ಶಿವಮೊಗ್ಗ:ಭಜರಂಗದಳ ಕಾರ್ಯಕರ್ತ ಹರ್ಷನ ಕಗ್ಗೊಲೆ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. ಹರ್ಷನ ಕುಟುಂಬಕ್ಕೆ 25 ಲಕ್ಷ ರೂಪಾಯಿ ಪರಿಹಾರ ಕೊಡುವುದಾಗಿ ತಿಳಿಸಿದ್ದಾರೆ. ಹರ್ಷನ ನಿವಾಸಕ್ಕೆ ಭಾನುವಾರ ಬಿ.ಎಸ್​. ಯಡಿಯೂರಪ್ಪ ಭೇಟಿ ನೀಡ್ತಾರೆ. ಈ ವೇಳೆ ನಾನು ಹಾಗೂ ಯಡಿಯೂರಪ್ಪ ಇಬ್ಬರೂ ಸರ್ಕಾರದ ಪರವಾಗಿ ಹರ್ಷನ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ ನೀಡ್ತೇವೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ವಿಶ್ವನಾಥಶೆಟ್ಟಿ ಕೊಲೆಯಾದಾಗ ಬಿಜೆಪಿ ಅವರ ಕುಟುಂಬಕ್ಕೆ 18 ಲಕ್ಷ ರೂ. ತಲುಪಿಸಿತ್ತು. ಟೀಕೆ ಟಿಪ್ಪಣಿಗಳು ಸ್ವಾಭಾವಿಕ. ಆ ಸಂದರ್ಭದಲ್ಲಿ ನಮ್ಮ ಕರ್ತವ್ಯ ನಾವು ಮಾಡಿದ್ದೇವೆ. ವಿಶ್ವನಾಥಶೆಟ್ಟಿ ಕುಟುಂಬಕ್ಕೂ ಸಹ ಹಿಂದೂ ಸಮಾಜ ಏನೇನು ಸಹಾಯ ಮಾಡಬಹುದೋ ಅದನ್ನು ಮಾಡ್ತೇವೆ. ಕೆಲವು ಮುಸಲ್ಮಾನ್ ಗೂಂಡಾಗಳು ಗಾಜನೂರು ಬಳಿ ವಿಶ್ವನಾಥಶೆಟ್ಟಿ ಅವರನ್ನು ಹತ್ಯೆ ಮಾಡಿದ್ದರು. ಆ ಗೂಂಡಾಗಳ ಕೃತ್ಯವನ್ನು ಕಾಂಗ್ರೆಸ್ ಇದುವರೆಗೂ ಖಂಡಿಸಿಲ್ಲ. ಅಲ್ಲಾವು ಅಕ್ಬರ್ ಅಂತಾ ಕೂಗಿದವರ ಮನೆಗೆ ರಾಜ್ಯದ ನಾಯಕರ ತಂಡವೇ ಭೇಟಿ ನೀಡಿತ್ತು. ಯಾಕೆ ಹಿಂದುಗಳ ಹತ್ಯೆಯಾದಾಗ ಅವರ ನೆನಪು ಆಗಲಿಲ್ವಾ? ಎಂದು ಈಶ್ವರಪ್ಪ ಪ್ರಶ್ನಿಸಿದರು.
ಯು.ಟಿ.ಖಾದರ್ ನೇತೃತ್ವದಲ್ಲಿ ಸಭೆ ಆಯ್ತು. ಎಲ್ಲಾ ಮುಸಲ್ಮಾನ್ ಶಾಸಕರು ಸಭೆ ನಡೆಸಿ, ಇಂತಹ ಘಟನೆಗೆ ಪಿಎಫ್​ಐ, ಎಸ್​ಡಿಪಿಐ ಕಾರಣ ಕ್ರಮ ಕೈಗೊಳ್ಳಿ ಅಂದಿದ್ದರು. ಆ ನಾಯಕರುಗಳೇ ಸಂಘಟನೆ ನಿಷೇಧ ಮಾಡಿ ಅಂದಿದ್ದರು. ಆದರೆ ಡಿಕೆಶಿ, ಸಿದ್ದರಾಮಯ್ಯ ಮಾತ್ರ ಆರ್​ಎಸ್​ಎಸ್ ಕಾರಣ ಅಂತಿದ್ದಾರೆ. ಆಸ್ತಿ-ಪಾಸ್ತಿ ಹಾನಿ‌ ಮಾಡಿದವರಲ್ಲಿ ಹೊರಗಡೆಯವರು ಹೆಚ್ಚಿನ‌ ಸಂಖ್ಯೆಯಲ್ಲಿದ್ದಾರೆ. ನಷ್ಟ ಆಗಿರುವವರಿಗೆ ಸರ್ಕಾರದಿಂದ ಪರಿಹಾರ ಕೊಡ್ತೇವೆ ಎಂದರು.
ಶಿವಮೊಗ್ಗ ಕ್ಷೇತ್ರದಿಂದ ಮುಂಬರುವ ವಿಧಾನಸಭಾ ಚುನಾವಣೆಗೆ ಬಬಿಜೆಪಿಯಿಂದ ಹರ್ಷನ ಕುಟುಂಬಕ್ಕೆ ಟಿಕೆಟ್​ ಕೊಡಲಿ ಅಂತಾ ಹೇಳೋದಕ್ಕೆ ಇಬ್ರಾಹಿಂ ಮತ್ತು ಹರಿಪ್ರಸಾದ್ ಯಾರು? ಬಿಜೆಪಿ ಟಿಕೆಟ್ ಹಂಚಿಕೆ ಮಾಡಲು ಅವರಿಗ್ಯಾರು ಅಧಿಕಾರ ಕೊಟ್ಟದ್ದು ಎಂದು ಈಶ್ವರಪ್ಪ ಕಿಡಿಕಾರಿದರು.
ಶಿವಮೊಗ್ಗದಲ್ಲಿ ದುರಂತ: ಹಣ ವಾಪಸ್ ನೀಡದೆ ಸತಾಯಿಸುತ್ತಿದ್ದಾಕೆಯ ಮನೆ ಮುಂದೆ ಬೆಂಕಿಹಚ್ಚಿಕೊಂಡು ಆತ್ಮಹತ್ಯೆ

ಸಾಗರ ತಾಲೂಕಿನ ಶಾಲೆಯಲ್ಲಿ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಕೊಡುತ್ತಿದ್ದ ಶಿಕ್ಷಕ ಅರೆಸ್ಟ್

ಮರ್ಮಾಂಗ ಕತ್ತರಿಸಿಕೊಂಡು ವ್ಯಕ್ತಿ ಆತ್ಮಹತ್ಯೆ! ರಾಯಚೂರಲ್ಲಿ ಭಯಾನಕ ಘಟನೆ

ಹರ್ಷನ ಅಕ್ಕನಿಗೆ ಬಿಜೆಪಿಯಿಂದ ಟಿಕೆಟ್ ಕೊಡಿ ಎಂದವರಿಗೆ ಗೃಹ ಸಚಿವ ಕೊಟ್ಟ ಟಾಂಗ್​ ಹೀಗಿದೆ…

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:five × 2 =
Remember me
