ದಾವಣಗೆರೆ:ನಾಗರತ್ನಾ ಎಂಬ ಮಹಿಳೆ ತನ್ನ 5 ವರ್ಷದ ಮಗನ ಜತೆಗೆ ಶುಕ್ರವಾರ ಕಾಲ್ನಡಿಗೆಯಲ್ಲಿ ಶಿವಮೊಗ್ಗದ ಗಾಡಿಕೊಪ್ಪದಿಂದ ದಾವಣಗೆರೆವರೆಗೆ ಬಂದಿದ್ದಾರೆ! ಹರಪನಹಳ್ಳಿ ತಾಲೂಕು ತುಂಬಿಗೆರೆಯಲ್ಲಿರುವ ಅಕ್ಕನ ಮನೆಗೆ ಹೋಗಲು ನಿರ್ಧರಿಸಿ ಬೆಳಗಿನ ಜಾವ ನಾಲ್ಕು ಗಂಟೆಗೆ ತಲೆ ಮೇಲೆ ಚೀಲ ಹೊತ್ತು ಊರು ಬಿಟ್ಟ ಈಕೆ 90 ಕಿಲೋ ಮೀಟರ್ ಕ್ರಮಿಸಿದ್ದಾರೆ!
ದಾರಿಯುದ್ದಕ್ಕೂ ಮಗು ತುಸು ದೂರ ನಡೆದರೆ, ಅದು ಅಮ್ಮಾ ಎಂದು ಅತ್ತಾಗಲೆಲ್ಲ ಎತ್ತಿಕೊಂಡೇ ಹೆಜ್ಜೆ ಹಾಕಿದ್ದಾರೆ ಈ ಮಹಾತಾಯಿ. ಒಂದೇ ದಿನ ತುಂಬ ದೂರ ನಡೆದ ಕಾರಣ ಮಹಿಳೆಯ ಪಾದಗಳಿಗೆ ಬೊಬ್ಬೆ ಬಂದಿವೆ. ಹರಪನಹಳ್ಳಿಯ ದಾರಿ ತಪ್ಪಿ ಬೈಪಾಸ್ ಮೂಲಕ ಶುಕ್ರವಾರ ರಾತ್ರಿ 9ರ ವೇಳೆಗೆ ಎಸ್‌ಎಸ್ ಹೈಟೆಕ್ ಆಸ್ಪತ್ರೆ ಸಮೀಪದ ಚೆಕ್‌ಪೋಸ್ಟ್ ಬಳಿ ಈಕೆ ಬಂದಾಗ ಪೊಲೀಸರು ವಿಚಾರಿಸಿದ್ದಾರೆ. ಈ ವೇಳೆ ಮಗು ಚಳಿಯಿಂದ ನಡುಗುತ್ತಿತ್ತು. ಆಯಾಸದಿಂದ ಬಳಲಿತ್ತು. ತಕ್ಷಣ ತಾಯಿ, ಮಗು ಇಬ್ಬರಿಗೂ ನೀರು, ಆಹಾರ ಕೊಟ್ಟು ಪೊಲೀಸರು ಸಂತೈಸಿದ್ದಾರೆ. ಕೆಟಿಜೆ ನಗರ ಪೊಲೀಸ್ ಠಾಣೆಯ ಎಎಸ್‌ಐ ರಾಮಚಂದ್ರಪ್ಪ, ಸಿಬ್ಬಂದಿ ಹನುಮಂತಪ್ಪ, ನಾಗನಗೌಡ್ರು, ಶ್ರೀನಿವಾಸ್, ಪದ್ಮರಾಜ್, ನಾಗರಾಜ್ ಮಹಿಳೆಗೆ ನೆರವಾಗಿದ್ದಾರೆ.ಇದನ್ನೂ ಓದಿರಿಯಾರಿಗೂ ತಿಳಿಯದಂತೆ ಪ್ರೇಯಸಿಯನ್ನ ಮನೆಯಲ್ಲೇ 10 ವರ್ಷ ಅಡಗಿಸಿಟ್ಟಿದ್ದ ಪ್ರಿಯಕರ! ಆ ಕೋಣೆಯ ರಹಸ್ಯ ಬಯಲಾಗಿದ್ದೇ ರೋಚಕ
ನಂತರ ಸಾಮಾಜಿಕ ಕಾರ್ಯಕರ್ತ ಎಂ.ಜಿ. ಶ್ರೀಕಾಂತ್, ಧನಂಜಯ ಬದ್ರಿ, ದಯಾನಂದ ಅವರು ಕಾರಿನ ವ್ಯವಸ್ಥೆ ಮಾಡಿ ತಾಯಿ ಮತ್ತು ಮಗನನ್ನು ತುಂಬಿಗೆರೆಗೆ ಕಳಿಸಿಕೊಟ್ಟಿದ್ದಾರೆ. ಪೊಲೀಸರು ಕಾರಿನ ಡೀಸೆಲ್ ಖರ್ಚು ನೋಡಿಕೊಂಡಿದ್ದಾರೆ.
ಅಷ್ಟಕ್ಕೂ ಈ ಮಹಿಳೆ ಅಷ್ಟು ದೂರ ನಡೆಯುವ ನಿರ್ಧಾರ ಮಾಡಿದ್ದೇಕೆ ಗೊತ್ತೆ? ಕೌಟುಂಬಿಕ ವಿರಸ. ಮನೆಯಲ್ಲಿ ಜಗಳ ಮಾಡಿಕೊಂಡಿದ್ದಳಂತೆ! ಲಾಕ್​ಡೌನ್ ಇರುವುದರಿಂದ ಬಸ್​ಗಳೂ ಸಂಚಾರ ಮಾಡುತ್ತಿಲ್ಲ. ಅದನ್ನೂ ಲೆಕ್ಕಿಸದೇ ಮನೆ ತೊರೆದಿದ್ದಾಳೆ!
ನಾನು ರೇಣುಕಾಚಾರ್ಯರ ಪತ್ನಿ ಆಗಿದ್ದು ಹಲವು ಜನ್ಮದ ಪುಣ್ಯ… ಮನಬಿಚ್ಚಿ ಮಾತನಾಡಿದ ಹೊನ್ನಾಳಿ ಶಾಸಕರ ಪತ್ನಿ

ಯಾರಿಗೂ ತಿಳಿಯದಂತೆ ಪ್ರೇಯಸಿಯನ್ನ ಮನೆಯಲ್ಲೇ 10 ವರ್ಷ ಅಡಗಿಸಿಟ್ಟಿದ್ದ ಪ್ರಿಯಕರ! ಆ ಕೋಣೆಯ ರಹಸ್ಯ ಬಯಲಾಗಿದ್ದೇ ರೋಚಕ

ಬಾವಿಗೆ ಹಾರಿ ಪ್ರಾಣಬಿಟ್ಟ ಗಂಡ, ಮನೆಯ ಮೇಲೆ ನೇಣಿಗೆ ಕೊರಳೊಡ್ಡಿದ ಪತ್ನಿ! ಡೆತ್​ನೋಟ್​ನಲ್ಲಿದೆ ಸಾವಿನ ರಹಸ್ಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × four =
Remember me
