ತುಮಕೂರು:2021-22ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಶನಿವಾರ ಪ್ರಕಟಗೊಂಡಿದ್ದು, ಈ ಬಾರಿ ಕಲಾ, ವಾಣಿಜ್ಯ, ವಿಜ್ಞಾನ ಸೇರಿ 3 ವಿಭಾಗದಲ್ಲೂ ರಾಜ್ಯಕ್ಕೆ ಒಟ್ಟಾರೆ ಶೇ.61.88 ಫಲಿತಾಂಶ ಬಂದಿದೆ. ಈ ಪೈಕಿ ದಕ್ಷಿಣ ಕನ್ನಡ ಜಿಲ್ಲೆಯು ರಾಜ್ಯಕ್ಕೆ ಟಾಪರ್​ ಆಗಿ ಹೊರ ಹೊಮ್ಮಿದರೆ, ಶೈಕ್ಷಣಿಕ ಜಿಲ್ಲೆ, ಶಿಕ್ಷಣ ಸಚಿವರ ತವರು ತುಮಕೂರು ಜಿಲ್ಲೆ 28ನೇ ಸ್ಥಾನಗಳಿಸಿದೆ.
ದಕ್ಷಿಣ ಕನ್ನಡ ಜಿಲ್ಲೆಯು ಶೇ.88.02 ಫಲಿತಾಂಶ ಪಡೆಯುವ ಮೂಲಕ ರಾಜ್ಯಕ್ಕೆ ಟಾಪರ್​ ಆಗಿ ಹೊರ ಹೊಮ್ಮಿದರೆ, ತುಮಕೂರು ಜಿಲ್ಲೆ ಶೇ.58.90 ಫಲಿತಾಂಶ ಪಡೆದು 28ನೇ ಸ್ಥಾನದಲ್ಲಿದೆ. ತುಮಕೂರಿನ ವಿದ್ಯಾನಿಧಿ ಕಾಲೇಜಿನ ಸಹನಾ ಟಿ.ಆರ್. ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ 2ನೇ ಟಾಪರ್ ಆಗಿ ಹೊರಹೊಮ್ಮಿದ್ದಾರೆ.
ತುಮಕೂರು ಜಿಲ್ಲೆಗೆ ದ್ವಿತೀಯ ಪಿಯು ಫಲಿತಾಂಶದಲ್ಲಿ ಲಭಿಸಿದ ಸ್ಥಾನ2021-22ನೇ ಸಾಲಿನಲ್ಲಿ 28ನೇ ಸ್ಥಾನ2020-21ನೇ ಸಾಲಿನಲ್ಲಿ 28ನೇ ಸ್ಥಾನ2019-20ನೇ ಸಾಲಿನಲ್ಲಿ 17ನೇ ಸ್ಥಾನ2018-20ನೇ ಸಾಲಿನಲ್ಲಿ 21ನೇ ಸ್ಥಾನ2017-18ನೇ ಸಾಲಿನಲ್ಲಿ 22ನೇ ಸ್ಥಾನ2016-17ನೇ ಸಾಲಿನಲ್ಲಿ 23ನೇ ಸ್ಥಾನ2015-16ನೇ ಸಾಲಿನಲ್ಲಿ 24ನೇ ಸ್ಥಾನ
https://pue.karnataka.gov.in/ವೆಬ್​ಸೈಟ್​ನಲ್ಲಿ ವಿದ್ಯಾರ್ಥಿಗಳು ಫಲಿತಾಂಶ ವೀಕ್ಷಿಸಬಹುದು. ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿರುವ ಮೊಬೈಲ್​ ಸಂಖ್ಯೆಗೂ ಫಲಿತಾಂಶದ ಸಂದೇಶ ಕಳುಹಿಸಲಾಗುತ್ತದೆ.
ದ್ವಿತೀಯ ಪಿಯು ಫಲಿತಾಂಶ ಪ್ರಕಟ: ದಕ್ಷಿಣ ಕನ್ನಡ ಮೇಲುಗೈ, ಚಿತ್ರದುರ್ಗಕ್ಕೆ ಕೊನೇ ಸ್ಥಾನ

ದಂತ ಚಿಕಿತ್ಸೆಗೆ ಹೋದ ಸ್ಯಾಂಡಲ್​ವುಡ್​ ನಟಿಯ ಮುಖವೇ ವಿರೂಪ! ವೈದ್ಯೆ ಎಡವಟ್ಟಿಗೆ ನಲುಗಿದ ನಟಿಯ ಕಷ್ಟ ಹೇಳತೀರದು

ಕುಜ ದೋಷಕ್ಕೆ ಮಹಿಳಾ ಪೊಲೀಸ್​ ಬಲಿ! ಮದ್ವೆ ನಿರಾಕರಿಸಿ ವಿಷ ಕುಡಿಸಿದ್ದ ಪ್ರಿಯಕರ… ಶಿವಮೊಗ್ಗದಲ್ಲಿ ಮನಕಲಕುವ ಘಟನೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 4 =
Remember me
