ಬದೌನ್ (ಉತ್ತರ ಪ್ರದೇಶ):‘ಮಧುವಿನ 5ನೇ ಮಗು’ ಇದು ಬಾಲಕಿಯೊಬ್ಬಳ ಹೆಸರು! ಅರೇ ಇದೆಂಥಾ ಹೆಸರು? ಎಂದು ಹುಬ್ಬೇರಿಸಬೇಡಿ. ಆಧಾರ್​ ಕಾರ್ಡ್​ನಲ್ಲಿ ಆ ಬಾಲಕಿಯ ಹೆಸರು ‘ಮಧುವಿನ 5ನೇ ಮಗು'(ಮಧು ಕಾ ಪಂಚವಾ ಬಚ್ಚಾ/ Baby Five Of Madhu) ಎಂದು ಎಂಟ್ರಿಯಾಗಿದೆ. ಈ ಕುರಿತು ತನಿಖೆ ನಡೆಸುಂತೆ ಜಿಲ್ಲಾ ಮ್ಯಾಜಿಸ್ಟ್ರೇಟ್ ದೀಪಾ ರಂಜನ್ ಆದೇಶಿಸಿದ್ದಾರೆ.
ಇಂತಹ ವಿಚಿತ್ರ ಪ್ರಕರಣ ಉತ್ತರ ಪ್ರದೇಶದ ಬದೌನ್ ಜಿಲ್ಲೆಯಲ್ಲಿ ಕಂಡುಬಂದಿದೆ. ರಾಯ್‌ಪುರ ಗ್ರಾಮದ ದಿನೇಶ್ ಮತ್ತು ಮಧು ದಂಪತಿಗೆ ಒಟ್ಟು 5 ಮಕ್ಕಳು. 5ನೇ ಮಗಳ ಆಧಾರ್​ ಕಾರ್ಡ್​ನಲ್ಲಿ ಆಕೆಯ ಹೆಸರು ‘ಮಧುವಿನ 5ನೇ ಮಗು’ ಎಂದು ನಮೂದಾಗಿದೆ. ಬಾಲಕಿಯನ್ನು ಶಾಲೆಗೆ ಸೇರಿಸಲು ಹೋದಾಗ ಹೆಸರು ತಪ್ಪಾಗಿರುವುದು ಪಾಲಕರಿಗೆ ಗೊತ್ತಾಗಿದೆ. ಅಷ್ಟೇ ಅಲ್ಲ, ಈ ಆಧಾರ್​ನಲ್ಲಿ ಇರಬೇಕಿದ್ದ 12 ನಂಬರ್​ ಕೂಡ ಇಲ್ಲ.
5ನೇ ಮಗಳಿಗೆ ಆಧಾರ್​ ಕಾರ್ಡ್​ ಮಾಡಿಸಲು ಹೋಗಿದ್ದೆವು. ಆಗ ಮಗುವಿನ ಹೆಸರನ್ನ ಸಿಬ್ಬಂದಿ ಕೇಳಿದರು. ಇನ್ನೂ ಹೆರಿಟ್ಟಿಲ್ಲದ ಕಾರಣ ನಮ್ಮ 5ನೇ ಮಗಳು ಎಂದೆವು. ಅನಕ್ಷರಸ್ಥರಾದ ನಮಗೆ ಆಧಾರ್​ನಲ್ಲಿ ಆಗಿರುವ ತಪ್ಪು ನಮ್ಮ ಗಮನಕ್ಕೆ ಬಾರಲೇ ಇಲ್ಲ. ಮಕ್ಕಳನ್ನು ಚೆನ್ನಾಗಿ ಓದಿಸುವ ಆಸೆಯಲ್ಲಿ ಶಾಲೆಗೆ ಸೇರಿಸಲು ಹೋದಾಗ ಆಧಾರ್​ನಲ್ಲಿರುವ ತಪ್ಪು ಗಮನಕ್ಕೆ ಬಂತು. ಮಗಳ ಹೆಸರು ಭಾರತಿ ಎಂದು ಕಾರ್ಡ್​ನಲ್ಲಿ ನಮೂದಾಗಬೇಕು. ಇನ್ನೂ ಆಕೆಗೆ ಶಾಲಾ ಪ್ರವೇಶಾತಿ ಸಿಕ್ಕಿಲ್ಲ. ಬಡವರಾದ ನಮಗೆ ಆಧಾರ್​ ತಿದ್ದುಪಡಿ ಬೇಗ ಆದರೆ ಮಗಳ ಶಿಕ್ಷಣಕ್ಕೆ ಅನುಕೂಲ ಆಗುತ್ತೆ ಎಂದು ತಂದೆ ದಿನೇಶ್​ ಅಳಲು ತೋಡಿಕೊಂಡಿದ್ದಾರೆ.
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಬದೌನ್ ಜಿಲ್ಲಾ ಮ್ಯಾಜಿಸ್ಟ್ರೇಟ್ ದೀಪಾ, ಆಧಾರ್ ಸಿಬ್ಬಂದಿಯ ನಿರ್ಲಕ್ಷ್ಯದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ನಿರ್ಲಕ್ಷ್ಯ ತೋರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.
ಪ್ರೀತಿಸಿ ಮದ್ವೆಯಾದ 7 ದಿನಕ್ಕೇ ಯುವತಿ ಬೀದಿಪಾಲು! 3 ದಿನದಲ್ಲಿ 2 ಬಾರಿ ಮದ್ವೆ ಆಗಿದ್ದವ ಇದ್ದಕ್ಕಿದ್ದಂತೆ ಏನಾದ?

ರಾಹುಲ್​ ಗಾಂಧಿ ಹೆಸರಿಗೆ ಫ್ರೀಯಾಗಿ 50 ಲಕ್ಷ ಮೌಲ್ಯದ ಆಸ್ತಿ ಬರೆದು 100 ಗ್ರಾಂ ಚಿನ್ನವನ್ನೂ ಕೊಟ್ಟ ವೃದ್ಧೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven + 4 =
Remember me
