ಬೆಂಗಳೂರು:ಸುಂಕದಕಟ್ಟೆಯಲ್ಲಿ ಹಾಡಹಗಲೇ ಯುವತಿಯ ಮೇಲೆ ಆ್ಯಸಿಡ್​ ದಾಳಿ ನಡೆಸಿ ಪ್ರಕರಣದ ಆರೋಪಿ, ಭಗ್ನಪ್ರೇಮಿ ನಾಗೇಶ್​ ಕೃತ್ಯ ಎಸಗಲು 10 ದಿನ ಮೊದಲೇ ಸಂಚು ರೂಪಿಸಿದ್ದ ಸಂಗತಿ ತನಿಖೆಯಲ್ಲಿ ಗೊತ್ತಾಗಿದೆ.
ಯುವತಿಯ ಮೇಲೆ ಆಸಿಡ್​ ಎರಚಲು ಸಂಚು ರೂಪಿಸಿದ್ದಲ್ಲದೆ, ತನ್ನ ಗಾರ್ಮೆಂಟ್ಸ್​ ಫ್ಯಾಕ್ಟರಿ ಖಾಲಿ ಮಾಡುವ ಸಲುವಾಗಿ ಸ್ಟಾಕ್​ ಸಂಪೂರ್ಣವಾಗಿ ಮಾರಾಟ ಮಾಡಿದ್ದ. ಗಿರಾಕಿಯೊಬ್ಬರನ್ನು ಹಿಡಿದು 1 ಲಕ್ಷ ರೂ.ಗಳಿಗೆ ಸ್ಟಾಕ್​ ಕ್ಲಿಯರೆನ್ಸ್​ ಮಾಡಿದ್ದ. ಆ್ಯಸಿಡ್​ ಹಾಕುವ ಹಿಂದಿನ ದಿನ ಹಣ ಪಡೆದಿದ್ದ. ಸದ್ಯ ಪೊಲೀಸರಿಗೆ ಸುಳಿವು ಸಿಗಬಾರದು ಎಂಬ ಉದ್ದೇಶದಿಂದ ಫೋನ್​, ಎಟಿಎಂ, ಆನ್​ಲೈನ್​, ಬ್ಯಾಂಕ್​ ಖಾತೆಯನ್ನು ಆರೋಪಿ ಬಳಸುತ್ತಿಲ್ಲ ಎಂದು ತಿಳಿದುಬಂದಿದೆ.
ಆ್ಯಸಿಡ್​ ಹಾಕಿದ ಬಳಿಕ ಆರೋಪಿಯು ಪಲ್ಸರ್​ ಬೈಕ್​ನಲ್ಲಿ ಮೆಜೆಸ್ಟಿಕ್​ಗೆ ಬಂದು ಅದನ್ನು ಅಲ್ಲೇ ಬಿಟ್ಟಿದ್ದು, ಪೊಲೀಸರು ವಶಪಡಿಸಿಕೊಂಡಿದ್ದಾರೆ. ಹೊಸಕೋಟೆ ಮಾರ್ಗವಾಗಿ ಮಾಲೂರಿಗೆ ತೆರಳಿರುವುದು ಗೊತ್ತಾಗಿದೆ. ಆ ಬಳಿಕ ಅಲ್ಲಿ ಮೊಬೈಲ್​ ಸ್ವಿಚ್ಡ್​ ಆಫ್​​ ಮಾಡಿ ಪರಾರಿಯಾಗಿದ್ದಾನೆ. ಹೀಗಾಗಿ ಪೊಲೀಸರು ತಿರುಪತಿ ಹಾಗೂ ತಮಿಳುನಾಡಿನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.
ಬೆಂಗಳೂರಲ್ಲಿ ಹಾಡಹಗಲೇ ಯುವತಿ ಮೇಲೆ ಆ್ಯಸಿಡ್​ ಎರಚಿದ ಭಗ್ನಪ್ರೇಮಿ! ಯುವತಿಯ ನರಳಾಟ ನೋಡಲಾಗ್ತಿಲ್ಲ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 − seven =
Remember me
