ಕಲಬುರಗಿ:ಸದಾ ಮೊಬೈಲ್​ನಲ್ಲಿ ತಲ್ಲೀನವಾಗಿರಬೇಡ. ವಿಡಿಯೋ ಗೇಮ್ ಆಡಬೇಡ ಎಂದು ಪಾಲಕರು ಬೈದು ಬುದ್ಧಿ ಹೇಳಿದ್ದರಿಂದ ಬ್ರಹ್ಮಪುರ ಬಡಾವಣೆಯಲ್ಲಿ ಶುಕ್ರವಾರ ನಸುಕಿನ ಜಾವ ವಿದ್ಯಾರ್ಥಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಮೂಲಕ ಗೇಮ್ ಗೀಳಿಗೆ ಬಾಲಕ ಬಲಿಯಾದಂತಾಗಿದೆ. ಕೆಲ ತಿಂಗಳ ಹಿಂದಷ್ಟೆ ಜನತಾ ಲೇಔಟ್ನಲ್ಲಿ ಉದ್ಯಮಿಯೊಬ್ಬರ ಪುತ್ರ ಹೀಗೆ ಸೂಸೈಡ್ ಮಾಡಿಕೊಂಡಿದ್ದ.
ಇದನ್ನೂ ಓದಿ:ಪರೀಕ್ಷೆಗಳೇನೋ ಮುಗಿಯಿತು, ಎಸ್ಸೆಸ್ಸೆಲ್ಸಿ, ಪಿಯುಸಿ ಫಲಿತಾಂಶ ಯಾವಾಗ? ಶಿಕ್ಷಣ ಸಚಿವರ ಪ್ರತಿಕ್ರಿಯೆ ಹೀಗಿದೆ…
ರಾಹುಲ್ ಸೊಲ್ಲಾಪುರ (15) ಸಾವಿಗೆ ಶರಣಾದವ. ಖಾಸಗಿ ಶಾಲೆಯಲ್ಲಿ 9ನೇ ತರಗತಿ ಪಾಸಾಗಿದ್ದ. ಒಂದೆರಡು ವರ್ಷಗಳಿಂದ ಮೊಬೈಲ್​ಲ್ಲಿ ಅತಿಯಾಗಿ ವಿಡಿಯೋ ಗೇಮ್ ಆಡುತ್ತಿದ್ದ. ಇದರಿಂದಾಗಿ ಓದಿಗೆ ಪೆಟ್ಟು ಬೀಳಲಿದೆ ಎಂದು ಆತಂಕಗೊಂಡ ಪೋಷಕರು ಹಲವಾರು ಸಲ ಬುದ್ಧಿ ಹೇಳಿದ್ದರು. ದಿನದ ಬಹುಕಾಲ ಮೊಬೈಲ್​ನಲ್ಲೇ ತಲ್ಲೀನನಾಗಿರುತ್ತಿದ್ದಾಗ ತಂದೆ-ತಾಯಿ ಜತೆಗೆ ಹಿಂದೆ ವಾದಕ್ಕೂ ಇಳಿದಿದ್ದ.
ವಿಡಿಯೋ ಗೇಮ್ ಆಡುತ್ತಿರುವುದನ್ನು ಗಮನಿಸಿದ ಪಾಲಕರು ಗುರುವಾರ ಸಂಜೆ ಬೈದು ಬುದ್ಧಿ ಹೇಳಿದ್ದರು. ಇದರಿಂದಾಗಿ ನೊಂದು ಮನೆಯಲ್ಲೇ ನೇಣು ಬಿಗಿದುಕೊಂಡಿದ್ದಾನೆ. ಬೆಳಗ್ಗೆ ಪಾಲಕರು ನೋಡಿ ತೀವ್ರ ಆಘಾತಕ್ಕೆ ಒಳಗಾಗಿದ್ದು, ರೋದನ ಮುಗಿಲು ಮುಟ್ಟಿತ್ತು.
ಇದನ್ನೂ ಓದಿ:VIDEO/PHOTOS| ಬಿಕಿನಿ ಬಾಡಿಬಿಲ್ಡಿಂಗ್​ ವಿಡಿಯೋ ಹರಿಬಿಟ್ಟ ನಟಿ ಚಿತ್ರಾಲ್​ಗೆ ನೆಟ್ಟಿಗರು ಹೀಗೆನ್ನಬಹುದಾ?
ಎಸಿಪಿ ಕಿಶೋರಬಾಬು, ಇನ್ಸ್ಪೆಕ್ಟರ್ ಅರುಣಕುಮಾರ ಮುರಗೊಂಡಿ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿದ್ದು, ಶವದ ಮರಣೋತ್ತರ ಪರೀಕ್ಷೆ ಬಳಿಕ ಪಾಲಕರಿಗೆ ಹಸ್ತಾಂತರಿಸಿದರು. ಕರೊನಾ ಪರೀಕ್ಷೆಗಾಗಿ ಗಂಟಲ ದ್ರವ ಸಹ ಸಂಗ್ರಹಿಸಿ ಲ್ಯಾಬ್ಗೆ ರವಾನಿಸಲಾಗಿದೆ. ರಾಘವೇಂದ್ರ ನಗರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಕರೊನಾ ಲಸಿಕೆ ಸಂಶೋಧಿಸಿರುವ ಭಾರತ್​ ಬಯೋಟೆಕ್​ ಜೈಕಾಗೂ ಔಷಧ ಆವಿಷ್ಕರಿಸಿತ್ತು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen + seventeen =
Remember me
