ಬಾಗಲಕೋಟೆ:ಶುಕ್ರವಾರ ಬೆಳ್ಳಂಬೆಳಗ್ಗೆ ರಾಜ್ಯಾದ್ಯಂತ 80 ಕಡೆಗಳಲ್ಲಿ 21 ಭ್ರಷ್ಟ ಅಧಿಕಾರಿಗಳ ಮನೆಯ ಮೇಲೆ ಎಸಿಬಿ ದಾಳಿ ಮಾಡಿದ್ದು, ಬಗೆದಷ್ಟು ಆಳ ಎಂಬಂತಾಗಿದೆ ಅಕ್ರಮದ ವಾಸನೆ. ಬಾಗಲಕೋಟೆ ನಿರ್ಮಿತಿ ಕೇಂದ್ರದ ಅಧಿಕಾರಿ ಶಂಕರ ಗೋಗಿ ಅವರ ಮನೆ ಮೇಲೆ ದಾಳಿ ಮಾಡಿದ ಎಸಿಬಿ, ನಿರ್ಮಿತಿ ಕೇಂದ್ರದ ಇಂಜಿನಿಯರ್ ಮಲ್ಲೇರಾವ್ ದೇಸಾಯಿ ಮನೆ ಮೇಲೂ ದಾಳಿ ಮಾಡಿದೆ. ಒಂದು ಕುಳದ ಮೇಲೆ ಎಸಿಬಿ ಬೀಸಿದ ಬಲೆಗೆ ಮತ್ತೊಬ್ಬನೂ ಬಿದ್ದಂತಾಗಿದೆ.
ನವನಗರದ ಸೆಕ್ಟರ್ ನಂಬರ್ 55ರಲ್ಲಿ ಇರುವ ಶಂಕರ ಗೋಗಿ ನಿವಾಸದಲ್ಲಿ ಚಿನ್ನಾಭರಣ, ಬೆಳ್ಳಿ, ಅಪಾರ ಪ್ರಮಾಣದ ನಗದು ಪತ್ತೆಯಾಗಿದೆ. ಆದಾಯಕ್ಕಿಂತ ಅಂದಾಜು ನೂರಾರು ಪಟ್ಟು ಆಸ್ತಿ ಪತ್ತೆಯಾಗಿದೆ ಎನ್ನಲಾಗಿದೆ. ಗೋಗಿ ಆಪ್ತ, ಬಾಗಲಕೋಟೆಯ ಅಕ್ಕಿಮರಡಿ ಲೇಔಟ್​ನ ನಿವಾಸಿ ಮಲ್ಲೇರಾವ್ ದೇಸಾಯಿ ಅವರ ಮನೆಯಲ್ಲೂ ಅಪಾರ ಚಿನ್ನಾಭರಣ ಪತ್ತೆಯಾಗಿದೆ. ಗೋಗಿ ಹೆಸರಲ್ಲಿ ಇನೋವಾ ಕಾರು, ಮಹಿಂದ್ರಾ ಎಕ್ಸ್ಯೂವಿ 500 ಕಾರು ಇದೆ.
ಚುನಾವಣೆಗೆ ನಿಲ್ಲಲು ಸಿದ್ಧತೆಯಲ್ಲಿದ್ದ ಸಿಪಿಐ ಉದಯರವಿಗೆ ಶಾಕ್​: ಅತ್ತೆ-ಗುರುಗಳ ಮನೆ ಮೇಲೆ ಎಸಿಬಿ ದಾಳಿ

ಅಕ್ಕನ ಚಿತೆಗೆ ಹಾರಿ ಪ್ರಾಣಬಿಟ್ಟ ತಮ್ಮ! ನೋವಲ್ಲೇ 430km ದೂರದಿಂದ ಬಂದವ ನೋಡನೋಡುತ್ತಿದ್ದಂತೆ ಸುಟ್ಟು ಕರಕಲಾದ

ಗೊರವನಹಳ್ಳಿ ಸಮೀಪ ಘೋರ ಕೃತ್ಯ: 3 ವರ್ಷದ ಬಳಿಕ ಸಿಕ್ಕಿಬಿದ್ದವ ಬಾಯ್ಬಿಟ್ಟ ರಹಸ್ಯ ಕೇಳಿದ್ರೆ ಬೆಚ್ಚಿಬೀಳ್ತೀರಿ

Sign in to your account
Please enter an answer in digits:ten + thirteen =
Remember me
