ಮೈಸೂರು:ಕರ್ನಾಟಕ ರಾಜ್ಯ ಮುಕ್ತ ವಿಶ‍್ವ ವಿದ್ಯಾಲಯದಲ್ಲಿ ಪ್ರಸಕ್ತ ಶೈಕ್ಷಣಿಕ ಸಾಲಿನಿಂದ 11 ಹೊಸ ಕೋರ್ಸ್​ಗಳನ್ನು ಪ್ರಾರಂಭಿಸಲು ಯುಜಿಸಿ ಅನುಮೋದನೆ ನೀಡಿದೆ ಎಂದು ಕುಲಪತಿ ಪ್ರೊ. ಎಸ್. ವಿದ್ಯಾಶಂಕರ್ ಹೇಳಿದರು.
ಎಂಎಸ್ಸಿ (ಸಸ್ಯಶಾಸ್ತ್ರ), ಎಂ.ಎಸ್ಸಿ (ಪ್ರಾಣಿಶಾಸ್ತ್ರ), ಎಂಎಸ್ಸಿ (ಫುಟ್ ಆ್ಯಂಡ್ ನ್ಯೂಟ್ರಿಷನ್ ), ಎಂಎಸ್ಸಿ (ಇನ್ಫಾರ್ಮೇಷನ್ ಟೆಕ್ನಾಲಜಿ), ಬಿಎಸ್ಸಿ (ಜನರಲ್), ಬಿಎಸ್ಸಿ (ಇನ್ಫಾರ್ಮೇಷನ್ ಟೆಕ್ನಾಲಜಿ), ಬಿಎಸ್ಸಿ (ಹೋಂ-ಸೈನ್ಸ್), ಬಿಬಿಎ, ಬಿಸಿಎ, ಎಂಎ(ಶಿಕ್ಷಣ), ಎಂಎ (ತೆಲುಗು) Open and Distance Learning ಕೋರ್ಸ್​ಗಳ ಆರಂಭಕ್ಕೆ ಯುಜಿಸಿ ತಜ್ಞರ ಸಮಿತಿ ಅನುಮೋದನೆ ನೀಡಿದೆ. ಈ ಸಂಬಂಧ ಯುಜಿಸಿಯಿಂದ ಅಧಿಕೃತ ಪತ್ರವೊಂದು ಬರುವುದು ಮಾತ್ರ ಬಾಕಿ ಇದೆ ಕುಲಪತಿ ಪ್ರೊ.ಎಸ್.ವಿದ್ಯಾಶಂಕರ್ ಮಾಹಿತಿ ನೀಡಿದರು.
ಕೋರ್ಸ್​ಗಳ ಪ್ರಾರಂಭಕ್ಕೆ ಸಂಬಂಧಿಸಿದಂತೆ ಯುಜಿಸಿ ತಜ್ಞರ ಸಮಿತಿಯೊಂದಿಗೆ 6 ಬಾರಿ ಆನ್​ಲೈನ್ ಸಭೆಗಳನ್ನು ನಡೆಸಿದ ನಂತರ ನಾವು ಕೇಳಿದ 11 ಕೋರ್ಸ್​ಗಳ ಪ್ರಾರಂಭಕ್ಕೆ ತಜ್ಞರ ಸಮಿತಿ ಅನುಮೋದನೆ ನೀಡಿದ್ದು, ಜುಲೈ ತಿಂಗಳಿನಲ್ಲಿಯೇ ಕೋರ್ಸ್​ಗಳ ಪ್ರವೇಶಾತಿ ಪ್ರಾರಂಭಿಸಲಾಗುವುದು. 11 ಹೊಸ ಕೋರ್ಸ್ ಗಳು ಮಾತ್ರವಲ್ಲದೆ ಎಂಎಸ್​ಡಬ್ಲ್ಯು, ಬಿಎಸ್​ಡಬ್ಲ್ಯು ಸೇರಿದಂತೆ ಮೂರ್ನಾಲ್ಕು ಕೋರ್ಸ್ ಗಳನ್ನು ಪ್ರಾರಂಭಿಸಲು ಅನುಮತಿ ಕೋರಲಾಗುವುದು ಎಂದು ಹೇಳಿದರು.
ಆನ್​ಲೈನ್ ಕೋರ್ಸ್ ಗಳನ್ನು ಪ್ರಾರಂಭಿಸಲು ಯುಜಿಸಿಯ ಅನುಮತಿ ಕೋರಲಾಗಿದ್ದು, ಪಿಪಿಆರ್ ಸಲ್ಲಿಸಲಾಗಿದ್ದು, ಅನುಮೋದನೆ ದೊರೆಯುವ ನಿರೀಕ್ಷೆಯಲ್ಲಿ ಇದ್ದೇವೆ ಎಂದು ಹೇಳಿದರು.
ಮುಕ್ತ ವಿಶ‍್ವ ವಿದ್ಯಾಲಯ 2008 ರಿಂದ 2012ರವರೆಗೆ ಯುಜಿಸಿ ಮಾನ್ಯತೆ ಹೊಂದಿತ್ತು. ಈ ಅವಧಿಯಲ್ಲಿ ತಾಂತ್ರಿಕೇತರ ಕೋರ್ಸ್ ಗಳಲ್ಲಿ ವ್ಯಾಸಂಗ ಮಾಡಿದವರಿಗೆ ಅಂಕಪಟ್ಟಿ ನೀಡಲು ಯುಜಿಸಿ ಅನುಮತಿ ನೀಡಿದೆ. ಮುಕ್ತ ವಿಶ್ವ ವಿದ್ಯಾಲಯದೊಂದಿಗಿನ ಖಾಸಗಿ ಸಂಯೋಜಿತ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡಿದವರಿಗೂ ಅಂಕಪಟ್ಟಿ ಪಡೆಯಲು ಅಡ್ಡಿ ಇಲ್ಲ. ಆದರೆ, 2013 ರಿಂದ 2014ರ ಅವಧಿಯಲ್ಲಿ ಮಾನ್ಯತೆ ಇಲ್ಲದ ಹಿನ್ನೆಲೆಯಲ್ಲಿ ಈ ಅವಧಿಯಲ್ಲಿ ದಾಖಲಾದವರಿಗೆ ಅಂಕಪಟ್ಟಿ ನೀಡಲು ಸಾಧ್ಯವಿಲ್ಲ. ಈ ವಿಚಾರವಾಗಿ ಅನಗತ್ಯವಾಗಿ ಸಾರ್ವಜನಿಕರಲ್ಲಿ ಗೊಂದಲ ಮೂಡಿಸುತ್ತಿರುವವರ ವಿರುದ್ದ ಕಾನೂನು ಕ್ರಮ ಕೈಗೊಳ‍್ಳಲಾಗುವುದು ಎಂದು ಎಚ್ಚರಿಸಿದರು.
ಇದೀಗ ಮುಕ್ತ ವಿವಿಯಲ್ಲಿ ದಾಖಲಾಗುತ್ತಿರುವ ವಿದ್ಯಾರ್ಥಿಗ ಸಂಖ್ಯೆ ಕೂಡ ಹೆಚ್ಚಾಗಿದೆ. ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ 40 ಸಾವಿರ ವಿದ್ಯಾರ್ಥಿಗಳು ದಾಖಲಾಗುವ ನಿರೀಕ್ಷೆ ಹೊಂದಿದ್ದೇವೆ. ಈವರೆಗೆ 22 ಸಾವಿರ ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಕಳೆದ ಬಾರಿ 11 ಸಾವಿರ ವಿದ್ಯಾರ್ಥಿಗಳು ದಾಖಲಾಗಿದ್ದರು ಎಂದು ತಿಳಿಸಿದರು.
ಸುಮಲತಾ ದೊಡ್ಡವರು, ನಮ್ಮ ತಪ್ಪುಗಳನ್ನ ಹೊಟ್ಟೆಗೆ ಹಾಕೊಳ್ಬೇಕು…

ಅರುಣಾಕುಮಾರಿಯ ಪ್ರೇಮ್​ಕಹಾನಿ ಬಿಚ್ಚಿಟ್ಟ ನಟ ದರ್ಶನ್​! 9 ವರ್ಷ ಚಿಕ್ಕವನೊಂದಿಗೆ ಲವ್ವಿಡವ್ವಿ ಶುರು ಮಾಡಿದ್ದಳಂತೆ…

ಪ್ರಿಯಕರನ ಮನೆಯಲ್ಲಿ ಯುವತಿ ಶವ ಪತ್ತೆ! ಮೃತಳ ಪೋಷಕರಿಂದ ನಡೆದೇ ಹೋಯ್ತು ಘೋರ ದುರಂತ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 2 =
Remember me
