ಉಡುಪಿ:ನಂದಳಿಕೆಯ ವರಕವಿ ಮುದ್ದಣನ 150ನೇ ಜಯಂತಿ (ಜ.24) ಪ್ರಯುಕ್ತ ಕೇಂದ್ರ ಸರ್ಕಾರ 150 ರೂ. ಮೌಲ್ಯದ ನಾಣ್ಯ ಹೊರತರಲಿದೆ.
ಈ ನಾಣ್ಯ ಹಲವು ವಿಶೇಷತೆಯನ್ನು ಒಳಗೊಂಡಿದೆ. 35 ಗ್ರಾಂ ತೂಕದ 44 ಮಿ.ಮೀ. ಸುತ್ತಳತೆಯ ಈ ನಾಣ್ಯವನ್ನು 4 ಬಗೆಯ ಲೋಹಗಳ ಮಿಶ್ರಣದಿಂದ ತಯಾರಿಸಲಾಗಿದೆ. ಶೇ.50 ಬೆಳ್ಳಿ, ಶೇ.40 ತಾಮ್ರ, ಶೇ.05 ನಿಕಲ್​ ಹಾಗೂ ಶೇ.05 ಸತು ಹೊಂದಿದೆ. ನಾಣ್ಯದ ಒಂದು ಕಡೆ (ಹೆಡ್​)ಮಧ್ಯದಲ್ಲಿ ಅಶೋಕ ಸ್ತಂಭದ ಸಿಂಹದ ತಲೆ, ಕೆಳಗೆ ‘ಸತ್ಯಮೇವ ಜಯತೆ’ ಎಂದು ಬರೆದಿದೆ. ಬಲ ಬದಿಯ ವೃತ್ತದೊಳಗೆ ‘ಭಾರತ್​’ ಎಂದೂ, ವೃತ್ತದೊಳಗೆ ‘ಇಂಡಿಯಾ’ ಎಂದು ಬರೆಯಲಾಗಿದೆ. ಸಿಂಹದ ತಲೆಯ ಕೆಳಗೆ ರೂ. ಚಿಹ್ನೆ ಹಾಗೂ ಮೌಲ್ಯ 150 ಎಂದು ಬರೆದಿದೆ. ನಾಣ್ಯದ ಮತ್ತೊಂದು ಭಾಗದ ಮಧ್ಯೆ ಕವಿ ಮುದ್ದಣನ ಚಿತ್ರ, ಮೇಲಿನ ವೃತ್ತದಲ್ಲಿ ಹಿಂದಿ ಮತ್ತು ಇಂಗ್ಲಿಷ್​ನಲ್ಲಿ ಕವಿ ಮುದ್ದಣನ 150ನೇ ಜನ್ಮ ದಿನಾಚರಣೆ ಎಂಬ ಉಲ್ಲೇಖವಿದೆ.
ಮುದ್ದಣನ ಚಿತ್ರದ ಕೆಳಗೆ ಅಂತರಾಷ್ಟ್ರೀಯ ಅಂಕೆಯಲ್ಲಿ ವರ್ಷ 1870-2020 ಎಂದು ಬರೆಯಲಾಗಿದೆ. ಭಾರತ ಸರ್ಕಾರದ ನಾಣ್ಯ ಮತ್ತು ಕರೆನ್ಸಿ ವಿಭಾಗದ ಜಂಟಿ ಕಾರ್ಯದರ್ಶಿ ಮನೀಶಾ ಸಿನ್ಹಾ ಜ.19ರಂದು ಈ ಪ್ರಕಟಣೆ ನೀಡಿದ್ದಾರೆ.
ಸಾವಲ್ಲೂ ಸಾರ್ಥಕತೆ ಮೆರೆದ ಯುವಕ! ಅಂಗಾಂಗ ದಾನ ಮಾಡಿ ಐವರ ಪ್ರಾಣ ಉಳಿಸಿದ… ಇಂತಹ ಮಹಾನ್​ ದಾನಿಯ 2 ತಿಂಗಳ ಮಗು ಅನಾಥ

ದೇವಸ್ಥಾನ ಜೀರ್ಣೋದ್ಧಾರಕ್ಕೆ ಬಿಡುಗಡೆಯಾಗಿದ್ದ ಅನುದಾನ ಕೊಡೋಕು ಲಂಚ ಕೇಳಿ ಎಸಿಬಿ ಬಲೆಗೆ ಬಿದ್ದ ತಹಸೀಲ್ದಾರ್​!

ಪೂಜೆ ನೆಪದಲ್ಲಿ ಪುರೋಹಿತನನ್ನು ಮನೆಗೆ ಕರೆಸಿಕೊಂಡ ಈ ದಂಪತಿ ಅಸಹ್ಯ ಕೆಲಸ ಮಾಡಿಬಿಟ್ರು…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen + seven =
Remember me
