ಬೆಂಗಳೂರು:ಕರೊನಾ ಹಿನ್ನೆಲೆ ರಾಜ್ಯ ಸರ್ಕಾರ ಘೋಷಿಸಿದ ಆರ್ಥಿಕ ಪ್ಯಾಕೇಜ್​ ಬೋಗಸ್​ ಆಗಿದೆ. ಜನರ ದುಡ್ಡನ್ನು ಜನರಿಗೇ ಕೊಡಲು ನಿಮಗೇನು ಕಷ್ಟ? ಬಡವರಿಗೆ ಸಹಾಧನ ಕೊಡಲು ಆರ್ಥಿಕ ಸಂಕಷ್ಟ ಇದ್ಯಾ? ಸರ್ಕಾರವೇನು ಬೆವರು ಸುರಿಸಿ ದುಡಿದ ಹಣವನ್ನು ಕೊಡ್ತಿದ್ಯಾ? ಎಂದು ಮಾಜಿ ಸಿಎಂ ಎಚ್​.ಡಿ. ಕುಮಾರಸ್ವಾಮಿ ಕಟುವಾಗಿ ಪ್ರಶ್ನಿಸಿದ್ದಾರೆ.
ಸಿಎಂ ಯಡಿಯೂರಪ್ಪ ಘೋಷಿಸಿದ ವಿಶೇಷ ಪ್ಯಾಕೇಜ್​ ಕುರಿತು ಪ್ರತಿಕ್ರಿಯಿಸಿರುವ ಕುಮಾರಸ್ವಾಮಿ, ರಾಜ್ಯದಲ್ಲಿ ಇರೋದು 20 ಸಾವಿರ ಮಂದಿ ಮಾತ್ರ ಹೂವು ಬೆಳೆಗಾರರಿದ್ದಾರೆ ಎಂದು ಹೇಗೆ ಹೇಳ್ತೀರಿ. ಹೆಕ್ಟೇರ್​ಗೆ 10 ಸಾವಿರ ಸಹಾಯಧನ ಅಂದ್ರೆ ಎಕರೆಗೆ ಸಿಗೋದು ಮೂರೂವರೆ ಸಾವಿರ ರೂಪಾಯಿ. ಒಂದು ಎಕರೆಯಲ್ಲಿ ಬೆಳೆ ಬಿತ್ತನೆ ಮಾಡೋಕೆ ಎಷ್ಟು ಖರ್ಚಾಗುತ್ತೆ ಎನ್ನೋದರ ಬಗ್ಗೆಯಾದರೂ ಯೋಚಿಸಬೇಕಲ್ಲವಾ? ಇವರಿಗೆ 20 ಸಾವಿರ ರೈತರ ಪಟ್ಟಿ ಕೊಟ್ಟವರ್ಯಾರು? ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತಿದೆ ಈ ಪ್ಯಾಕೇಜ್​. ಇದು ಕಣ್ಣೊರೆಸುವ ತಂತ್ರ ಅಷ್ಟೆ ಎಂದು ಕಿಡಿಕಾರಿದ್ದಾರೆ.ಇದನ್ನೂ ಓದಿರಿಕರೊನಾ ವಿಶೇಷ ಪ್ಯಾಕೇಜ್​ ಘೋಷಣೆ ಬೆನ್ನಲ್ಲೇ ರಾಜ್ಯ ಸರ್ಕಾರದ ವಿರುದ್ಧ ಡಿಕೆಶಿ ವಾಗ್ದಾಳಿ
ಇದು ಅವೈಜ್ಞಾನಿಕ ಪರಿಹಾರವಾಗಿದೆ. ಇವರು ಕಾರ್ಮಿಕರಿಗೆ ಹಣ ಕೊಡುವುದಿಲ್ಲ. ಕಾರ್ಮಿಕರ ಎಫ್​ಡಿ ಹಣದಿಂದ ಕೊಡ್ತಾರೆ ಅಷ್ಟೆ. ಜನರ ಸಂಕಷ್ಟಕ್ಕೆ ಸ್ಪಂದಿಸುವ ಪ್ಯಾಕೇಜ್​ ಘೋಷಿಸಬೇಕಿತ್ತು ಎಂದು ಎಚ್​ಡಿಕೆ ಅಸಮಾಧಾನ ಹೊರಹಾಕಿದ್ದಾರೆ.
ಕರೊನಾ ಹಿನ್ನೆಲೆ ವಿಶೇಷ ಪ್ಯಾಕೇಜ್​ ಘೋಷಿಸಿದ ಸಿಎಂ ಯಡಿಯೂರಪ್ಪ! ಯಾರಿಗೆಲ್ಲ ಸಹಾಯಧನ? ಇಲ್ಲಿದೆ ಡಿಟೇಲ್ಸ್​

ವಿವಾಹಿತೆ ಜತೆ ಪರಪುರುಷನ ಕಾಮದಾಟ! 5 ವರ್ಷದ ಅಕ್ರಮ ಸಂಬಂಧಕ್ಕೆ ಬಿತ್ತು ಮೂವರ ಹೆಣ

ಬೆಳ್ಳಂಬೆಳಗ್ಗೆ ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ಭಯಾನಕ ಘಟನೆ! ಕಕ್ಕಾಬಿಕ್ಕಿಯಾಗಿ ಓಡಿದ ಕರೊನಾ ಸೋಂಕಿತರು, ಬೆಚ್ಚಿಬೀಳಿಸುತ್ತೆ ಆ ದೃಶ್ಯ

ಇನ್ನೆರಡು ತಿಂಗಳಲ್ಲಿ ಮಗುವಿಗೆ ಜನ್ಮ ನೀಡಬೇಕಿದ್ದ 24 ವರ್ಷದ ಪಿಎಸ್​ಐ ಕರೊನಾಗೆ ಬಲಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − seven =
Remember me
