ಬೆಂಗಳೂರು:ಕರ್ನಾಟಕದ 30ನೇ ಸಿಎಂ ಆಗಿ ಸ್ವೀಕರಿಸಿದ ಬಸವರಾಜ ಬೊಮ್ಮಾಯಿ ಅವರು ಮಾಧ್ಯಮಗಳಿಗೆ ಕೊಟ್ಟ ಮೊದಲ ಪ್ರತಿಕ್ರಿಯೆಯಲ್ಲಿ ತನ್ನೆದರು ಸಮಸ್ಯೆಗಳ ಸರಮಾಲೆಯೇ ಇದೆ, ಎಲ್ಲವನ್ನೂ ನಿಭಾಯಿಸುವೆ ಎಂದರು.
ರಾಜ್ಯದ ಜನತೆ ಕೋವಿಡ್ ಮತ್ತು ಆರೋಗ್ಯ ಸವಾಲುಗಳನ್ನು ಕಳೆದ ಒಂದೂವರೆ ವರ್ಷ ಎದುರಿಸಿದ್ದಾರೆ. ಎರಡು ಬಾರಿ ಪ್ರವಾದ ಸಂಕಷ್ಟಕ್ಕೆ ಸಿಲುಕಿದ್ದಾರೆ. ದಕ್ಷ ಮತ್ತು ಜನಪರ ಆಡಳಿತವನ್ನು ನಮ್ಮ ಸರ್ಕಾರ ಕೊಡಲಿದೆ. ಬಡವರು, ದಲಿತರು, ಹಿಂದುಳಿದವರು ಸೇರಿದಂತೆ ಸಮಾಜದ ಕಟ್ಟಕಡೆಯ ಮನುಷ್ಯರನ್ನೂ ನಾವು ತಲುಪುತ್ತೇವೆ. ಬಡಜನರ, ರೈತರ ಕಣ್ಣೀರು ಹೊರೆಸುವ ಕಾರ್ಯವನ್ನು ನಮ್ಮ ಸರ್ಕಾರ ಮಾಡಲಿದೆ.
ಸದ್ಯ ಇರುವ ಹಣಕಾಸಿನ ಇತಿಮಿತಿಯನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡಲಾಗುವುದು. ಆರ್ಥಿಕ, ಸಾಮಾಜಿಕ ಸವಾಲುಗಳು ಸರ್ಕಾರದ ಮುಂದಿದೆ, ನಮ್ಮ ಸಹೋದ್ಯೋಗಿಗಳ, ಪಕ್ಷದ ಹಿರಿಯರ, ಶಾಸಕರ ಸಹಕಾರದೊಂದಿಗೆ ಸವಾಲುಗಳನ್ನೇ ಮೆಟ್ಟಿಲುಗಳನ್ನಾಗಿ ಮಾಡಿಕೊಂಡು ನಿಭಾಯಿಸುವ ವಿಶ್ವಾಸ ನನಗಿದೆ. ನಾನು ಸಿಎಂ ಎಂಬುದಕ್ಕಿಂತ ನಾನು ಎಲ್ಲರಲ್ಲೂ ಒಬ್ಬನು ಎಂಬ ಭಾವನೆಯಲ್ಲಿ ಕೆಲಸ ಮಾಡುವೆ ಎಂದು ಬೊಮ್ಮಾಯಿ ಹೇಳಿದರು.
ಯಾರೇ ಸಿಎಂ ಆಗಿ ಅಧಿಕಾರ ಸ್ವೀಕರಿಸಿದ ಮೇಲೆ ಕೇಂದ್ರದ ನಾಯಕರನ್ನು ಭೇಟಿ ಮಾಡುವುದು ವಾಡಿಕೆ. ನಾನು ಕೂಡ ಅವರನ್ನು ಭೇಟಿ ಮಾಡುವೆ ಎಂದರು.
ಸಿಎಂ ಆಗಿ ದೇವರ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಬೊಮ್ಮಾಯಿ

ಇಂದಿನಿಂದ ಬೊಮ್ಮಾಯಿ ‘ರಾಜ್ಯ’ಭಾರ! ಸಮಸ್ಯೆಗಳನ್ನೇ ಹೊದ್ದು ಮಲಗಿದೆ ಹಾದಿ…

ಗಂಡನಿಗೆ ಹಣದಾಹ, ಮಾವನಿಗೆ ಕಾಮದಾಹ… ಪೊಲೀಸರ ಮುಂದೆ ನರಕಯಾತನೆ ಬಿಚ್ಚಿಟ್ಟ ಯುವತಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 + twelve =
Remember me
