ಬೆಂಗಳೂರು:ಪ್ರೀತಿಸಲು ಒಲ್ಲೆ ಎಂದ ಯುವತಿಗೆ ಭಗ್ನ ಪ್ರೇಮಿಯೊಬ್ಬ ರಾಜ್ಯ ರಾಜಧಾನಿ ಬೆಂಗಳೂರಲ್ಲಿ ಇಂದು(ಗುರುವಾರ) ಬೆಳ್ಳಂಬೆಳಗ್ಗೆ ಆ್ಯಸಿಡ್​​ ಎರಚಿ ಪರಾರಿಯಾಗಿದ್ದಾನೆ. ಯುವತಿಯ ದೇಹ ಶೇ.40-50 ಸುಟ್ಟಿದ್ದು, ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾಳೆ. ಮಗಳ ದಯನೀಯ ಸ್ಥಿತಿ ಕಂಡು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಕಾಮಾಕ್ಷಿಪಾಳ್ಯ ಪೊಲೀಸ್​ ಠಾಣಾ ವ್ಯಾಪ್ತಿಯ ಸುಂಕದಕಟ್ಟೆಯ ಮುತ್ತೂಟ್ ಫೈನಾನ್ಸ್ ಬಳಿ ಭಗ್ನಪ್ರೇಮಿ ನಾಗೇಶ್​ ಅಟ್ಟಹಾಸ ಮೆರೆದಿದ್ದಾನೆ. ನಾಗೇಶ್​ 24 ವರ್ಷದ ಯುವತಿಯನ್ನ ಪ್ರೀತಿಸುತ್ತಿದ್ದ. ಮದುವೆ ಆಗುವಂತೆ ಪೀಡಿಸುತ್ತಿದ್ದ. ಆದರೆ ಯುವತಿ ನಿರಾಕರಿಸಿದ್ದಳು. ಇದೇ ವಿಚಾರಕ್ಕೆ ಇಬ್ಬರ ನಡುವೆ ಬುಧವಾರ ಸಂಜೆ ಗಲಾಟೆ ನಡೆದಿತ್ತಂತೆ. ಕುಪಿತಗೊಂಡ ನಾಗೇಶ್​ ಗುರುವಾರ ಬೆಳಗ್ಗೆ ಸುಂಕದಕಟ್ಟೆ ಬಸ್​ ನಿಲ್ದಾಣದ ಬಳಿ ಆ್ಯಸಿಡ್​ ತೆಗೆದುಕೊಂಡು ಆಕೆಗಾಗಿ ಕಾಯುತ್ತಿದ್ದ. ಇದ್ಯಾವುದರ ಪರಿವೇ ಇಲ್ಲದ ಯುವತಿ, ಎಂದಿನಂತೆ ಕೆಲಸಕ್ಕೆ ಹೋಗಲೆಂದು ಮನೆಯಿಂದ ಬಸ್​ ನಿಲ್ದಾಣದತ್ತ ಬರುತ್ತಿದ್ದಂತೆ ಆಕೆ ಮೇಲೆ ಆ್ಯಸಿಡ್​ ಎರಚಿದ್ದಾನೆ. ನೋವಲ್ಲಿ ನರಳಾಡುತ್ತಿದ್ದ ಆಕೆಯನ್ನು ಕೂಡಲೇ ಸ್ಥಳೀಯರು ಸಮೀಪದ ಲಕ್ಷ್ಮೀ ಆಸ್ಪತ್ರೆಗೆ ದಾಖಲಿಸಿದ್ದಾರೆ. ನಾಗೇಶ್​ ಗಾರ್ಮೆಂಟ್ಸ್​ನಲ್ಲಿ ಕೆಲಸ ಮಾಡಿಕೊಂಡಿದ್ದ.
ಆ್ಯಸಿಡ್​​ ದಾಳಿಗೆ ಒಳಗಾದ ಯುವತಿಯನ್ನು ಆಸ್ಪತ್ರೆಗೆ ಕರೆತಂದಾಗ ಬಿಪಿ ಲೋ ಇತ್ತು. ಕೂಡಲೇ ಚಿಕಿತ್ಸೆ ನೀಡಲಾಗಿದೆ, ಈಗ ಸ್ವಲ್ಪ ಪರವಾಗಿಲ್ಲ. ದೇಹವು ಶೇ.42-50ರಷ್ಟು ಸುಟ್ಟಿದೆ. ಯುವತಿಯ ಬೆನ್ನು, ಎದೆ, ತಲೆಯ ಹಿಂಭಾಗ ಹಾಗೂ ತೊಡೆ ಭಾಗ ಸುಟ್ಟಿದೆ. ತುರ್ತು ಚಿಕಿತ್ಸೆ ನೀಡಲಾಗಿದೆ ಎಂದು ಯುವತಿಗೆ ಪ್ರಾಥಮಿಕ ಚಿಕಿತ್ಸೆ ನೀಡಿದ ವೈದ್ಯ ಡಾ.ಕಾರ್ತಿಕ್ ತಿಳಿಸಿದ್ದಾರೆ. ಕಾಮಾಕ್ಷಿಪಾಳ್ಯ ಪೊಲೀಸ್​ ಠಾಣೆಯಲ್ಲಿ ಕೇಸ್​ ದಾಖಲಾಗಿದ್ದು, ಆರೋಪಿ ನಾಗೇಶ್‌‌ ಬಂಧನಕ್ಕೆ ಬಲೆ ಬೀಸಿದ್ದಾರೆ.
ಶಿಕ್ಷಕಿ ಜೊತೆ ಶಾಲೆಯಲ್ಲೇ ಸಂಭೋಗ ನಡೆಸಿದ ಪ್ರಿನ್ಸಿಪಾಲ್! ಗ್ರಾಮಸ್ಥರ ಎಚ್ಚರಿಕೆ ನಡುವೆಯೂ ಕಾಮದಾಟ ಮುಂದುವರಿಸಿದ್ದ ಜೋಡಿ…

ಎಸ್​ಪಿಎಂ ಅವರನ್ನ ಮುಗಿಸಲು ಕಾಂಗ್ರೆಸ್​ನವರೇ ನನ್ನನ್ನು ಬಲವಂತವಾಗಿ ಚುನಾವಣೆಗೆ ನಿಲ್ಲಿಸಿದ್ರು: ದೇವೇಗೌಡ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × three =
Remember me
