ಬೆಳಗಾವಿ:ನಗರ ಹೊರ ವಲಯದ ದೇಸೂರ ರೈಲ್ವೆ ನಿಲ್ದಾಣದ ಗೂಡ್ಸ್‌ಶೆಡ್​ನ ಸರ್ಕಾರಿ ಗೋದಾಮಿನಲ್ಲಿ ಸಂಗ್ರಹಿಸಿಟ್ಟಿದ್ದ 10 ಲಕ್ಷ ರೂ. ಮೌಲ್ಯದ ಡಿಎಪಿ ರಸಗೊಬ್ಬರ ಕಳ್ಳತನ ಮಾಡಿದ ಐವರನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ಬೆಳಗಾವಿ ತಾಲೂಕಿನ ಹಲಗಿಮರಡಿ ಗ್ರಾಮದ ನಾಗರಾಜ ಈರಣ್ಣಾ ಪಠಾತ (21), ಹೊಸ ವಂಟಮೂರಿ ಗ್ರಾಮದ ವಸೀಮ್ ಇಸ್ಮಾಯಿಲ್ ಮಕಾಂದರ (23), ಹುದಲಿ ಗ್ರಾಮದ ಗಜಬರಅಲಿ ಗೌಸಮುದ್ದಿನ ಜಿಡ್ಡಿಮನಿ(39), ಖಾನಾಪುರ ತಾಲೂಕಿನ ಪಂಡಿತ ಕಲ್ಲಪ್ಪಾ ಸನದಿ(37), ಮಂಜುನಾಥ ಸೋಮಪ್ಪ ಹಮ್ಮನ್ನವರ(30) ಬಂಧಿತ ಆರೋಪಿಗಳು.
ಮೇ 23ರಂದು ಗೋದಾಮಿನಲ್ಲಿ ಇಟ್ಟಿದ್ದ 900 ಆರ್‌ಸಿಎಪ್ ಕಂಪನಿಯ ಡಿಎಪಿ ರಸಗೊಬ್ಬರದ ಚೀಲಗಳು ಕಳ್ಳತನವಾಗಿತ್ತು. ಈ ಕುರಿತು ಗೋದಾಮಿನ ವ್ಯವಸ್ಥಾಪಕ ಶಿವಾಜಿ ಬಾಳಾರಾಮ ಆನಂದಾಚೆ ಎಂಬುವವರು ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಕುರಿತು ತನಿಖೆ ನಡೆಸಿದ ಗ್ರಾಮೀಣ ಠಾಣೆ ಪೊಲೀಸರು ಶುಕ್ರವಾರ 5 ಜನರನ್ನು ಬಂಧಿಸಿ 10 ಲಕ್ಷ ಮೌಲ್ಯದ ರಸಗೊಬ್ಬರದ 810 ಚೀಲಗಳನ್ನು ವಶಕ್ಕೆ ಪಡೆದಿದ್ದಾರೆ. ಕಳ್ಳತನ ಮಾಡಲು ಉಪಯೋಗಿಸಿದ ಎರಡು ಲಾರಿಯನ್ನೂ ಜಪ್ತಿ ಮಾಡಿದ್ದಾರೆ.
ಬೆಂಗ್ಳೂರಲ್ಲಿ ಬೆಳ್ಳಂಬೆಳಗ್ಗೆ ಮರಕ್ಕೆ ಡುಕಾಟಿ ಬೈಕ್ ಡಿಕ್ಕಿ: ಸ್ಥಳದಲ್ಲೇ ನಿವೃತ್ತ ಪೊಲೀಸ್ ಅಧಿಕಾರಿ ಪುತ್ರ-ಗೆಳತಿ ದುರ್ಮರಣ

2 ವರ್ಷದ ಮಗು ಮೇಲೆ ದೊಡ್ಡಪ್ಪನಿಂದಲೇ ಅತ್ಯಾಚಾರ: ಚನ್ನಪಟ್ಟಣದಲ್ಲಿ ಹೇಯ ಕೃತ್ಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 + 8 =
Remember me
