ಬೆಂಗಳೂರು:14 ವರ್ಷದ ಬಾಲಕಿಯನ್ನ ಮದುವೆಯಾದ 45 ವರ್ಷದ ವ್ಯಕ್ತಿಯನ್ನ ಯಲಹಂಕ ನ್ಯೂ ಟೌನ್ ಪೊಲೀಸರು ಬಂಧಿಸಿದ್ದಾರೆ.
ಈತನಿಗೆ ಈಗಾಗಲೇ ಮದ್ವೆಯಾಗಿ, 17 ವರ್ಷದ ಮಗ ಕೂಡ ಇದ್ದಾನೆ. ಆದರೂ ಬಡ ದಂಪತಿಯೊಬ್ಬರಿಗೆ ಹಣದಾಸೆ ತೋರಿಸಿ, ಅವರ ಅಪ್ರಾಪ್ತ ವಯಸ್ಸಿನ ಮಗಳನ್ನು ಬಲವಂತವಾಗಿ ಮದ್ವೆಯಾಗಿದ್ದಾನೆ. ಗುರುಪ್ರಸಾದ್ (45) ಬಂಧಿತ.
ಗುರುಪ್ರಸಾದ್​ಗೆ 18 ವರ್ಷಗಳ ಹಿಂದೆಯೇ ಮದ್ವೆ ಆಗಿದೆ. 17 ವರ್ಷ ವಯಸ್ಸಿನ ಮಗ ಕೂಡ ಇದ್ದಾನೆ. ಕೆಲ ವರ್ಷಗಳಿಂದ ಹೆಂಡತಿಯಿಂದ ದೂರವಾಗಿದ್ದ ಗುರುಪ್ರಸಾದ್​, ಅಪ್ರಾಪ್ತೆ ಮೇಲೆ ಕಣ್ಣು ಹಾಕಿದ್ದ. ಬಾಲಕಿಯ ಪೋಷಕರಿಗೆ ಹಣದಾಸೆ ತೋರಿಸಿ, ಸೆ.7ರಂದು ಬೆಂಗಳೂರು ಹೊರ ವಲಯಕ್ಕೆ ಕರೆದೊಯ್ದು ಬಾಲಕಿಯನ್ನು ಮದುವೆಯಾಗಿದ್ದ. ಬಾಲಕಿಗೆ ಇಷ್ಟವಿಲ್ಲದಿದ್ದರೂ ಮದುವೆಯಾಗಿದ್ದ.
ಈ ಬಗ್ಗೆ ಪರಿಚಯಸ್ಥರ ಬಳಿ ಬಾಲಕಿ ನೋವು ತೋಡಿಕೊಂಡು ಕಣ್ಣೀರಿಟ್ಟದ್ದಳು. ಆಕೆಯ ಕಷ್ಟಕ್ಕೆ ಮರುಗಿದ ಪರಿಚಯಸ್ಥರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಗುರುಪ್ರಸಾದ್​ ಮತ್ತು ಬಾಲಕಿಯ ತಂದೆ-ತಾಯಿಯನ್ನೂ ಬಂಧಿಸಿದ್ದಾರೆ.
ಅಪ್ರಾಪ್ತನ ವಿರುದ್ಧ ಪೋಕ್ಸೋ ಕೇಸ್​ ರದ್ದು: ರಾಜಿಯಾಗಿದ್ದ ಆರೋಪಿ- ಸಂತ್ರಸ್ತೆ ಪಾಲಕರು, ಬಾಲಕನ ಭವಿಷ್ಯ ಪರಿಗಣಿಸಿ ಪ್ರಕರಣದಿಂದ ಮುಕ್ತಿ

ಅನೇಕ ಪ್ರಥಮಗಳ ಒಡತಿ ರಾಣಿ ಎಲಿಜಬೆತ್​! ಇಲ್ಲಿದೆ ಜೀವನಪಥ… ತನ್ನ ಅಜ್ಜಿ ವಿಕ್ಟೋರಿಯಾ ಹೆಸರಲ್ಲಿದ್ದ ದಾಖಲೆಯನ್ನೂ ಮುರಿದಿದ್ದರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 4 =
Remember me
