ಚಿತ್ರದುರ್ಗ:ಚಾಕೊಲೇಟ್​ ಎಂದು ಭಾವಿಸಿ ಮಾತ್ರೆ ತಿಂದ 4 ವರ್ಷದ ಮಗು ಸಾವನ್ನಪ್ಪಿದೆ. ಈ ಘಟನೆ ಚಿತ್ರದುರ್ಗದ ಕಡಬನಕಟ್ಟೆ ಹಳ್ಳಿಯಲ್ಲಿ ನಡೆದಿದೆ.
ಹೃತ್ವಿಕ್(4) ಮೃತ ಕಂದಮ್ಮ. ಚಾಕೊಲೇಟ್​ ಎಂದು ಭಾವಿಸಿ ಮಾತ್ರೆ ತಿಂದು ಈ 4 ವರ್ಷದ ಮಗು ಸಾವನ್ನಪ್ಪಿದೆ. ತುರುವನೂರು ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಮಗುವನ್ನು ಕಳೆದುಕೊಂಡ ಕುಟುಂಬಸ್ಥರ ನೋವು ಹೇಳತೀರದು.
ಇತ್ತೀಚೆಗೆ ಮೃತ ಮಗುವಿನ ತಾಯಿ ಪವಿತ್ರಾ ಎಂಬುವವರಿಗೆ ಶಸ್ತ್ರಚಿಕಿತ್ಸೆಯೊಂದು ನಡೆದಿತ್ತು. ಈ ಹಿನ್ನಲೆ ವೈದ್ಯರು ನೀಡಿದ್ದ ಮಾತ್ರೆಗಳನ್ನು ಮನೆಯಲ್ಲಿಟ್ಟಿದ್ದರು. ಮಗು ಆಟವಾಡುತ್ತಿತ್ತು. ಅಕಸ್ಮಾತ್​ ಆಗಿ ಚಾಕೊಲೇಟ್ ಎಂದು ಭಾವಿಸಿ ಮಾತ್ರೆಗಳನ್ನು ಸೇವಿಸಿದ್ದ ಮಗು ಅಸ್ವಸ್ಥಗೊಂಡಿತ್ತು.ಚಿಕಿತ್ಸೆಗಾಗಿ ಬೆಂಗಳೂರಿಗೆ ಶಿಫ್ಟ್ ಮಾಡಿಲಾಗಿತ್ತು.
ಕಳೆದ 4 ದಿನಗಳ ಹಿಂದೆ ಮನೆಯಲ್ಲಿದ್ದ ಮಾತ್ರೆ ಸೇವಿಸಿದ್ದ ಮಗುವನ್ನು ಕೂಡಲೇ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಗು ಸಾವನ್ನಪ್ಪಿದೆ. ಕಂದನನ್ನು ಕಳೆದುಕೊಂಡ ತಾಯಿಯ ಆಕ್ರಂದನ ಮುಗಿಲು ಮುಟ್ಟಿದೆ.
ನಟ ಅಜಿತ್ ಕುಮಾರ್ ಆಸ್ಪತ್ರೆಗೆ ದಾಖಲು

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:1 × four =
Remember me
