ಬೆಂಗಳೂರು:ಆ್ಯಸಿಡ್ ದಾಳಿಗೆ ಒಳಗಾದ ಸಂತ್ರಸ್ತರ ಕಷ್ಟಕ್ಕೆ ಮರುಗಿದ ಸಿಎಂ ಬಸವರಾಜ ಬೊಮ್ಮಾಯಿ ಅವರು, ಸಂತ್ರಸ್ತರಿಗೆ ಉಚಿತ ನಿವೇಶನ ನೀಡುವುದಾಗಿ ಘೋಷಿಸಿದ್ದಾರೆ. ಜತೆಗೆ ಸ್ವಯಂ ಉದ್ಯೋಗಕ್ಕಾಗಿ ಐದು ಲಕ್ಷ ರೂ. ನೆರವು ನೀಡುವುದಾಗಿಯೂ ಅಭಯ ನೀಡಿದ್ದಾರೆ.
ಆ್ಯಸಿಡ್​ ದಾಳಿಗೆ ಒಳಗಾದ ಮಹಿಳೆಯರಿಗೆ ಕೊಡುತ್ತಿದ್ದ ತಲಾ 3 ಸಾವಿರ ರೂ. ಪಿಂಚಣಿಯನ್ನು 10 ಸಾವಿರ ರೂ.ಗೆ ಏರಿಕೆ ಮಾಡಲಾಗಿದೆ. ಶುಕ್ರವಾರ ಮೂವರು ಮಹಿಳೆಯರಿಗೆ ಸಾಂಕೇತಿಕವಾಗಿ ಪಿಂಚಣಿ ಪತ್ರ ವಿತರಿಸಿದ ಬಳಿಕ ಮಾತನಾಡಿದ ಸಿಎಂ, ಆ್ಯಸಿಡ್ ದಾಳಿಗೆ ಒಳಗಾದ ಮಹಿಳೆಯರಿಗೆ ನಿವೇಶನ ನೀಡುವ ಕೆಲಸ ನಾಳೆಯಿಂದ ಆಗುತ್ತೆ. 5 ಲಕ್ಷ ರೂ. ವರೆಗೂ ಸ್ವಯಂ ಉದ್ಯೋಗಕ್ಕೆ ಅವಕಾಶ ನೀಡುತ್ತೇವೆ. ವಸತಿ ಯೋಜನೆಯಡಿ ಮನೆ ನಿರ್ಮಿಸಲು ತಕ್ಷಣ ಆದೇಶ ಹೊರಡಿಸಲಾಗುತ್ತದೆ ಎಂದು ಶುಕ್ರವಾರ ಹೇಳಿದರು.
ಆ್ಯಸಿಡ್ ದಾಳಿಗೆ ಒಳಗಾದವರ ಬದುಕು ಕಷ್ಟ. ಅವರ ಬಗ್ಗೆ ಯೋಚಿಸಿದರೆ ಸಾಕು ದುಃಖ ಬರುತ್ತದೆ. ಜನ ಅವರಿಂದ ದೂರ ಹೋಗುತ್ತಾರೆ. ಇದು ನನ್ನ ಮನಸ್ಸಿನಲ್ಲಿ ಕೊರೆಯುತ್ತಿತ್ತು. ಅವರ ಬದುಕಿಗೆ ನೆರವಾಗಲೆಂದು ಈ ಯೋಜನೆಗಳನ್ನು ಜಾರಿ ಮಾಡುತ್ತಿದ್ದೇವೆ ಎಂದರು.
ತಾಳಿ ಕಟ್ಟಿಸಿಕೊಂಡ ಮರುಕ್ಷಣವೇ ಪರೀಕ್ಷಾ ಕೇಂದ್ರಕ್ಕೆ ದೌಡಾಯಿಸಿದ ಮದುಮಗಳು! ಮಂಡ್ಯ ಯುವತಿಯ ನಡೆಗೆ ಎಲ್ಲೆಡೆ ಮೆಚ್ಚುಗೆ

ಸಾವಲ್ಲೂ 8 ಜನ್ರಿಗೆ ಜೀವ ಕೊಟ್ಟ ಚಂದ್ರಶೇಖರ್​: ಪತಿಯ ಅಗಲಿಕೆ ನೋವಲ್ಲೂ ಸಾರ್ಥಕತೆ ಮೆರೆದ ಗರ್ಭಿಣಿ ಪತ್ನಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × five =
Remember me
