಲ್ಲಿ 9,518 ಕೋಟಿ ರೂ. ಬಂದಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ 1,362 ಕೋಟಿ ರೂ. ಕಡಿಮೆಯಾಗಿದೆ.ಇದು ಓದಿ:ರಾಜ್ಯದಲ್ಲಿ ಶೇ.97 ಕರೊನಾ ಸೋಂಕಿತರಿಗೆ ಲಕ್ಷಣಗಳೇ ಇಲ್ಲ; ಅದರಲ್ಲೂ ಈ ಜಿಲ್ಲೆ ಮುಂಚೂಣಿಯಲ್ಲಿ
ಈ ಬಾರಿ ಲಾಕ್​ಡೌನ್​ ಇದ್ದುದರಿಂದ ಮಾರ್ಚ್​​ನಿಂದ ಮೇ ವರೆಗೂ ಮದ್ಯ ಮಾರಾಟ ಇರಲಿಲ್ಲ. ನಂತರ ಮೇನಲ್ಲಿ 1397 ಕೋಟಿ ರೂ., ಜೂನ್‌ನಲ್ಲಿ 2,549 ಕೋಟಿ ರೂ., ಜುಲೈನಲ್ಲಿ 1,904 ಕೋಟಿ ರೂ., ಆಗಸ್ಟ್‌ನಲ್ಲಿ 1,830 ಕೋಟಿ ರೂ. ಹಾಗೂ ಸೆಪ್ಟಂಬರ್‌ನಲ್ಲಿ 1,936 ಕೋಟಿ ರೂ. ಆದಾಯ ಬಂದಿದೆ.
249.49 ಲಕ್ಷ ಬಾಕ್ಸ್ ಇಂಡಿಯನ್ ಮೇಡ್ ಲಿಕ್ಕರ್(ಐಎಂಎಲ್) ಮಾರಾಟವಾಗಿದೆ.  ಕರೊನಾ ಕಾರಣದಿಂದಲೇ ಆದಾಯದಲ್ಲಿ ನಷ್ಟವಾಗಿದ್ದಾಗಿ ಅಬಕಾರಿ ಅಧಿಕಾರಿಗಳು ಹೇಳಿದ್ದಾರೆ.
ಹೆಣ್ಣು ಮಕ್ಕಳ ರಕ್ಷಣೆಯಲ್ಲಿ ಪ್ರಧಾನಿ ಮೋದಿ ವಿಫಲ…ಅಬ್ಬರದಿಂದ ಏನೂ ಆಗೋಲ್ಲ: ದೀದಿ ಆಕ್ರೋಶ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − fifteen =
Remember me
