|ಎ.ಎನ್​.ಪ್ರಸನ್ನಚಿಕ್ಕಮಗಳೂರುನನ್ನ ಸೂರಿ ಸಿಕ್ಕುದ್ನಾ ಸಾರ್​, ಬೇಗ ಹುಡುಕಿಕೊಡಿ ಅಣ್ಣ… ಸೂರಿಯನ್ನು ಬಿಟ್ಟು ನಾನೊಬ್ಬಳೇ ಎಲ್ಲಿ ಹೋಗಲಿ… ಎಂದು ಬಿಕ್ಕಿಬಿಕ್ಕಿ ಅಳುತ್ತಾ ಸೆರಗೊಡ್ಡಿ ಅಂಗಲಾಚುತ್ತಿದ್ದ ದೃಶ್ಯ ನೋಡಿದ್ರೆ ಕರುಳು ಕಿವುಚುವಂತಿತ್ತು. ಇದು ಯಗಚಿ ಹಳ್ಳ ದಾಟುವ ವೇಳೆ ಕಣ್ಣೆದುರೇ ನೀರಲ್ಲಿ ಗಂಡ ಮುಳುಗಿದ್ದನ್ನು ಕಂಡು ಕಂಗಾಲಾದ ಪತ್ನಿ ಗೀತಾಳ ರೋದನ.
ಪ್ರೀತಿನೇ ಆ ದ್ಯಾವ್ರು ತಂದ ಆಸ್ತಿ ನಮ್ಮಾ ಬಾಳ್ವೆಗೆ.. ಹಸಿವಿನಲ್ಲೂ ಹಬ್ಬಾನೆ. ದಿನವು ನಿತ್ಯವೂ…ಡಾ.ರಾಜ್​ಕುಮಾರ್​ ಮತ್ತು ಭಾರತಿ ಅಭಿನಯದ ‘ದೂರದ ಬೆಟ್ಟ’ ಸಿನಿಮಾ ಹಾಡಿಗೆ ಅನ್ವಯವಾಗುವಂತಿತ್ತು ಈ ಜೋಡಿ. ಆರ್ಥಿಕ ಬಡತನ ಇತ್ತೇ ಹೊರತು ಪ್ರೀತಿಗೆ ಕೊರತೆ ಇರಲಿಲ್ಲ. ಇರುವುದರಲ್ಲೇ ತೃಪ್ತಿ ಕಂಡು ದಿನ ಕಳೆಯುತ್ತಿತ್ತು ಈ ಜೋಡಿ.
ಕಾಫಿ ತೋಟದ ಕೆಲಸ ಮಾಡಿಕೊಂಡಿದ್ದ ಸೂರಿ ಮತ್ತು ಗೀತಾ ಇಬ್ಬರೂ ಚಿಂದಿ ಆಯುವ ಕೆಲಸವನ್ನ ಆಯ್ದುಕೊಂಡದ್ದು ಪ್ರೇಮವಿವಾಹದಿಂದ. ಹೊನ್ನಾಳಿಯ ಸೂರಿ ಮತ್ತು ಚಿಕ್ಕಮಗಳೂರು ತಾಲೂಕು ಹೊಸಪೇಟೆಯ ಗೀತಾ ಕಾಫಿ ತೋಟದಲ್ಲಿ ಕೆಲಸ ಮಾಡುವಾಗ ಪ್ರೀತಿಸಿ 6 ವರ್ಷದ ಹಿಂದೆ ಮಾದುವೆಯಾಗಿದ್ದರು. ದಂಪತಿಗೆ ಮಕ್ಕಳಿರಲಿಲ್ಲ. ಕುಟುಂಬದವರೂ ಇವರಿಬ್ಬರನ್ನು ಸೇರಿಸಿಕೊಂಡಿರಲಿಲ್ಲ. ಹೀಗಾಗಿ ಕಾಫಿತೋಟದ ಕೆಲಸ ಬಿಟ್ಟು ಇಬ್ಬರೂ ನಗರದಲ್ಲಿ ಗುಜರಿ ವಸ್ತು ಆಯುವ ಕೆಲಸ ಆರಂಭಿಸಿದರು. ಗುಜರಿ ವಸ್ತುಗಳನ್ನು ಮಾರಿ ಅದರಿಂದ ಬಂದ ಹಣದಲ್ಲೇ ಹಸಿವು ನೀಗಿಸಿಕೊಳ್ಳುತ್ತಿದ್ದ ಈ ದಂಪತಿಗೆ ಬಸ್​ ನಿಲ್ದಾಣವೇ ಸೂರಾಗಿತ್ತು. ನಿತ್ಯ ರಾತ್ರಿ ಬಸ್​ ನಿಲ್ದಾಣದಲ್ಲೇ ಮಲಗುತ್ತಿದ್ದರು. ಚಿಂದಿ ಆಯುವ ಸಮಯದಲ್ಲೇ ಸೂರಿ ಹಳ್ಳದಲ್ಲಿ ಕೊಚ್ಚಿಕೊಂಡು ಹೋಗಿದ್ದಾನೆ.

‘ಎಂದಿನಂತೆ ಮಂಗಳವಾರ ಚಿಂದಿ ಆಯುತ್ತಿರುವಾಗ ಹಳ್ಳದ ಬದುನಲ್ಲಿ ನಿಂತಿದ್ದಾಗ ಸೂರಿ ನೀರಿನಲ್ಲಿದ್ದ ಪ್ಲಾಸ್ಟಿಕ್​ ಬಾಟಲಿಗಳನ್ನು ಹೆಕ್ಕಿ ಕೊಡುತ್ತಿದ್ದ. ಅದನ್ನೆಲ್ಲ ನಾನು ಚೀಲದಲ್ಲಿ ತುಂಬಿಸುತ್ತಿದ್ದೆ. ಇನ್ನೇನು ಚೀಲ ಪೂರ್ಣವಾಗುವಷ್ಟರಲ್ಲಿ ಸೂರಿ ಮುಳುಗಿಬಿಟ್ಟ. ನನ್ನ ಸೂರಿ ಸಿಕ್ಕುದ್ನಾ ಸಾರ್… ಬೇಗ ಹುಡುಕಿಕೊಡಿ ಅಣ್ಣ…’ ಎಂದು ಗೀತಾ ರೋದಿಸತೊಡಗಿದಾಗ ನೆರೆದಿದ್ದವರಿಗೆ ಮಾತೇ ಹೊರಡಲಿಲ್ಲ.

‘ಚಿಂದಿ ಆಯುತ್ತಲೇ ನನ್ನ ಸೂರಿ ನೀರಲ್ಲಿ ಮುಳುಗಿದ. ಕೂಗಿಕೊಂಡು ಓಡಿ ಬಂದೆ. ಗುಜರಿ ಬ್ಯಾಗ್​ ಈಗಲೂ ಅಲ್ಲೇ ಇದೆ. ಬೆಳಗ್ಗೆ ಬಂದು ಬಾಟಲಿ​ ಆಯ್ದುಕೊಂಡು ಗುಜರಿ ಅಂಗಡಿಗೆ ಮಾರಿ ಅದರಲ್ಲಿ 300 ರೂ. ಬಂದಿತ್ತು. ಪ್ಲಾಸ್ಟಿಕ್​ ಬಾಟಲಿ ಜಾಸ್ತಿ ಇವೆ ಎಂದು ಮತ್ತೆ ಇಲ್ಲಿಗೆ ಬಂದೆವು. ನನ್ನ ಕೆಂಪು ವೇಲ್​ನಲ್ಲಿ 300 ರೂ. ಕಟ್ಟಿ, ಅದನ್ನು ಅವನ ತಲೆಗೆ ಕಟ್ಟಿಕೊಂಡು ಗುಜರಿ ಆಯುತ್ತಿದ್ದ. ಬಾಟಲಿಗಳನ್ನು​ ಗುಡ್ಡೆ ಹಾಕಿದ್ದ ಜಾಗದಲ್ಲೇ ಮುಳುಗಿಬಿಟ್ಟ…’ ಎಂದು ಗೀತಾ ಬಿಕ್ಕಿಬಿಕ್ಕಿ ಅಳುತ್ತಿದ್ದಳು.

ಐದಾರು ವರ್ಷದ ಹಿಂದೆ ಕಾಫಿ ತೋಟ ಬಿಟ್ಟು ಗುಜರಿ ಆಯಲು ಬಂದೆವು. ನಮಗೆ ಮಕ್ಕಳಿಲ್ಲ. ನಮ್ಮನ್ನು ಮನೆಗೆ ಸೇರಿಸಿಕೊಳ್ಳದ ಕಾರಣ ಮನೆ ಬಿಟ್ಟು ಬಂದಿದ್ದೇವೆ. ಕೆಎಸ್​ಆರ್​ಟಿಸಿ ಬಸ್​ ನಿಲ್ದಾಣದಲ್ಲಿ ಮಲಗಿ ಬೆಳಗ್ಗೆ ಎದ್ದು ಗುಜರಿ ಆಯುತ್ತಿದ್ದೆವು. ಸೂರಿಯ ಬಟ್ಟೆಗಳು ಬಸ್​ ನಿಲ್ದಾಣದಲ್ಲೇ ಇದೆ.| ಗೀತಾಸೂರಿ ಪತ್ನಿ
ತುಂಬಾ ಇಷ್ಟಪಟ್ಟು ಪ್ರಿಯಕರನ ಜತೆ ಮದ್ವೆಯಾದ ಗೀತಾ ಬಾಳಲ್ಲಿ ನಡೆಯಬಾರದ್ದು ನಡೆದು ಹೋಗಿದೆ. ಅತ್ತ ಹೆತ್ತವರಿಂದಲೂ ದೂರವಾಗಿರುವ ಗೀತಾ, ಇತ್ತ ಬಾರದ ಲೋಕಕ್ಕೆ ಹೋದ ಗಂಡನ ನೆನೆದು ಕಣ್ಣೀರಿಡುತ್ತಿದ್ದಾರೆ. ಈಕೆಯ ಗೋಳಾಟ ನೋಡಿ ನೆರೆದಿದ್ದ ಜನ ವಿಧಿಯನ್ನೊಮ್ಮೆ ಮನದಲ್ಲೇ ಶಪಿಸಿದ್ದಾರೆ.
17 ರಿಂದ ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನ: ಹೂವುಗಳಿಂದ ಮೈದಾಳುತ್ತಿರುವ ವಿವೇಕಾನಂದ ಪ್ರತಿಮೆ, ಸ್ಮಾರಕ

ಇವರು ನಮ್ಮ ಪಕ್ಷದ ಕಾರ್ಯಕರ್ತ, ಇವರ ಕಾರನ್ನು ಹಿಡಿದು ತೊಂದರೆ ಕೊಡಬಾರದು: ಬಿಜೆಪಿ MLA ಶಿಫಾರಸು

ನಿಗಮ ಮಂಡಳಿ ಅಧ್ಯಕ್ಷರಿಗೆ ಬಿಗ್​ ಶಾಕ್! ಬಿಎಸ್​ವೈ ಕಾಲದ ನೇಮಕಾತಿ ರದ್ದು ಮಾಡಿ ರಾಜ್ಯ ಸರ್ಕಾರ​ ಆದೇಶ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − 7 =
Remember me
