ತುಮಕೂರು:ಮದುವೆಯಾದ ಒಂದು ವರ್ಷಕ್ಕೆ 19 ವರ್ಷದ ಯುವತಿಯೊಬ್ಬಳು ಗಂಡನ ಮನೆಯಲ್ಲೇ ದುರಂತ ಅಂತ್ಯ ಕಂಡಿದ್ದಾಳೆ.
ಐಶ್ವರ್ಯ (19) ಮೃತ ದುರ್ದೈವಿ. ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಬೆಳಗೊಂಡ್ಲು ಗ್ರಾಮದ ಉದಯ್ ಮತ್ತು ಅನಿತಾ ದಂಪತಿ ಪುತ್ರಿ ಐಶ್ವರ್ಯಳ ಮದುವೆ ಕಳೆದ ವರ್ಷ ಕುಣಿಗಲ್ ತಾಲೂಕಿನ ಕಾವೇರಿಪುರದ ನಿವಾಸಿ ನಾಗರಾಜು ಜತೆ ಆಗಿತ್ತು. ನಾಗರಾಜು ಪೆಟ್ರೋಲ್ ಬಂಕ್‌ನಲ್ಲಿ ಕೆಲಸ ಮಾಡುತ್ತಿದ್ದ. ದಂಪತಿ ಇಬ್ಬರೂ ತುಮಕೂರು ನಗರದ ಸರಸ್ವತಿ ಪುರಂನಲ್ಲಿ ವಾಸಿಸುತ್ತಿದ್ದರು.ಇದನ್ನೂ ಓದಿರಿಮಗಳ ಮದ್ವೆ ತಪ್ಪಿಸಲು ಪ್ರಿಯಕರನೊಂದಿಗೆ ಸೇರಿ ಭಾವಿ ಅಳಿಯನ ತಂದೆಯನ್ನೇ ಕೊಂದ ತಾಯಿ!
ಮನೆಯಲ್ಲಿಯೇ ನೇಣುಬಿಗಿದ ಸ್ಥಿತಿಯಲ್ಲಿ ಐಶ್ವರ್ಯಳ ಶವ ಪತ್ತೆಯಾಗಿದೆ. ನನ್ನ ಮಗಳಿಗೆ ಗಂಡನ ಮನೆಯವರು ವರದಕ್ಷಿಣೆ ಕಿರುಕುಳ ಕೊಡುತ್ತಿದ್ದರು. ಐಶ್ವರ್ಯಳನ್ನು ಆಕೆಯ ಗಂಡನೇ ಕೊಲೆ ಮಾಡಿದ್ದಾನೆ ಎಂದು ಆರೋಪಿಸಿ ಮೃತಳ ಪಾಲಕರು ಮಹಿಳಾ ಠಾಣೆಯಲ್ಲಿ‌ ದೂರು ನೀಡಿದ್ದಾರೆ. ಸಿಪಿಐ ರಾಧಾಕೃಷ್ಣ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಐಶ್ವರ್ಯಳ ಗಂಡ ನಾಗರಾಜು ತಲೆ ಮರೆಸಿಕೊಂಡಿದ್ದು, ಆತನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ನನ್ನ ಪತ್ನಿ ಪರಪುರುಷನೊಂದಿಗೆ ಓಡಿಹೋಗಿದ್ದಾಳೆ… ಎಂದವನ ಅಜ್ಜಿ ಹೊಲದಲ್ಲಿ ಅಡಗಿತ್ತು ಭಯಾನಕ ರಹಸ್ಯ!

ಯಾರಿಗೂ ತಿಳಿಯದಂತೆ ಪ್ರೇಯಸಿಯನ್ನ ಮನೆಯಲ್ಲೇ 10 ವರ್ಷ ಅಡಗಿಸಿಟ್ಟಿದ್ದ ಪ್ರಿಯಕರ! ಆ ಕೋಣೆಯ ರಹಸ್ಯ ಬಯಲಾಗಿದ್ದೇ ರೋಚಕ

ರೋಹಿಣಿ ಸಿಂಧೂರಿ ಮನೆಯ ವಿದ್ಯುತ್​ ಬಿಲ್​ ತಿಂಗಳಿಗೆ 50 ಸಾವಿರ ರೂ., ಈಜುಕೊಳಕ್ಕೆ ಕುಡಿವ ನೀರು ಬಳಕೆ…

ಬಾವಿಗೆ ಹಾರಿ ಪ್ರಾಣಬಿಟ್ಟ ಗಂಡ, ಮನೆಯ ಮೇಲೆ ನೇಣಿಗೆ ಕೊರಳೊಡ್ಡಿದ ಪತ್ನಿ! ಡೆತ್​ನೋಟ್​ನಲ್ಲಿದೆ ಸಾವಿನ ರಹಸ್ಯ

ಮಗಳ ಮದ್ವೆ ತಪ್ಪಿಸಲು ಪ್ರಿಯಕರನೊಂದಿಗೆ ಸೇರಿ ಭಾವಿ ಅಳಿಯನ ತಂದೆಯನ್ನೇ ಕೊಂದ ತಾಯಿ!

ಭಟ್ಕಳದಲ್ಲಿ 8 ವರ್ಷದಿಂದ ಅಕ್ರಮವಾಗಿ ನೆಲೆಸಿದ್ದ ಪಾಕಿಸ್ತಾನಿ ಮಹಿಳೆ ಬಂಧನ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 1 =
Remember me
