ಬೆಂಗಳೂರು:2021-22ನೇ ಸಾಲಿನ ದ್ವಿತೀಯ ಪಿಯು ಫಲಿತಾಂಶ ಪ್ರಕಟಗೊಂಡಿದ್ದು, ಕಲಾ, ವಾಣಿಜ್ಯ, ವಿಜ್ಞಾನ ಸೇರಿ ಮೂರು ವಿಭಾಗದಲ್ಲೂ ವಿದ್ಯಾರ್ಥಿನಿಯರೇ ರಾಜ್ಯಕ್ಕೆ ಟಾಪರ್​ ಆಗಿ ಹೊರ ಹೊಮ್ಮಿದ್ದಾರೆ.
ಕಲಾ ವಿಭಾಗದಲ್ಲಿ 600ಕ್ಕೆ 594 ಅಂಕ ಪಡೆದ ಕೂಡ್ಲಿಗಿ ತಾಲೂಕಿನ ಕೊಟ್ಟೂರಿನ ಇಂದು ಪಿಯು ಕಾಲೇಜಿನ ಶ್ವೇತಾ ಭೀಮಾಶಂಕರ್​ ಮತ್ತು ಮಡಿವಾಳರ ಸಹನಾ ಇಬ್ಬರೂ ಮೊದಲ ಸ್ಥಾನ ಹಂಚಿಕೊಂಡಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಬೆಂಗಳೂರಿನ ಆರ್​ವಿ ಪಿಯು ಕಾಲೇಜು ವಿದ್ಯಾರ್ಥಿನಿ ಸಿಮ್ರಾನ್​ ಸೇಶಾ ರಾವ್​ 598 ಅಂಕ ಪಡೆದು ರಾಜ್ಯಕ್ಕೆ ಟಾಪರ್​ ಆಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ನಾಲ್ವರು ವಿದ್ಯಾರ್ಥಿಗಳು 596 ಅಂಕ ಪಡೆದು ಮೊದಲ ರ್ಯಾಂಕ್​ ಬಂದಿದ್ದಾರೆ. ಬೆಂಗಳೂರಿನ ಬಿಜಿಎಸ್ ಪಿಯು ಕಾಲೇಜಿನ ನೀಲು ಸಿಂಗ್​, ಬೆಂಗಳೂರಿನ ಎಸ್​ಟಿ ಕ್ಲಾರೆಟ್ ಕ್ಯಾಂಪಸ್​ ಪಿಯು ಕಾಲೇಜಿನ ಆಕಾಶ್​ ದಾಸ್​, ಚಿಕ್ಕಬಳ್ಳಾಪುರದ ಎಸ್​ಬಿಜಿಎನ್​ಎಸ್​ ರೂರಲ್ ಕ್ಯಾಂಪಸ್​ ಪಿಯು ಕಾಲೇಜಿನ ನೇಹಾ ಬಿ.ಆರ್​., ಬೆಂಗಳೂರಿನ ಜೈನ್ ಪಿಯು ಕಾಲೇಜಿನ ಮಾನವ್​ ವಿನಯ್​ ಕೇಜ್ರಿವಾಲ್​ ಅವರು ವಾಣಿಜ್ಯ ವಿಭಾಗದ ಟಾಪರ್​ಗಳು.
ಕಲಾ ವಿಭಾಗದಲ್ಲಿ 593 ಅಂಕ ಪಡೆದ ನಾಲ್ವರಿಗೆ 2ನೇ ರ‍್ಯಾಂಕ್ಹುಬ್ಬಳಿಯ ಎಸ್​ಜೆಎಂವಿಎಸ್​ ಮಹಿಳಾ ಪಿಯು ಕಾಲೇಜಿನ ಸಾನಿಕಾ ರವಿಶಂಕರ್​ಜೇವರ್ಗಿಯ ಶ್ರೀ ಕದಂಬ ಪಿಯು ಕಾಲೇಜಿನ ನಿಂಗಣ್ಣ ಅಗಸರ್​ಗದಗ ಜಿಲ್ಲೆ ಅನ್ನದಾನೇಶ್ವರ ಪಿಯು ಕಾಲೇಜಿನ ಶಿವರಾಜ್​ಕೂಡ್ಲಿಗಿ ತಾಲೂಕಿನ ಕೊಟ್ಟೂರಿನ ಇಂದು ಪಿಯು ಕಾಲೇಜಿನ ಜಿ.ಮೌನೇಶ್
ವಿಜ್ಞಾನ ವಿಭಾಗದಲ್ಲಿ 597 ಅಂಕ ಪಡೆದ ನಾಲ್ವರಿಗೆ 2ನೇ ರ‍್ಯಾಂಕ್ಮಂಗಳೂರಿನ ಸೇಂಟ್​ ಅಲೋಯ್ಸಿಸ್​ ಪಿಯು ಕಾಲೇಜಿನ ವಿದ್ಯಾರ್ಥಿ ಇಲ್ಹಾಮ್​ಬೆಂಗಳೂರಿನ ಕ್ರೈಸ್ಟ್​ ಪಿಯು ಕಾಲೇಜಿನ ಸಾಯಿಚಿರಾಗ್​ ಬಿ.ಮೂಡಬಿದಿರೆಯ ಆಳ್ವಾಸ್​ ಪಿಯು ಕಾಲೇಜಿನ ಶ್ರೀಕೃಷ್ಣ ಪೇಜಥಾಯ ಪಿ.ಎಸ್​.ಉಡುಪಿಯ ಪೂರ್ಣಪ್ರಜ್ಞಾ ಪಿಯು ಕಾಲೇಜಿನ ಭವ್ಯಾ ನಾಯಕ್​
ವಾಣಿಜ್ಯ ವಿಭಾಗದಲ್ಲಿ 595 ಅಂಕ ಪಡೆದ ಆರು ಮಂದಿಗೆ 2ನೇ ರ‍್ಯಾಂಕ್ಬೆಂಗಳೂರಿನ ಎಸ್​ಬಿ ಮಹಾವೀರ್ ಜೈನ್ ಪಿಯು ಕಾಲೇಜಿನ ಹಿತೇಶ್​ ಎಸ್​.ತುಮಕೂರಿನ ವಿದ್ಯಾನಿಧಿ ಪಿಯು ಕಾಲೇಜಿನ ಸಹನಾ ಟಿ.ಆರ್​.ರಾಮನಗರ ಜಿಲ್ಲೆ ಮಾಗಡಿಯ ಬಿಜಿಎಸ್ ಪಿಯು ಕಾಲೇಜಿನ ಪವಿತ್ರಾ ಕೆ.ಮೂಡುಬಿದರೆಯ ಆಳ್ವಾಸ್ ಪಿಯು ಕಾಲೇಜಿನ ಸಮರ್ಥ ವಿಶ್ವನಾಥ್​ ಜೋಶಿಮಂಗಳೂರಿನ ಸೇಂಟ್ ಅಲೋಶಿಯಸ್ ಪಿಯು ಕಾಲೇಜಿನ ಅನಿಷಾ ಮಲ್ಯಮಂಗಳೂರಿನ ಕೆನರಾ ಪಿಯು ಕಾಲೇಜಿನ ಅಚಲ್​ ಪ್ರವೀಣ್​ ಉಲ್ಲಾಳ್​
ದ್ವಿತೀಯ ಪಿಯು ಫಲಿತಾಂಶ: ಶಿಕ್ಷಣ ಸಚಿವರ ತವರು ಜಿಲ್ಲೆ ತುಮಕೂರಿಗೆ 28ನೇ ಸ್ಥಾನ!

ದ್ವಿತೀಯ ಪಿಯು ಫಲಿತಾಂಶ ಪ್ರಕಟ: ದಕ್ಷಿಣ ಕನ್ನಡ ಮೇಲುಗೈ, ಚಿತ್ರದುರ್ಗಕ್ಕೆ ಕೊನೇ ಸ್ಥಾನ

ಕುಜ ದೋಷಕ್ಕೆ ಮಹಿಳಾ ಪೊಲೀಸ್​ ಬಲಿ! ಮದ್ವೆ ನಿರಾಕರಿಸಿ ವಿಷ ಕುಡಿಸಿದ್ದ ಪ್ರಿಯಕರ… ಶಿವಮೊಗ್ಗದಲ್ಲಿ ಮನಕಲಕುವ ಘಟನೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 − 5 =
Remember me
