ಬೆಂಗಳೂರು:ಒಂದು ತಿಂಗಳ ಹಿಂದೆ ಸುಂಕದಕಟ್ಟೆಯಲ್ಲಿ ಹಾಡಹಗಲೇ ಯುವತಿಯ ಮೇಲೆ ಭಗ್ನಪ್ರೇಮಿ ನಾಗೇಶ್​ ಆ್ಯಸಿಡ್​ ದಾಳಿ ನಡೆಸಿದ್ದ. ಈ ಪ್ರಕರಣ ಇನ್ನೂ ಹಸಿಯಾಗಿರುವಾಗಲೇ ಮತ್ತೊಬ್ಬ ಮಹಿಳೆ ಮೇಲೆ ಪ್ರಿಯಕರ ಆ್ಯಸಿಡ್​ ಎರಚಿ ವಿಕೃತಿ ಮೆರೆದಿದ್ದಾರೆ.
ಬೆಂಗಳೂರಿನ ಗೋರಿಪಾಳ್ಯದಲ್ಲಿ ಶುಕ್ರವಾರ ವಿವಾಹಿತ ಮಹಿಳೆ ಮೇಲೆ ಆ್ಯಸಿಡ್​ ದಾಳಿ ಆಗಿದೆ. ಸಂತ್ರಸ್ತೆ ಇಂದು ಬೆಳಗ್ಗೆ ಕೆ.ಎಸ್.ಲೇಔಟ್​ನಿಂದ ಜೆ.ಪಿ. ನಗರದತ್ತ ಹೋಗುತ್ತಿದ್ದರು. ಹಿಂದೆ ಫಾಲೋ ಮಾಡಿಕೊಂಡು ಬಂದ ಗೋರಿಪಾಳ್ಯದ ಅಹಮದ್ ಎಂಬಾತ ಆಕೆ ಮೇಲೆ ಆ್ಯಸಿಡ್​ ಎರಚಿದ್ದಾನೆ.
ಸಂತ್ರಸ್ತೆ ಮತ್ತು ಅಹಮದ್ ಇಬ್ಬರೂ ಪರಸ್ಪರ ಇಷ್ಟ ಪಟ್ಟಿದ್ದರಂತೆ. ಈಗಾಗಲೇ ಈ ಮಹಿಳೆಗೆ ಬೇರೊಬ್ಬನ ಜೊತೆ ಮದ್ವೆಯಾಗಿ ಒಬ್ಬ ಮಗಳಿದ್ದಾಳೆ. ಆದರೂ ಅಹಮದ್​ ಮತ್ತು ಮಹಿಳೆ ಇಬ್ಬರ ನಡುವೆ ಸಲುಗೆ ಬೆಳೆದಿತ್ತು ಎನ್ನಲಾಗಿದೆ. ಹಾಗಾಗಿ ತನ್ನನ್ನು ಮದುವೆಯಾಗುವಂತೆ ಆಕೆಗೆ ಅಹಮದ್ ಒತ್ತಾಯಿಸುತ್ತಿದ್ದ. ಮದ್ವೆ ಆಗಲು ಮಹಿಳೆ ಕಾಲಾವಕಾಶ ಕೇಳಿದ್ದರಂತೆ. ಬೇಗ ಮದುವೆಯಾಗುವಂತೆ ಪೀಡಿಸುತ್ತಿದ್ದ ಅಹಮದ್, ಇದೇ ವಿಚಾರಕ್ಕೆ ಪದೇಪದೆ ಜಗಳ ತೆಗೆಯುತ್ತಿದ್ದ. ಮಾತಿಗೆ ಮಾತು ಬೆಳೆದು ಇಬ್ಬರ ನಡುವೆ ಜಗಳವೂ ಆಗಿತ್ತು. ಸಿಟ್ಟಿಗೆದ್ದ ಅಹಮದ್​, ಇಂದು ಬೆಳಗ್ಗೆ ಮಹಿಳೆಯನ್ನ ಫಾಲೋ ಮಾಡಿಕೊಂಡು ಹೋಗಿ ಸಾರಕಿ ಸಿಗ್ನಲ್ ಬಳಿ ಆಕೆಯನ್ನು ಅಡ್ಡಗಟ್ಟಿ ಮುಖಕ್ಕೆ ಆ್ಯಸಿಡ್ ಎರಚಿ ಪರಾರಿಯಾಗಿದ್ದಾನೆ. ಸಂತ್ರಸ್ತೆಯ ಬಲಗಣ್ಣು ಗಂಭೀರ ಗಾಯವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.
ನೀವಾದ್ರೂ ಒಪ್ಸಿ ಅವಳ ಜತೆ ಮದ್ವೆ ಮಾಡ್ಸಿ ಸಾರ್​… ಪೊಲೀಸರ ಬಳಿ ಗೋಗರೆದ ಆ್ಯಸಿಡ್​ ನಾಗ​! ಇಷ್ಟಲ್ಲಾ ಆದ್ರೂ ನಿಲ್ಲದ​ ಹುಚ್ಚಾಟ

ಆ್ಯಸಿಡ್​ ದಾಳಿಕೋರ ನಾಗೇಶ್​ ಬಂಧನ: ಸ್ವಾಮೀಜಿ ವೇಷದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:six + 9 =
Remember me
