ಶಿವಮೊಗ್ಗ:ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮದ ಹಿರಿಯ ಹುಲಿ ಹನುಮ ಗುರುವಾರ ಮೃತಪಟ್ಟಿದ್ದಾನೆ. ಕೆಲ ತಿಂಗಳಿನಿಂದ ಅನಾರೋಗ್ಯಕ್ಕೆ ಒಳಗಾಗಿದ್ದ ಹನುಮನಿಗೆ ಸಫಾರಿಯಲ್ಲಿ ವಿಶೇಷ ಆರೈಕೆ ಮಾಡಲಾಗುತ್ತಿತ್ತು. ಆದರೂ ವಯೋಸಹಜ ಸಮಸ್ಯೆ, ಅಂಗಾಂಗ ವೈಫಲ್ಯದಿಂದ ಮೃತಪಟ್ಟಿದೆ.
ಈ ಹಿಂದೆ ಸಫಾರಿಯಲ್ಲಿ ದೀರ್ಘ ಕಾಲ ಜೀವಿಸಿದ್ದ ಕೃತ್ತಿಕಾ ದಾಖಲೆಯನ್ನು ಹನುಮ ಸರಿಗಟ್ಟಿದ್ದಾನೆ. 19 ವರ್ಷ ಕಾಲ ಜೀವಿಸಿದ್ದ ಕೃತ್ತಿಕಾ 2016ರ ಆಗಸ್ಟ್​ನಲ್ಲಿ ಕೊನೆಯುಸಿರೆಳೆದಿತ್ತು. ಹನುಮ ಕೂಡ 19 ವರ್ಷ ಕಾಲ ತುಂಬು ಜೀವಿಸಿ ಕೊನೆಯುಸಿರೆಳೆದಿದ್ದಾನೆ.
ಚಾಮುಂಡಿ ಎಂಬ ಹುಲಿಯು ರಾಮ, ವಾಲಿ ಮತ್ತು ಹನುಮನಿಗೆ ಜನುಮ ನೀಡಿತ್ತು. 2020ರ ಡಿಸೆಂಬರ್​ನಲ್ಲಿ ವಾಲಿ, 2022ರ ಮೇ ನಲ್ಲಿ ರಾಮ ಎಂಬ ಹುಲಿಗಳು ಸಾವನ್ನಪ್ಪಿದ್ದವು. ಇದೀಗ ಇವುಗಳ ಸಹೋದರ ಹನುಮ ಕೂಡ ಇಹಲೋಕ ತ್ಯಜಿಸಿದ್ದಾನೆ. ಇದೀಗ ಸಫಾರಿಯಲ್ಲಿ ಹುಲಿಗಳ ಸಂಖ್ಯೆ 4ಕ್ಕೆ ಇಳಿಕೆಯಾಗಿದೆ.
ಸಫಾರಿ ಇಲ್ಲವೇ ಪ್ರಾಣಿ ಸಂಗ್ರಹಾಲಯದಲ್ಲಿ ಹುಲಿಗಳ ಗರಿಷ್ಠ ಜೀವಿತಾವಧಿ 15 ರಿಂದ 17 ವರ್ಷ. ಆದರೆ ತ್ಯಾವರೆಕೊಪ್ಪ ಸಫಾರಿಯಲ್ಲಿ ಸರಾಸರಿ ವಯಸ್ಸನ್ನೂ ಮೀರಿ ಹುಲಿಗಳು ಜೀವನ ನಡೆಸಿರುವುದು ವಿಶೇಷ.
ಬಡತನ ಮೆಟ್ಟಿ ನಿಲ್ಲಬೇಕು ಅನ್ನುವಷ್ಟರಲ್ಲಿ ಆಟವಾಡಿದ ವಿಧಿ… ಸಾವಲ್ಲೂ ಸಾರ್ಥಕತೆ ಮೆರದ ಪಿಯು ವಿದ್ಯಾರ್ಥಿನಿ…

ಆನೇಕಲ್​ನ ಮನೆಯೊಂದರಲ್ಲಿ ಮಂಡ್ಯ ಮೂಲದ ಪ್ರೇಮಿಗಳಿಬ್ಬರ ಶವ ಪತ್ತೆ! ಆ ದಿನ ನಡೆದಿದ್ದೇನು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − thirteen =
Remember me
