ಬೆಂಗಳೂರು:ಇದು ರಾಜ್ಯವೇ ಬೆಚ್ಚಿಬೀಳೋ ಸುದ್ದಿ. ಸ್ವಲ್ಪ ಯಾಮಾರಿದ್ರೂ ಘನಘೋರ ಕೃತ್ಯ ಸಂಭವಿಸುತ್ತಿತ್ತು. ಇಲ್ಲೇ ಹುಟ್ಟಿ, ಇಲ್ಲೇ ಬೆಳೆದಿದ್ದ ಹಿಂದು ಯುವಕನೊಬ್ಬ ದೇಶದಲ್ಲಿ ವಿದ್ವಂಸಕ ಕೃತ್ಯವೆಸಗಲು ಮಹಾ ಸಂಚು ರೂಪಿಸಿದ್ದ. ಅಫ್ಘಾನಿಸ್ತಾನದ ಉಗ್ರ ಸಂಘಟನೆಗೆ ಸೇರಲು ಸಜ್ಜಾಗಿದ್ದ. ಇನ್ನು ಕೆಲ ದಿನ ಈತನನ್ನು ಬಂಧಿಸದೇ ಇದ್ದಿದ್ದರೆ ದೇಶ ರಕ್ಕಸ ನಾಡಾಗುತ್ತಿತ್ತು!
ಹೌದು, ನಾವು ಈಗ ಹೇಳುತ್ತಿರುವುದು ಬೆಂಗಳೂರಿನ ವೈಟ್​ಫೀಲ್ಡ್​ನಲ್ಲಿ ಎನ್​ಐಎ(ರಾಷ್ಟ್ರೀಯ ತನಿಖಾ ಸಂಸ್ಥೆ) ಅಧಿಕಾರಿಗಳಿಂದ ಬಂಧನಕ್ಕೊಳಪಟ್ಟ ಯುವಕ ಮಾದೇಶ್ ಪೆರುಮಾಳು ಅಲಿಯಾಸ್​ ಅಬ್ದುಲ್ಲಾ ಬಗ್ಗೆ. ಬೆಂಗಳೂರು ಮೂಲದ ಈ ಯುವಕ ಭಾರತದಲ್ಲಿ ವಿದ್ವಂಸಕ ಕೃತ್ಯವೆಸಗುವುದಾಗಿ ಒಪ್ಪಿಕೊಂಡಿದ್ದ ಎನ್ನಲಾಗುತ್ತಿದೆ. ಪಿಯುಸಿ ಅನುತ್ತೀರ್ಣನಾಗಿದ್ದ ಮಾದೇಶ್, ವಿದೇಶಕ್ಕೆ ಹೋಗಿ ಹ‌ಣ ಸಂಪಾದನೆ ಮಾಡುವೆ. ಅದಕ್ಕೆ ನನಗೆ ಹಣ ಕೊಡಿ ಎಂದು ಮನೆಯಲ್ಲಿ‌‌ ಪೊಷಕರ‌ ಬಳಿ ಮಾದೇಶ್​ ಹಣ‌ ಕೇಳಿದ್ದನಂತೆ. ಆದರೆ ಪೋಷಕರು ನಿರಾಕರಿಸಿದ್ದರು. ಬಳಿಕ ಸಾಮಾಜಿಕ ಜಾಲತಾಣದಲ್ಲಿ ಆ್ಯಪ್​ಗಳ ಮೂಲಕ ಐಸಿಸ್ ಸಂಪರ್ಕ ಮಾಡಿದ್ದ. ಟೆಲಿಗ್ರಾಂ, ಸಿಗ್ನಲ್​ನಂತಹ ಆ್ಯಪ್ ಬಳಸಿ ಐಸಿಸ್-ಕೆಪಿ ಸಂಘಟನೆ ಸಂಪರ್ಕಿಸಿ, ತಾನು ದೇಶ ಮತ್ತು ವಿದೇಶದಲ್ಲಿ ವಿದ್ವಂಸಕ ಕೃತ್ಯ ಎಸಗುವುದಾಗಿ ಒಪ್ಪಿಕೊಂಡಿದ್ದನಂತೆ. ಆದರೆ, ಮಾದೇಶ್ ಮೇಲೆ ನಂಬಿಕೆ ಇರದ ಕಾರಣ ಉಗ್ರ ಸಂಘಟನೆ ನಿರಾಕರಿಸಿತ್ತಂತೆ. ವಿದೇಶಕ್ಕೆ ಹೋಗಿ ಹ‌ಣ ಸಂಪಾದನೆ ಮಾಡುವೆ. ಅದಕ್ಕೆ ನನಗೆ ಹಣ ಕೊಡಿ ಎಂದು ಮನೆಯಲ್ಲಿ‌‌ ಪೋಷಕರ‌ ಬಳಿ ಮಾದೇಶ್​ ಹಣ‌ ಕೇಳಿದ್ದನಂತೆ. ಆದರೆ ಪೋಷಕರು ನಿರಾಕರಿಸಿದರು ಎಂದು ವಿಚಾರಣೆ ವೇಳೆ ಬಹಿರಂಗಗೊಂಡಿದೆ. ಈ ಬಗ್ಗೆ ಮಾಹಿತಿ ಕಲೆ ಹಾಕಿದ ಎನ್​ಐಎ ಹಾಗೂ ಸ್ಥಳೀಯ ಪೊಲೀಸರು ಆರೋಪಿಯನ್ನ ಬಂಧಿಸಿದ್ದರು. ಇಂದು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗುತ್ತೆ.
ಒಂದೇ ಮನೆಯಲ್ಲಿದ್ದರು ಪತ್ನಿ-ಪತಿ-ಸ್ನೇಹಿತ! ಪೊಲೀಸರ ಮುಂದೆ ಬಯಲಾಯ್ತು ಚೆಂದುಳ್ಳಿ ಚೆಲುವೆಯ ಅಸಲಿ ಮುಖ

ಕಣ್ಣು ಕುಕ್ಕುವಂತಿದೆ ಶಾಸಕ ಜಮೀರ್‌ ಬಂಗಲೆ! ಅರೇಬಿಯನ್‌ ಶೈಲಿಯ ಅರಮನೆಗೆ ಚಿನ್ನದ ಲೇಪನ…

ಬಿಜೆಪಿಗೆ ಬಂದ ಶಾಸಕ ಮಹೇಶ್​ಗೆ ವೇದಿಕೆಯಲ್ಲೇ ಸಿಹಿ ಸುದ್ದಿ ಕೊಟ್ಟ ಬಿಎಸ್​ವೈ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − four =
Remember me
