ದಾವಣಗೆರೆ:ಕೋಲಾರ ಜಿಲ್ಲೆ ಮುಳಬಾಗಿಲು ಮೂಲದ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರೊಬೆಷನರಿ ಪೊಲೀಸ್​ ಸಬ್​ ಇನ್​ಸ್ಪೆಕ್ಟರ್​ 7 ತಿಂಗಳ ಗರ್ಭಿಣಿ ಶಾಮಿಲಿ ಕರೊನಾಗೆ ಬಲಿಯಾದ ದುರ್ಘಟನೆ ಇನ್ನೂ ಹಸಿಯಾಗಿಯೇ ಇದೆ. ಈ ನಡುವೆ ಇಂತಹದ್ದೇ ಮತ್ತೊಂದು ದುರಂತ ಸಂಭವಿಸಿದ್ದು, ಮಹಾಮಾರಿಗೆ 5 ತಿಂಗಳ ಗರ್ಭಿಣಿ ಪೇದೆ ಬಲಿಯಾಗಿದ್ದಾರೆ.
ಮಹಿಳಾ ಪೊಲೀಸ್​ ಪೇದೆ ಚಂದ್ರಕಲಾ (34) ಮೃತರು. ದಾವಣಗೆರೆ ಜಿಲ್ಲೆ ಹೊನ್ನಾಳಿ ವೃತ್ತ ಕಚೇರಿಯಲ್ಲಿ ಚಂದ್ರಕಲಾ ಕರ್ತವ್ಯ ನಿರ್ವಹಿಸುತ್ತಿದ್ದರು. ಇವರ ಪತಿ ಓಜಪ್ಪ ಅವರು ಬಸವಾಪಟ್ಟಣ ಪೊಲೀಸ್‌ ಠಾಣೆ ಪೇದೆ. ಪೊಲೀಸ್​ ಇಲಾಖೆಯಲ್ಲಿಯೇ ಕೆಲಸ ಮಾಡುತ್ತಿದ್ದ ದಂಪತಿ ಬಾಳಲ್ಲಿ ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಇನ್ನು ನಾಲ್ಕು ತಿಂಗಳಲ್ಲಿ ಮುದ್ದಾದ ಮಗುವಿನ ಆಗಮದ ಸಂಭ್ರಮ ಕಳೆಗಟ್ಟಬೇಕಿತ್ತು.
ಆದರೆ 10 ದಿನದ ಹಿಂದೆಯೇ 5 ತಿಂಗಳ ಗರ್ಭಿಣಿ ಚಂದ್ರಕಲಾಗೆ ಕರೊನಾ ಸೋಂಕು ಕಾಣಸಿಕೊಂಡಿತ್ತು. ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗ ನಾರಾಯಣ ಹೃದಯಾಲಯಕ್ಕೆ ವರ್ಗಾಯಿಸಲಾಗಿತ್ತು. ಗರ್ಭಿಣಿಯಾಗಿದ್ದ ಕಾರಣ ಚಂದ್ರಕಲಾ ಕರೊನಾ ವ್ಯಾಕ್ಸಿನ್​ ಹಾಕಿಸಿಕೊಂಡಿರಲಿಲ್ಲ. ಚಿಕಿತ್ಸೆ ಫಲಿಸದೆ ಇಂದು(ಮಂಗಳವಾರ) ಕೊನೆಯುಸಿರೆಳೆದಿದ್ದಾರೆ. ಹೊನ್ನಾಳಿ ತಾಲೂಕಿನ ಮಾರಿಕೊಪ್ಪ ಗ್ರಾಮದಲ್ಲಿ ಮೃತರ ಅಂತ್ರಕ್ರಿಯೆ ನೆರವೇರಿಸಲಾಗಿದೆ.
ಮೈಸೂರಿನಲ್ಲಿ ಇಂಜಿನಿಯರ್​ ಸಾವು! 2 ತಿಂಗಳ ಹಿಂದಷ್ಟೇ ಮದ್ವೆ ಆಗಿದ್ದವರ ಬಾಳಿಗೆ ಕೊಳ್ಳಿ ಇಟ್ಟಿದ್ದೇನು?

ಗಂಡನ ಕೊಂದು ಪ್ರಿಯಕರನ ಮನೆಯ ಹೋಮಕುಂಡದಲ್ಲಿ ಶವ ಸುಟ್ಟಿದ್ದ ಪತ್ನಿ: ಭಾಸ್ಕರ್​ ಶೆಟ್ಟಿ ಹಂತಕರಿಗೆ ಶಿಕ್ಷೆ ಪ್ರಕಟ

‘ಸ್ವಾರ್ಥಕ್ಕಾಗಿ ಕೆಟ್ಟ ಹೆಸ್ರು ತಂದ ಸಿಂಧೂರಿ ಜನ್ರ ಬಳಿ ಕ್ಷಮೆ ಕೇಳಲಿ.. ಐಎಎಸ್ ಅಧಿಕಾರಿಯನ್ನ ಕೂಡಲೇ ಬಂಧಿಸಿ…’

ತಡರಾತ್ರಿ ಬಾತ್​ರೂಂನಲ್ಲಿ ರಕ್ತನಾಳ ಕೊಯ್ದುಕೊಂಡು ಕ್ರಷರ್​ ಮಾಲೀಕ ಆತ್ಮಹತ್ಯೆ!

ಅತ್ತ ಪ್ರಿಯಕರನೊಂದಿಗೆ ಓಡಿ ಹೋದ ಮಗಳು, ಇತ್ತ ತೋಟದ ಮನೆಯಲ್ಲಿ ನಡೆಯಿತು ಘನಘೋರ ದುರಂತ!

ಕರೊನಾ ಕುರಿತು ಬಬಲಾದಿ ಸದಾಶಿವ ಅಜ್ಜ ನುಡಿದ ಭವಿಷ್ಯ ನಿಜವಾಯ್ತು! ಮಠದತ್ತ ದೌಡಾಯಿಸಿದ ಭಕ್ತರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 − 2 =
Remember me
