ಮೈಸೂರು:ಇಲ್ಲೊಬ್ಬ ಮಹಿಳೆ ಮೊಬೈಲ್​ನಲ್ಲೇ ವ್ಯವಹರಿಸಿ ತನ್ನ ಮೂರು ದಿನದ ಹಸುಗೂಸನ್ನೇ ಮಾರಾಟ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.
ಬೆಂಗಳೂರಿನ ರೋಜಾ ಎಂಬಾಕೆಗೆ 7 ತಿಂಗಳ ಹಿಂದೆ ಗಂಡು ಮಗು ಆಗಿತ್ತು. ಆದರೆ ಆಕೆ ನನಗೆ ಹೆಣ್ಣು ಮಗು ಬೇಕಿತ್ತು, ಗಂಡು ಮಗು ಬೇಡ ಎಂದು ಎಚ್‌.ಡಿ.ಕೋಟೆ ತಾಲೂಕಿನ ಟೈಗರ್ ಬ್ಲಾಕ್​ನ ಹಕ್ಕಿಪಿಕ್ಕಿ ಜನಾಂಗದ ದಂಪತಿಗೆ ಮಾರಾಟ ಮಾಡಿದ್ದಳು.ಇದನ್ನೂ ಓದಿರಿಯಾರಿಗೂ ತಿಳಿಯದಂತೆ ಪ್ರೇಯಸಿಯನ್ನ ಮನೆಯಲ್ಲೇ 10 ವರ್ಷ ಅಡಗಿಸಿಟ್ಟಿದ್ದ ಪ್ರಿಯಕರ! ಆ ಕೋಣೆಯ ರಹಸ್ಯ ಬಯಲಾಗಿದ್ದೇ ರೋಚಕ
ಅಂಬರೀಶ್ ಮತ್ತು ಮಧುಮಾಲತಿ ದಂಪತಿಯು ರೋಜಾಗೆ 1.5 ಲಕ್ಷ ರೂ. ಕೊಟ್ಟು ಮಗುವನ್ನ ಖರೀದಿಸಿದ್ದರು. ಈ ದಂಪತಿ ತಲೆಕೂದಲು ಬೆಳೆಯುವ ತೈಲ ಮಾರಾಟ ಮಾಡಿಕೊಂಡು ಜೀವನ ಸಾಗಿಸುತ್ತಿದ್ದು, ತೈಲ ಮಾರಾಟದ ವೇಳೆ ರೋಜಾಳ ಪರಿಚಯವಾಗಿತ್ತು. ಹಾಗಾಗಿ ಇವರ ಬಳಿ ರೋಜಾ ಮೊಬೈಲ್ ಕರೆ ಮೂಲಕವೇ ಚೌಕಾಸಿ ನಡೆಸಿ ಅಂತಿಮವಾಗಿ 1.5 ಲಕ್ಷ ರೂ.ಗೆ ಮಗು ಮಾರಿದ್ದಳು. ಅಂದಿನಿಂದ ಆ ಮಗು ಟೈಗರ್ ಬ್ಲಾಕ್​ನಲ್ಲಿ ಅಂಬರೀಷ್​ ಮತ್ತು ಮಧುಮಾಲಾತಿ ಆಶ್ರಯದಲ್ಲೇ ಬೆಳೆಯುತ್ತಿದೆ.
ಇದೀಗ ಅಂದರೆ 7 ತಿಂಗಳ ಬಳಿಕ ಬೆಂಗಳೂರಿಂದ ಟೈಗರ್​ ಬ್ಲಾಕ್​ಗೆ ಬಂದ ರೋಜಾ, ಮಗು ಕೊಡುವಂತೆ ರಂಪಾಟ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಇದೀಗ ಈ ಮಗು ಅಪಹರಣವಾಗಿತ್ತೇ? ಎಂಬ ಅನುಮಾನವೂ ಕಾಡುತ್ತಿದೆ. ಎಚ್.ಡಿ.ಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ. (ದಿಗ್ವಿಜಯ ನ್ಯೂಸ್​)
ಯಾರಿಗೂ ತಿಳಿಯದಂತೆ ಪ್ರೇಯಸಿಯನ್ನ ಮನೆಯಲ್ಲೇ 10 ವರ್ಷ ಅಡಗಿಸಿಟ್ಟಿದ್ದ ಪ್ರಿಯಕರ! ಆ ಕೋಣೆಯ ರಹಸ್ಯ ಬಯಲಾಗಿದ್ದೇ ರೋಚಕ

ಬಾವಿಗೆ ಹಾರಿ ಪ್ರಾಣಬಿಟ್ಟ ಗಂಡ, ಮನೆಯ ಮೇಲೆ ನೇಣಿಗೆ ಕೊರಳೊಡ್ಡಿದ ಪತ್ನಿ! ಡೆತ್​ನೋಟ್​ನಲ್ಲಿದೆ ಸಾವಿನ ರಹಸ್ಯ

ಸಿನಿಮಾದಲ್ಲಿ ಆ 37 ಮೆಸೇಜ್ ತೋರಿಸ್ತೀರಾ? ಡಿ.ಕೆ.ರವಿ ಪಾತ್ರ ಮಾಡ್ತೀರಾ ಎಂದು ಆಫರ್​ ಕೊಟ್ಟವರಿಗೆ ಚಕ್ರವರ್ತಿ ಪ್ರಶ್ನೆ

ಬೈಕ್​ ಮೇಲಿದ್ದ ಹೆಲ್ಮೆಟ್​ ನುಂಗಿದ ಆನೆ! ಪಾಪ ಹಸಿವಾಗಿತ್ತೇನೋ… ಸಖತ್​ ವೈರಲ್​ ಆಗ್ತಿದೆ ಈ ವಿಡಿಯೋ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 4 =
Remember me
