ತುಮಕೂರು:ಶಿವಮೊಗ್ಗ ರೈಲ್ವೆ ನಿಲ್ದಾಣದ ಲಿಫ್ಟ್​ನಲ್ಲಿ ಸಿಕ್ಕಿದ್ದ ಬರೋಬ್ಬರಿ 300 ಗ್ರಾಂ ಚಿನ್ನಾಭರಣವಿದ್ದ ಬ್ಯಾಗ್​ ಅನ್ನು ವಾಪಸ್​ ತಲುಪಿಸಿದ ತುಮಕೂರು ತಾಲೂಕು ವಕ್ಕೋಡಿಯ ಗುರುರಾಜ್​ ಕಾಲಿಗೆ ಬಿದ್ದು ಬ್ಯಾಗ್​ನ​ ವಾರಸುದಾರರು ಕೃತಜ್ಞತೆ ಅರ್ಪಿಸಿದ್ದಾರೆ.
ಶಿವಮೊಗ್ಗದ ವಿನೋಬಾ ನಗರದ ನಿವಾಸಿ ಅರ್ಪಿತಾ ಅವರು 300 ಗ್ರಾಂ ಚಿನ್ನಾಭರಣವಿದ್ದ ಬ್ಯಾಗ್ ಅನ್ನು​ ಕಳೆದುಕೊಂಡು ಕಂಗಾಲಾಗಿದ್ದರು. ಚಿಂತಾಮಣಿಯಲ್ಲಿ ಸಂಬಂಧಿಕರ ಮದುವೆಗೆ ತೆರಳಿದ್ದ ಅರ್ಪಿತಾ ಕುಟುಂಬ, ರೈಲ್ವೆ ನಿಲ್ದಾಣದಲ್ಲಿ ಚಿನ್ನಾಭರಣವಿದ್ದ ಬ್ಯಾಗ್​ ಕಳೆದುಕೊಂಡಿತ್ತು. ತುಮಕೂರು ನ್ಯಾಯಾಲಯದಲ್ಲಿ ಪ್ರಥಮ ದರ್ಜೆ ಸಹಾಯಕರಾಗಿರುವ ಗುರುರಾಜ್​, ಕಾರ್ಯನಿಮಿತ್ತ ಶಿವಮೊಗ್ಗಕ್ಕೆ ತೆರಳಿದ್ದಾಗ ರೈಲ್ವೆ ನಿಲ್ದಾಣದಲ್ಲಿ ಆ ಬ್ಯಾಗ್​ ಸಿಕ್ಕಿತ್ತು. ನಿಲ್ದಾಣದಲ್ಲಿ ಬ್ಯಾಗ್​ನ ವಾರಸುದಾರರಿಗಾಗಿ ಹುಡುಕಾಡಿದರೂ ಯಾರೂ ಸಿಕ್ಕಿರಲಿಲ್ಲ. ಅಷ್ಟರಲ್ಲಿ ರೈಲು ಆಗಮಿಸಿದ ಹಿನ್ನೆಲೆಯಲ್ಲಿ ಬ್ಯಾಗನ್ನು ಮನೆಗೆ ತಂದು ಪೊಲೀಸರಿಗೆ ಗುರುರಾಜ್​ ಮಾಹಿತಿ ನೀಡಿದ್ದರು.
ಅತ್ತ ಬ್ಯಾಗ್​ ಅನ್ನು ಕಳೆದುಕೊಂಡ ಅರ್ಪಿತಾ, ಈ ಬಗ್ಗೆ ರೈಲ್ವೆ ಪೊಲೀಸ್​ ಠಾಣೆಗೆ ದೂರು ನೀಡಲು ತೆರಳಿದಾಗ ಗುರುರಾಜ್​ ಎಂಬುವರಿಗೆ ಬ್ಯಾಗ್​ ಸಿಕ್ಕಿರುವ ವಿಚಾರ ತಿಳಿದಿದೆ. ತುಮಕೂರು ತಾಲೂಕಿನ ವಕ್ಕೋಡಿಗೆ ಆಗಮಿಸಿದ ಅರ್ಪಿತಾ ಕುಟುಂಬ ಸದಸ್ಯರು ಗುರುರಾಜ್​ ದಂಪತಿಯ ಕಾಲಿಗೆ ನಮಸ್ಕರಿಸಿ ಬ್ಯಾಗ್​ ಸ್ವೀಕರಿಸಿ, ಕಣ್ಣೀರು ಸುರಿಸಿದರು.
ಬಸ್​ನಲ್ಲಿ ಚಿನ್ನ ಕಳೆದುಕೊಂಡು ಕಂಗಾಲಾಗಿದ್ದ ಮಹಿಳೆ: ಮಾನವೀಯತೆ ಮೆರೆದ ಮಧುಗಿರಿ ಡಿಪೋ ಕಂಡಕ್ಟರ್ ಶ್ರೀಧರ್​

ತ್ರಿವೇಣಿ ಸಂಗಮದಲ್ಲಿ ಅ.13ರಿಂದ ದಕ್ಷಿಣ ಭಾರತದ ಮಹಾ ಕುಂಭಮೇಳ

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:10 − 9 =
Remember me
