ಹೊಸೂರು:ರಾಜ್ಯದ ಗಡಿ ಭಾಗ ಆನೇಕಲ್​ಗೆ ಹೊಂದಿಕೊಂಡ ತಮಿಳುನಾಡಿನ ಹೊಸೂರಿನಲ್ಲಿ ಸರ್ಕಾರಿ ಶಾಲೆಯೊಂದರ 150ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಹೊಸೂರು ಮಹಾನಗರ ಪಾಲಿಕೆಯ ಕಾಮರಾಜ್ ಕಾಲನಿಯಲ್ಲಿರು ಸರ್ಕಾರಿ ಮಾಧ್ಯಮಿಕ ಶಾಲೆಯಲ್ಲಿ ಶುಕ್ರವಾರ ಮಧ್ಯಾಹ್ನ ವಿದ್ಯಾರ್ಥಿಗಳು ದಿಢೀರ್​ ಅಸ್ವಸ್ಥರಾಗಿದ್ದಾರೆ. ಉಸಿರಾಟ ಸಮಸ್ಯೆಯಿಂದ ಕುಸಿದು ಬಿದ್ದಿದ್ದು, ಕೂಡಲೇ ಎಲ್ಲರನ್ನೂ ಆಸ್ಪತ್ರೆಗೆ ರವಾನಿಸಲಾಗಿದೆ.
ಈ ಶಾಲೆಯಲ್ಲಿ 1300 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಎಂದಿನಂತೆ ಇಂದು ಮಧ್ಯಾಹ್ನ 1 ಗಂಟೆಗೆ ಊಟದ ವಿರಾಮ ನೀಡಲಾಗಿತ್ತು. ಊಟ ಮುಗಿಸಿ 2 ಗಂಟೆಗೆ ವಿದ್ಯಾರ್ಥಿಗಳೆಲ್ಲರೂ ಶಾಲಾ ಕೊಠಡಿಗೆ ತೆರಳಿದ್ದರು. ಸ್ವಲ್ಪ ಹೊತ್ತಿನ ಬಳಿಕ 6 ಮತ್ತು 7ನೇ ತರಗತಿಯ ಕೊಠಡಿಯಲ್ಲಿದ್ದ ವಿದ್ಯಾರ್ಥಿಗಳಿಗೆ ಏಕಾಏಕಿ ಉಸಿರಾಟ ಸಮಸ್ಯೆ ಕಾಣಿಸಿಕೊಂಡಿದ್ದು, ಕಣ್ಣು ಮಂಜಾಗಿದೆ. ನೋಡನೋಡುತ್ತಿದ್ದಂತೆ ಮಕ್ಕಳು ಪ್ರಜ್ಞಾಹೀನ ಸ್ಥಿತಿಯಲ್ಲಿ ಕುಸಿದು ಬಿದ್ದಿದ್ದಾರೆ.
ಗಾಬರಿಗೊಂಡ ಶಿಕ್ಷಕರು ಮತ್ತು ಸಿಬ್ಬಂದಿ, ತಕ್ಷಣ ಸರ್ಕಾರಿ ಆಸ್ಪತ್ರೆಗೆ ಮಾಹಿತಿ ನೀಡಿದ್ದಾರೆ. ಆಂಬುಲೆನ್ಸ್​ನಲ್ಲಿ ಹೊಸೂರು ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದ್ದು, ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಈ ಸುದ್ದಿ ತಿಳಿಯುತ್ತಿದ್ದಂತೆ ಆತಂಕಗೊಂಡ ಪಾಲಕರು ಶಾಲೆ ಮತ್ತು ಆಸ್ಪತ್ರೆ ಬಳಿಗೆ ದೌಡಾಯಿಸಿದ್ದಾರೆ.
ಶಾಲಾ ಸಮೀಪ ಯಾವುದೋ ಕೆಮಿಕಲ್​ ಟ್ಯಾಂಕ್​ ಒಡೆದಿದ್ದು, ಪರಿಣಾಮ ಮಕ್ಕಳು ಅಸ್ವಸ್ಥಗೊಂಡಿದ್ದಾರೆ ಎನ್ನಲಾಗುತ್ತಿದೆ. ತನಿಖೆ ಬಳಿಕ ಹಾಗೂ ಆಸ್ಪತ್ರೆಯ ವರದಿ ಬಂದ ಬಳಿಕ ಘಟನೆಗೆ ಕಾರಣ ಏನೆಂದು ತಿಳಿಯಲಿದೆ.
ಹಿಮಾಚಲ ಪ್ರದೇಶ​ ವಿಧಾನಸಭೆ ಚುನಾವಣಾ ದಿನಾಂಕ ಪ್ರಕಟ

ಜ್ಞಾನವಾಪಿಯಲ್ಲಿ ಶಿವಲಿಂಗ ಪತ್ತೆ: ವೈಜ್ಞಾನಿಕ ಅಧ್ಯಯನ ನಡೆಸದಂತೆ ವಾರಣಾಸಿ ಕೋರ್ಟ್​ ಆದೇಶ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven − 5 =
Remember me
