ಚಿಂತಾಮಣಿ:ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲೂಕಿನ ಮುರುಗಮಲ್ಲ ಹೋಬಳಿ ಸೋಮಯಾಜಲಹಳ್ಳಿಯಲ್ಲಿ ಒಂದೇ ಕುಟುಂಬದ ನಾಲ್ವರು ಸಿಡಿಲಿಗೆ ಬಲಿಯಾಗಿದ್ದಾರೆ.
ಅಂಬರೀಷ್ ಇವರ ಪುತ್ರ ಗೌತಮ್, ಮಗಳಾದ ವಾಣಿಶ್ರೀ, ಲಾವಣ್ಯ ಮೃತರು. ಕಳೆದ ಬುಧವಾರ (ಏ.21) ಜಿಲ್ಲೆಯಲ್ಲಿ ಗುಡುಗು-ಸಿಡಿಲು ಸಹಿತ ಮಳೆಯಾಗಿತ್ತು. ಅಂದು ರಾತ್ರಿ ಅಂಬರೀಷ್​ ಅವರ ಕಲ್ಲುಚಪ್ಪಡಿ ಮನೆಗೆ ಸಿಡಿಲು ಬಡಿದಿತ್ತು. ಪರಿಣಾಮ ಮನೆ ಕುಸಿದು ಬಿದ್ದಿದ್ದು, ಮನೆಯಲ್ಲಿ ಮಲಗಿದ್ದ ಒಂದೇ ಕುಟುಂಬದ ಏಳು ಮಂದಿ ಗಂಭೀರ ಗಾಯಗೊಂಡಿದ್ದರು. ಅಂಬರೀಷ್, ಪತ್ನಿ ಗಾಯತ್ರಮ್ಮ, ಮಕ್ಕಳಾದ ವಾಣಿಶ್ರೀ, ಲಾವಣ್ಯ, ದರ್ಶನ್, ಗೌತಮ್ ಮತ್ತು ಅಂಬರೀಷ್ ಅವರ ತಂದೆ ಜಗನ್ ಅವರ ಸ್ಥಿತಿ ಚಿಂತಾಜನಕವಾಗಿತ್ತು.
ಗಾಯಾಳುಗಳನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ ಏ.25ರಂದು 4 ವರ್ಷದ ಬಾಲಕ ಗೌತಮ್ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದ. ಅದೇ ದಿನ ಸಂಜೆ ತಂದೆ ಅಂಬರೀಷ್ ಕೂಡ ಕೊನೆಯುಸಿರೆಳೆದಿದ್ದರು. ಮರುದಿನ ಮಗಳು ವಾಣಿಶ್ರೀ ಮೃತಪಟ್ಟಳು. ನಿನ್ನೆ ರಾತ್ರಿ(ಏ.27) ಲಾವಣ್ಯ ಕೊನೆಯುಸಿರೆಳೆದಳು. ಇನ್ನು ಉಳಿದ ಮೂವರ ಪೈಕಿ ಇಬ್ಬರ ಸ್ಥಿತಿ ಗಂಭೀರವಾಗಿದೆ. ಗಾಯತ್ರಮ್ಮ, ದರ್ಶನ್, ಜಗನ್​ ಅವರು ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ.

PHOTOS| ಜನತಾ ಕರ್ಫ್ಯೂ: ಇಡೀ ಬೆಂಗಳೂರು ಸ್ತಬ್ಧ, ಲಾಕ್​ ಆದರೂ ಗುಳೇ ತಪ್ಪಿಲ್ಲ

ದಾವಣಗೆರೆ ಜಿಲ್ಲೆಯ ಆಸ್ಪತ್ರೆಗಳಲ್ಲಿ ಹಾಸಿಗೆಗಳು ಖಾಲಿ ಇವೆ! ಆಕ್ಸಿಜನ್, ವೆಂಟಿಲೇಟರ್​ಗೂ ಕೊರತೆಯಿಲ್ಲ

ಮಾಲಾಶ್ರೀ ಪತಿ, ನಿರ್ಮಾಪಕ ರಾಮು ಮೃತಪಟ್ಟದ್ದು ಕರೊನಾದಿಂದಲ್ಲ! ಸಾವಿಗೆ ಬೇರೆ ಕಾರಣ ಇದೆ

ಲಾಕ್​ಡೌನ್​ ಹಿನ್ನೆಲೆ ರಾತ್ರೋರಾತ್ರಿ ಸ್ವಗ್ರಾಮಕ್ಕೆ ಹೊರಟಿದ್ದವರ ಬಾಳಲ್ಲಿ ದುರಂತ! ಮಾರ್ಗಮಧ್ಯೆ ನಾಲ್ವರು ದುರ್ಮರಣ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:six + nineteen =
Remember me
