ಬೆಳಗಾವಿ:ಪಿಎಸ್​ಐ ಉದ್ಯೋಗಾಕಾಂಕ್ಷಿಯೊಬ್ಬ ಬೆಳಗಾವಿ ಮೂಲದ ಯುವತಿ ಹೆಸರಿನಲ್ಲಿ ಮಾಡಬಾರದ್ದು ಮಾಡಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.
ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ನಾಯಿಂಗ್ಲಜ ಗ್ರಾಮದ ಮಹಾಂತೇಶ ಮೂಡಸೆ (28) ಬಂಧಿತ. ಮೂರು ವರ್ಷಗಳಿಂದ ಪಿಎಸ್​ಐ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ಈತ ಇತ್ತಿಚೇಗೆ ಪಿಎಸ್​ಐ ದೈಹಿಕ ಪರೀಕ್ಷೆಯಲ್ಲಿ ಪಾಸಾಗಿದ್ದ ಎಂದು ತಿಳಿದು ಬಂದಿದೆ.
ಯುವಕರೇ ಈತನ ಟಾರ್ಗೆಟ್​: ಆರೋಪಿ ಮಹಾಂತೇಶ ಮೂಡಸೆ ಫೇಸ್​ಬುಕ್​, ಇನ್​ಸ್ಟಾಗ್ರಾಂನಲ್ಲಿ ಯುವತಿ ಹೆಸರಿನಲ್ಲಿ ನಕಲಿ ಅಕೌಂಟ್​ ಸೃಷ್ಟಿಸಿ ಯುವಕರಿಂದ ಸುಮಾರು 19.80 ಲಕ್ಷ ರೂ. ಸುಲಿಗೆ ಮಾಡಿದ್ದಾನೆ. ಯುವತಿ ಹೆಸರಿನಲ್ಲಿ ಹಣ ಸುಲಿಗೆ ಮಾಡಿ ಗೋವಾಕ್ಕೆ ತೆರಳಿ ಮೋಜು ಮಾಡುತ್ತಿದ್ದ.
ಎಂ.ಸ್ನೇಹಾ ಹೆಸರಿನಲ್ಲಿ ನಕಲಿ ಅಕೌಂಟ್​ ಸೃಷ್ಟಿಸಿದ್ದ ಈತ, ಫೇಸ್​ಬುಕ್​ನಲ್ಲಿ ಬೆಳಗಾವಿ ನಗರದ ಯುವತಿಯೊಬ್ಬಳ ಫೋಟೋಗಳನ್ನು ಡೌನ್​ಲೋಡ್​ ಮಾಡಿಕೊಂಡು ಆ ಅಕೌಂಟ್​ಗೆ ಅಪ್​ಲೋಡ್​ ಮಾಡಿ, ಅದನ್ನು ನಿರ್ವಹಿಸುತ್ತಿದ್ದ. ಫೇಸ್​ಬುಕ್​ ಮತ್ತು ಇನ್​ಸ್ಟಾಗ್ರಾಂನಲ್ಲಿ ಯುವಕರೊಂದಿಗೆ ಗೆಳೆತನ ಬೆಳೆಸಿಕೊಂಡು ನಾನು ಸ್ನೇಹಾ ಎಂದು ನಂಬಿಸಿ ಮೊಬೈಲ್​ ನಂಬರ್​ ಪಡೆಯುತ್ತಿದ್ದ. ವಾಟ್ಸ್​ಆ್ಯಪ್​ನಲ್ಲಿ ಚಾಟ್​ ಮಾಡುತ್ತಿದ್ದ. ಈ ವಾಟ್ಸ್​ಆ್ಯಪ್​ಗೆ ಡಿಪಿ ಕೂಡ ಆ ಯುವತಿಯ ಫೋಟೋಗಳನ್ನೇ ಹಾಕಿ ಅನುಮಾನ ಬಾರದಂತೆ ನೋಡಿಕೊಂಡಿದ್ದ. ಹೀಗೆ ಚಾಟ್​ ಮಾಡಿ ಸಲುಗೆ ಬೆಳೆಸಿ ಅವರಿಂದ ಹಣ ಪಡೆದು ಅವರ ಮೊಬೈಲ್​ ನಂಬರ್​ ಬ್ಲಾಕ್​ ಮಾಡುತ್ತಿದ್ದ. ಬಳಿಕ ಮತ್ತೊಬ್ಬ ಯುವಕನಿಗೆ ಗಾಳ ಹಾಕುತ್ತಿದ್ದ. ಹೀಗೆ 3 ವರ್ಷದಲ್ಲಿ ಬರೋಬ್ಬರಿ 19.80 ಲಕ್ಷ ರೂ. ಸುಲಿಗೆ ಮಾಡಿದ್ದಾನೆ. ಈತನ ನಕಲಿ ಅಕೌಂಟ್​ಗೆ ಫೇಸ್​ಬುಕ್​ನಲ್ಲಿ 15 ಸಾವಿರ ಪಾಲೋವರ್ಸ್​ ಇದ್ದಾರೆ!
ಪತ್ತೆಯಾಗಿದ್ದು ಹೇಗೆ?:ಯಾರೋ ತನ್ನ ಫೋಟೋಗಳ ಬಳಸಿಕೊಂಡು ನಕಲಿ ಅಕೌಂಟ್​ ತೆರೆದಿರುವ ವಿಚಾರವನ್ನ ಹೇಗೋ ತಿಳಿದ ಯುವತಿ, ಖುದ್ದಾಗಿ ಮಹಾಂತೇಶಗೆ ಮೆಸೇಜ್​ ಮಾಡಿ ಅಕೌಂಟ್​ ಡಿಲೀಟ್​ ಮಾಡುವಂತೆ ಮನವಿ ಮಾಡಿದ್ದಳು. ಆದರೂ ಆತ ಕ್ಯಾರೆ ಎಂದಿರಲಿಲ್ಲ. ಈತನ ವರ್ತನೆಯಿಂದ ಬೇಸತ್ತ ಯುವತಿ, ಜು.4ರಂದು ಬೆಳಗಾವಿ ಸಿಇಎನ್​ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಳು. ಈ ಪ್ರಕರಣ ಬೆನ್ನತ್ತಿದ ಪೊಲೀಸರು ಜು.20ರಂದು ಆರೋಪಿಯನ್ನು ಬಂಧಿಸಿದ್ದಾರೆ ಎಂದು ನಗರ ಪೊಲೀಸ್​ ಆಯುಕ್ತ ಡಾ.ಎಂ.ಬಿ.ಬೋರಲಿಂಗಯ್ಯ ತಿಳಿಸಿದ್ದಾರೆ.
ಒಂದೇ ಸಿರಿಂಜ್​ನಿಂದ 39 ಮಕ್ಕಳಿಗೆ ವ್ಯಾಕ್ಸಿನ್​! ಕೋವಿಡ್​​ ಲಸಿಕೆ ಅಭಿಯಾನದಲ್ಲಿ ಮಹಾ ಪ್ರಮಾದ, ಆರೋಪಿ ಪರಾರಿ

ರಾಜ್ಯಮಟ್ಟದ ಕಬ್ಬಡಿ ಪಂದ್ಯ ಆಟವಾಡುತ್ತಲೇ ಹಾರಿಹೋಯ್ತು ಆಟಗಾರನ ಪ್ರಾಣಪಕ್ಷಿ! ಮನಕಲಕುತ್ತೆ ಸಾವಿನ ಆ ದೃಶ್ಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 2 =
Remember me
