ಸೊರಬ:ದೇವರ ಜಾತ್ರೆ ಪ್ರಯುಕ್ತ ಪಕ್ಕದ ತಾಲೂಕಿಗೆ ಸಂಬಂಧಿಯೊಬ್ಬರ ಮನೆಗೆ ಊಟಕ್ಕೆಂದು ತೆರಳಿದ್ದ ಸ್ನೇಹಿತರೆಲ್ಲರೂ ಜಾತ್ರೆ ಕಣ್ತುಂಬಿಕೊಂಡು ಊಟ ಮಗಿಸಿ ವಾಪಸ್​ ಮನೆಗೆ ಬರುತ್ತಿದ್ದರು… ಹಿನ್ನೇನು ಕೆಲವೇ ನಿಮಿಷದಲ್ಲಿ ಎಲ್ಲರೂ ಮನೆ ಸೇರಬೇಕಿತ್ತು. ಅಷ್ಟರಲ್ಲಿ ದುರಂತ ಸಂಭವಿಸಿದ್ದು, ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಇಂತಹ ಘಟನೆ ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕಿನ ಚಿತ್ರಟ್ಟಹಳ್ಳಿ ಗ್ರಾಮದ ಬಳಿ ಮಂಗಳವಾರ ತಡರಾತ್ರಿ ಸಂಭವಿಸಿದೆ. ಮೃತರನ್ನು ತವನಂದಿ ಗ್ರಾಮದ ಯೋಗರಾಜಪ್ಪ ನಿಂಗಪ್ಪ (57), ತಿಮ್ಮಪ್ಪ ಈರಪ್ಪ(45) ಹಾಗೂ ಆಕಾಶ್ ಹನುಮಂತಪ್ಪ(13) ಗುರುತಿಸಲಾಗಿದೆ. ಸಾಗರ ತಾಲೂಕಿನ ಗುತ್ತನಹಳ್ಳಿಯಲ್ಲಿ ಔತಣಕೂಟದಲ್ಲಿ ಪಾಲ್ಗೊಂಡು ತಡರಾತ್ರಿ ಟಾಟಾ ಏಸ್​ನಲ್ಲಿ ಊರಿಗೆ ವಾಪಸ್ ಬರುವ ವೇಳೆ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದು ಹನ್ನೊಂದು ಜನ ಗಾಯಗೊಂಡಿದ್ದಾರೆ.
ವಾಹನ ಚಾಲಕ ಹನುಮಂತಪ್ಪ ಅವರ ಪುತ್ರ ಆಕಾಶ್ ಕೂಡ ಮೃತಪಟ್ಟಿದ್ದಾನೆ. ಈತ ಹಳೇ ಸೊರಬ ಸರ್ಕಾರಿ ಶಾಲೆಯಲ್ಲಿ 9ನೇ ತರಗತಿ ವ್ಯಾಸಂಗ ಮಾಡುತ್ತಿದ್ದ. ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹನುಮಂತಪ್ಪಗೆ ತನ್ನ ಮಗನ ಸಾವಿನ ಸುದ್ದಿ ಬರಸಿಡಿಲು ಬಡಿದಂತಾಗಿದೆ. ಮೃತ ಯೋಗರಾಜಪ್ಪ ನಿಂಗಪ್ಪ ಅವರ ಮನೆಯಲ್ಲಿ ಇತ್ತೀಚಿಗಷ್ಟೇ ಮತ್ತೊಂದು ಸಾವಾಗಿತ್ತು. ತವನಂದಿ ಗ್ರಾಮದ ದೊಡ್ಡ ಕೆರೆಯಲ್ಲಿ ಎತ್ತುಗಳ ಮೈತೊಳೆಯಲು ಹೋಗಿದ್ದ ಯುವಕ ಮಧು ನೀರುಪಾಲಾಗಿದ್ದ. ಈ ಸಾವಿನ ನೋವು ಹಸಿಯಾಗಿರುವಾಗಲೇ ಯೋಗರಾಜಪ್ಪ ನಿಂಗಪ್ಪರ ಸಾವು ಕುಟುಂಬಸ್ಥರಿಗೆ ಗಾಯದ ಮೇಲೆ ಬರೆ ಎಳೆದಿದೆ.
ಸಾಗರ ತಾಲೂಕಿನ ಗುತ್ತನಹಳ್ಳಿ ಗ್ರಾಮದಲ್ಲಿ ನಡೆದ ದುರ್ಗಾಂಬಾ ಜಾತ್ರೆ ನಿಮಿತ್ತ ಸಂಬಂಧಿಗಳ ಮನೆಗೆ ತವನಂದಿ ಗ್ರಾಮದ ಹನುಮಂತಪ್ಪ ಎಂಬುವರು ಟಾಟಾ ಏಸ್ ವಾಹನ ಬಾಡಿಗೆ ಮಾಡಿಕೊಂಡು ಸ್ನೇಹಿತರು ಹಾಗೂ ಸಂಬಂಧಿಗಳೊಂದಿಗೆ ಔತಣಕೂಟಕ್ಕೆ ತೆರಳಿದ್ದರು. ಜಾತ್ರೆಯಲ್ಲಿ ಔತಣಕೂಟ ಮುಗಿಸಿಕೊಂಡು ಮಂಗಳವಾರ ತಡರಾತ್ರಿ ಸ್ವಗ್ರಾಮ ತವನಂದಿಗೆ ಆಗಮಿಸುವ ಸಂದರ್ಭದಲ್ಲಿ ಆನವಟ್ಟಿ-ಸೊರಬ ರಸ್ತೆಯ ಚಿತ್ರಟ್ಟೆಹಳ್ಳಿ ಗ್ರಾಮದ ಸಮೀಪ ಚಾಲಕನ ನಿಯಂತ್ರಣ ತಪ್ಪಿ ವಾಹನ ಮರಕ್ಕೆ ಡಿಕ್ಕಿ ಹೊಡೆದಿದೆ. ತವನಂದಿ ಗ್ರಾಮ ಕೇವಲ ಎರಡು ಕಿಮೀ ದೂರದಲ್ಲಿ ಇರುವಾಗಲೇ ದುರ್ಘಟನೆ ಸಂಭವಿಸಿದೆ. ಕೊಂಚ ದೂರ ಕ್ರಮಿಸಿದ್ದರೆ ಎಲ್ಲರೂ ಕ್ಷೇಮವಾಗಿ ಮನೆ ಸೇರುತ್ತಿದ್ದರು. ಅಷ್ಟರಲ್ಲಿ ದುರಂತ ಸಂಭವಿಸಿದೆ. ಔತಣಕೂಟಕ್ಕೆ ತೆರಳಿದ್ದವರಲ್ಲಿ ಮೂವರು ಜಗಳ ಮಾಡಿಕೊಂಡು ರಾತ್ರಿ ಗುತ್ತನಹಳ್ಳಿಯಲ್ಲೇ ಉಳಿದುಕೊಂಡಿದ್ದರಿಂದ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿರುವ ಬಸವರಾಜ್, ಹುಚ್ಚರಾಯಪ್ಪ, ಪರಶುರಾಮ, ಕೃಷ್ಣಪ್ಪ, ಜಗದೀಶ, ಚಂದ್ರಪ್ಪ, ಭೀಮಪ್ಪ, ಹನುಮಂತಪ್ಪ ಹಾಗೂ ಮಹಾದೇವಪ್ಪ ಎಂಬುವರನ್ನು ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ವಾಹನ ಚಾಲಕ ಹನುಮಂತಪ್ಪ ಮತ್ತು ನಿರಂಜನ ಅವರನ್ನು ಸೊರಬ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಸಂತೋಷ್​ ಆತ್ಮಹತ್ಯೆ: 2 ಕೋಟಿ ರೂ. ಪರಿಹಾರಕ್ಕೆ ರಾಜ್ಯ ಗುತ್ತಿಗೆದಾರರ ಸಂಘ ಡಿಮಾಂಡ್​

ಅಯ್ಯೋ ಅಣ್ಣ… ನಾನಷ್ಟು ಗೋಗರೆದ್ರೂ ಊಟ ಮಾಡದೆ ಕೆಲ್ಸ ಇದೆ ಅಂತ ಹೊರಟ್ಯಲ್ಲೋ: ಮಡಿಲಕ್ಕಿ ಕೊಟ್ಟು ಹಿಂತಿರುಗುವಾಗ ಸಾವು

ಜ್ಯೋತಿಷಿ ಮಾತು ನಂಬಿ ಸಾವಿನ ಮನೆ ಬಿಟ್ಟು ಲಾಡ್ಜ್​ಗೆ ಹೋದ ಮಾಲೀಕನಿಗೂ-ಕುಟುಂಬಕ್ಕೂ ಕಾದಿತ್ತು ಭಾರಿ ಆಘಾತ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × five =
Remember me
