ಬೆಂಗಳೂರು:ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ಬಂದ್​ಗೆ ಸಾರ್ವಜನಿಕರು ಸೇರಿದಂತೆ ಚಾಮರಾಜಪೇಟೆ ನಾಗರಿಕರ ಒಕ್ಕೂಟದ ವೇದಿಕೆ ಕರೆ ನೀಡಿದೆ. ಉಳಿಸಿ ಉಳಿಸಿ.. ಆಟದ ಮೈದಾನ ಉಳಿಸಿ… ಎಂದು ಅಭಿಯಾನ ಶುರು ಮಾಡಿದೆ. ಕರಪತ್ರಗಳ ಹಂಚಿಕೆ, ಮೈಕ್​ ಮೂಲಕ ಮನವಿ ಮಾಡಲಾಗುತ್ತಿದೆ.
ಚಾಮರಾಜಪೇಟೆ 7ನೇ ಕ್ರಾಸ್​ನಲ್ಲಿರುವ ಆಟದ ಮೈದಾನ ಬಿಬಿಎಂಪಿ ಸ್ವತ್ತಾಗಿ ಉಳಿಯುವಂತೆ ಒತ್ತಾಯಿಸಿ ಜು.12ರಂದು ಬೆಳಗ್ಗೆ 8 ಗಂಟೆಯಿಂದ ಸಂಜೆ 5 ಗಂಟೆವರೆಗೆ ಶಾಂತಿಯುತ ಬಂದ್​ಗೆ ಚಾಮರಾಜಪೇಟೆ ನಾಗರಿಕರ ಒಕ್ಕೂಟ ವೇದಿಕೆ ಕರೆ ಕೊಟ್ಟಿದೆ. ಈ ಮೈದಾನವನ್ನ ಎಲ್ಲರೂ ಉಪಯೋಗಿಸವಂತೆ ಮಾಡಲು ಬಿಬಿಎಂಪಿ ಕಾರ್ಯಗತ ಮಾಡಬೇಕಿತ್ತು. ಆದರೆ ವಕ್ಫ್​ ಬೋರ್ಡ್​ ಗೆ ಖಾತೆ ಮಾಡಿಕೊಡಲು ಬಿಬಿಎಂಪಿ ಆಸಕ್ತಿ ತೋರುತ್ತಿದೆ. ಒಂದು ಸಮುದಾಯವನ್ನ ಓಲೈಕೆ ಮಾಡುವ ಕೆಲಸ ಆಗುತ್ತಿದೆ. ಸ್ಥಳೀಯ ಶಾಸಕರಿಗೆ ಹಲವು ಬಾರಿ ಮನವಿ ಮಾಡಿದರೂ ಸ್ಪಂದಿಸಿಲ್ಲ. ಹಾಗಾಗಿ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಬಂದ್​ಗೆ ಕರೆ ನೀಡಲಾಗಿದೆ. ನಾಳೆ ಪ್ರತಿಭಟನೆ, ರ್ಯಾಲಿ ಇರೋದಿಲ್ಲ. ಸ್ವಯಂ ಪ್ರೇರಿತ ಬಂದ್​ಗೆ ಕರೆ ನೀಡಿರುವ ಒಕ್ಕೂಟ, ಕ್ಷೇತ್ರದ ಬ್ಯಾಂಕ್​, ಶಾಲಾ-ಕಾಲೇಜುಗಳ ಬಂದ್​ಗೂ ಮನವಿ ಮಾಡಿದೆ.
ಈ ಆಟದ ಮೈದಾನಕ್ಕೆ ಜಯಚಾಮರಾಜೇಂದ್ರ ಒಡೆಯರ್​ ಹೆಸರು ಇಡುವುದು, ಯಾವುದೇ ಕಾರಣಕ್ಕೂ ವಕ್ಫ್​ ಮಂಡಳಿಗೆ ನೀಡದೆ ಪೂರ್ಣ ಸ್ವತ್ತು ಬಿಬಿಎಂಪಿಗೆ ಸ್ವತ್ತಾಗಿಯೇ ಉಳಿಯುವುದು, ಶಾಶ್ವತವಾಗಿ ಮಕ್ಕಳ ಆಟದ ಮೈದಾನವಾಗಿರುವುದು, ಸ್ವಾತಂತ್ರ್ಯ ದಿನಾಚರಣೆ, ಗಣೇಶೋತ್ಸವ, ನಾಡಹಬ್ಬ ದಸರಾ, ಶಿವರಾತ್ರಿ ಸೇರಿ ಇತರೆ ಸಮಾರಂಭ ನಡೆಸುವುದಕ್ಕೆ ಅನುಮತಿ ನೀಡುವುದು ಸೇರಿ ಇನ್ನಿತರ ಸಮಸ್ಯೆಗಳ ಈಡೇರಿಕೆಗಾಗಿ ಹಮ್ಮಿಕೊಂಡಿರುವ ಬಂದ್​ಗೆ ಚಾಮರಾಜಪೇಟೆ ಬಡಾವಣೆ ಜನರು ಸಹಕಾರ ನೀಡಬೇಕೆಂದು ಒಕ್ಕೂಟ ಮನವಿ ಮಾಡಿದೆ. ಆಸ್ಪತ್ರೆ, ಔಷಧ ಅಂಗಡಿ ಮತ್ತು ಹಾಲಿನ ಕೇಂದ್ರ ಹೊರತುಪಡಿಸಿ ಎಲ್ಲ ಅಂಗಡಿ ಮುಂಗಟ್ಟು, ಕಚೇರಿ, ಮಾಲ್​ ಮತ್ತು ಶಾಲಾ ಕಾಲೇಜು ತೆರೆಯದೆ ಸ್ವಯಂಪ್ರೇರಿತವಾಗಿ ಬಂದ್​ಗೆ ಬೆಂಬಲ ನೀಡುವಂತೆ ಕೋರಲಾಗಿದೆ.
ಸುಪ್ರೀಂಕೋರ್ಟ್​ ಆದೇಶದಲ್ಲಿ ವರ್ಷಕ್ಕೆ ಎರಡು ಬಾರಿ ಮುಸ್ಲಿಂ ಸಮುದಾಯದವರ ಪ್ರಾರ್ಥನೆಗೆ ಅವಕಾಶ ನೀಡಿ, ಬಾಕಿ ದಿನಗಳಲ್ಲಿ ಆಟದ ಮೈದಾನವಾಗಿ ಬಳಸಲು ಆದೇಶಿಸಿದೆ. ಆದರೆ, ಬಿಬಿಎಂಪಿ ಅಧಿಕಾರಿಗಳು ದಿನಕ್ಕೊಂದು ಹೇಳಿಕೆ ನೀಡಿ ಜನರಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರೆ. ಕಳೆದ 50 ವರ್ಷಗಳಿಂದ ಮೈದಾನ ಯಾವ ಸ್ಥಿತಿಯಲ್ಲಿದೆಯೋ, ಮುಂದಿನ ದಿನದಲ್ಲಿಯೂ ಯಥಾ ಸ್ಥಿತಿ ಮುಂದುವರಿಯಬೇಕು. ಮೈದಾನವು ಸರ್ಕಾರ ಅಥವಾ ಬಿಬಿಎಂಪಿ ಸ್ವಾದಿನದಲ್ಲಿಯೇ ಇರಬೇಕು. ಜತೆಗೆ, ಇಲ್ಲಿ ಸ್ವಾತಂತ್ರ ದಿನಾಚರಣೆ ಮತ್ತು ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲು ಅವಕಾಶ ನೀಡಬೇಕು ಎಂಬುದು ಒಕ್ಕೂಟದ ನಿಲುವಾಗಿದೆ ಎಂದು ಪಾಲಿಕೆ ಮಾಜಿ ಸದಸ್ಯ ಗಣೇಶ್​ ವಿವರಿಸಿದ್ದಾರೆ.
ಉಕ್ಕಿ ಹರಿಯುತ್ತಿರುವ ಕಾವೇರಿ: ರಂಗನತಿಟ್ಟು ಪಕ್ಷಿಧಾಮದಲ್ಲಿ ನಡುಗಡ್ಡೆ ಮುಳುಗಡೆ, ನದಿ ಪಾತ್ರದಲ್ಲಿ ಪ್ರವಾಹ ಭೀತಿ

ಚಂದ್ರಶೇಖರ ಗುರೂಜಿ ಹತ್ಯೆಯಾದ ಹೋಟೆಲ್​ನಲ್ಲಿ ಹೋಮ-ಹವನ! ದೇವರ ಮೊರೆ ಹೋದ ಸಿಬ್ಬಂದಿ

ವಿಜಯವಿಠ್ಠಲ ಮಹಾಮಸ್ತಕಾಭಿಷೇಕ ಸಂಪನ್ನ: ಮಹಾಮಜ್ಜನದಲ್ಲಿ ಮಿಂದೆದ್ದ 36 ಅಡಿ ಎತ್ತರದ ಮೂರ್ತಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven + 15 =
Remember me
