ಮಂಡ್ಯ:ಸಾಮಾನ್ಯವಾಗಿ ಹಬ್ಬಗಳಲ್ಲಿ ರಿಯಾಯಿತಿ ನೀಡುವುದನ್ನು ನೋಡಿರುತ್ತೀರಿ. ಆದರೆ, ನೀಲಿ ಸಿನಿಮಾ ತಾರೆ ಸನ್ನಿ ಲಿಯೋನ್​ರ ಅಭಿಮಾನಿಯೊಬ್ಬ ಮಂಡ್ಯದಲ್ಲಿ ವರ್ಷಪೂರ್ತಿ ವಿಶೇಷ ಆಫರ್​ ನೀಡುವ ಮೂಲಕ ಗಮನ ಸೆಳೆದಿದ್ದಾನೆ.
ಮಂಡ್ಯ ನಗರದ ಕರ್ನಾಟಕ ಬಾರ್​ ವೃತ್ತದಲ್ಲಿ ಚಿಕನ್​ ಅಂಗಡಿ ಇಟ್ಟುಕೊಂಡಿರುವ ನಟಿ ಸನ್ನಿ ಲಿಯೋನ್​ ಅಭಿಮಾನಿ ಪ್ರಸಾದ್​, ತನ್ನ ಅಂಗಡಿಯಲ್ಲಿ ಚಿಕನ್​ ಖರೀದಿಸುವ ಸನ್ನಿ ಲಿಯೋನ್​ ಅಭಿಮಾನಿಗಳಿಗೆ ಶೇ.10 ಡಿಸ್ಕೌಂಟ್​ ಕೊಡುವುದಾಗಿ ಮಾಹಿತಿ ಫಲಕ ಹಾಕಿಕೊಂಡಿದ್ದಾನೆ. ಸುಮ್ಮನೆ ಬಂದು ಅಭಿಮಾನಿ ಎಂದರೆ ರಿಯಾಯಿತಿ ಸಿಗುವುದಿಲ್ಲ, ಬದಲಿಗೆ ಮೂರು ಪ್ರಮುಖ ಷರತ್ತು ಪೂರೈಸಬೇಕು.

ಸಾಮಾಜಿಕ ಜಾಲತಾಣ ಫೆಸ್​ಬುಕ್​ ಮತ್ತು ಇನ್​ಸ್ಟಾಗ್ರಾಂನಲ್ಲಿ ಸನ್ನಿ ಲಿಯೋನ್​ ಅವರನ್ನು ಫಾಲೋ ಮಾಡುತ್ತಿರಬೇಕು, ತಮ್ಮ ಮೊಬೈಲ್​ಗಳಲ್ಲಿ ನಟಿಯ ಕನಿಷ್ಠ 10 ಫೋಟೋಗಳನ್ನು ಸಂಗ್ರಹಿಸಿಟ್ಟುಕೊಂಡಿರಬೇಕು, ಅವರ ಎಲ್ಲ ಚಿತ್ರಗಳಿಗೂ ಮೆಚ್ಚುಗೆ ಹಾಗೂ ಕಾಮೆಂಟ್​ ಮಾಡಿರಬೇಕೆಂದು ಷರತ್ತು ಹಾಕಲಾಗಿದೆ. ಇಷ್ಟನ್ನು ಪರಿಶೀಲಿಸಿ ಖಚಿತವಾದ ನಂತರ ಡಿಸ್ಕೌಂಟ್​ ನೀಡಲಾಗುತ್ತದೆ. ಸದ್ಯ ಈ ಫಲಕ ವೈರಲ್​ ಆಗುತ್ತಿದೆ.
ಜ್ಯೋತಿಷಿ ಮಾತು ನಂಬಿ ಸಾವಿನ ಮನೆ ಬಿಟ್ಟು ಲಾಡ್ಜ್​ಗೆ ಹೋದ ಮಾಲೀಕನಿಗೂ-ಕುಟುಂಬಕ್ಕೂ ಕಾದಿತ್ತು ಭಾರಿ ಆಘಾತ!

ತಿಂಗಳ ಹಿಂದಷ್ಟೇ ಜನಿಸಿದ್ದ ಮುದ್ದು ಮಗುವಿಗೆ ತಂದೆಯಾಗಿದ್ದ ಪೊಲೀಸ್​ ಪೇದೆ ಬಾಳಲ್ಲಿ ದುರಂತ

ಅಯ್ಯೋ ಅಣ್ಣ… ನಾನಷ್ಟು ಗೋಗರೆದ್ರೂ ಊಟ ಮಾಡದೆ ಕೆಲ್ಸ ಇದೆ ಅಂತ ಹೊರಟ್ಯಲ್ಲೋ: ಮಡಿಲಕ್ಕಿ ಕೊಟ್ಟು ಹಿಂತಿರುಗುವಾಗ ಸಾವು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × two =
Remember me
