ಬೆಂಗಳೂರು:ಶಾಲೆಯಲ್ಲಿ ಅವಮಾನ ಆಯಿತೆಂದು ಮನನೊಂದ 8ನೇ ತರಗತಿ ವಿದ್ಯಾರ್ಥಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ವಿಜಯನಗರದಲ್ಲಿ ಸಂಭವಿಸಿದೆ.ಧೀರಜ್ (14) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ. ರಾಜರಾಜೇಶ್ವರಿನಗರ ಸಮೀಪದ ಸ್ವರ್ಗರಾಣಿ ಸ್ಕೂಲ್ ಆ್ಯಂಡ್ ಪಿಯು ಕಾಲೇಜಿನಲ್ಲಿ ಓದುತ್ತಿದ್ದ.
ಬುಧವಾರ ಶಾಲೆಯಲ್ಲಿ ಪರೀಕ್ಷೆ ಬರೆಯುವಾಗ ಧೀರಜ್​ ಕಾಪಿ ಮಾಡುತ್ತಿದ್ದ ಎನ್ನಲಾಗಿದೆ. ಇದನ್ನ ಗಮನಿಸಿದ ಶಿಕ್ಷಕರು ಪೋಷಕರಿಗೆ ಮಾಹಿತಿ ನೀಡಿದ್ದರು. ಧೀರಜ್​ನಿಂದ ಪ್ರಾಂಶುಪಾಲರು ಕ್ಷಮಾಪಣಾ ಪತ್ರ ಬರೆಸಿಕೊಂಡಿದ್ದರು. ಇದರಿಂದ ಮನನೊಂದ ಧೀರಜ್ ಮನೆಗೆ ಬಂದು ಆತ್ಮಹತ್ಯೆಗೆ ಶರಣಾಗಿದ್ದಾನೆ ಎನ್ನಲಾಗಿದೆ.
ಧೀರಜ್ ಓದಿನಲ್ಲಿ ಸದಾ ಮುಂದಿದ್ದ. ಹೆಚ್ಚಿನ ಅಂಕ ತೆಗೆಯುತ್ತಿದ್ದ. ವಿದ್ಯಾರ್ಥಿ ಒಂದು ವೇಳೆ ತಪ್ಪು ಮಾಡಿದ್ರು ಪರೀಕ್ಷೆ ಬರೆಯೋಕೆ ಅವಕಾಶ ಮಾಡಿಕೊಡಬೇಕಿತ್ತು. ಆದ್ರೆ ಅವಕಾಶ ಕೊಡದೆ ಧೀರಜ್ ಬಗ್ಗೆ ಶಾಲೆಗೆಲ್ಲಾ ತಿಳಿಯುವಂತೆ ಮಾಡಿ ಅವಮಾನಿಸಿದ್ದಾರೆ. ಶಾಲೆಯವರು ಹೀಗೆ ಮಾಡಬಾರದಿತ್ತು ಎಂದು ಇತರ ಮಕ್ಕಳ ಪೋಷಕರು ಶಾಲೆ ಬಳಿ ಆಕ್ರೋಶ ಹೊರಹಾಕಿದ್ದಾರೆ.
ಶಾಲಾ ಮಕ್ಕಳಿಗೆ ಕೆಜಿಎಫ್​ ಬಾಬು ನೀಡಿದ್ದ ಚೆಕ್​ಗಳು ಬೌನ್ಸ್!​ ಸಂಕಷ್ಟದಲ್ಲಿ ವಿದ್ಯಾರ್ಥಿಗಳು

ದೊಡ್ಡಪ್ಪನಿಂದಲೇ ಅತ್ಯಾಚಾರ, ತೀವ್ರ ರಕ್ತಸ್ರಾವವಾಗಿ 2 ವರ್ಷದ ಕಂದಮ್ಮ ಸಾವು: ಆನೇಕಲ್​ನಲ್ಲಿ ಅಮಾನುಷ ಘಟನೆ

ಆಸ್ತಿ ಬರೆಸಿಕೊಂಡು ತಂದೆ-ತಾಯಿಯನ್ನ ಬೀದಿಗೆ ತಳ್ಳಿದ್ದ ಮಕ್ಕಳಿಗೆ ತಕ್ಕ ಪಾಠ ಕಲಿಸಿದ ಕಂದಾಯ ಇಲಾಖೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × five =
Remember me
