ಬೆಂಗಳೂರು:ಸಾಕಷ್ಟು ಟ್ರೈ ಮಾಡ್ದೆ ಸಾರ್, ಅವಳು ನನ್ನ ಪ್ರೀತಿಗೆ ಬೀಳಲಿಲ್ಲ.. ನೀವಾದ್ರೂ ಒಪ್ಸಿ ಸಾರ್… ಅವಳನ್ನು ಮದ್ವೆ ಆಗ್ತೀನಿ… ಎಂದು ಪೊಲೀಸರ ಬಳಿ ಆ್ಯಸಿಡ್​ ದಾಳಿಕೋರ ನಾಗೇಶ್​ ಗೋಗರೆದಿದ್ದಾನೆ.
ಪೊಲೀಸರಿಂದ ಗುಂಡೇಟು ತಿಂದು ಆಸ್ಪತ್ರೆ ಸೇರಿರೋ ಆರೋಪಿ, ಪೊಲೀಸರ ಮುಂದೆಯೂ ಆ ಯುವತಿಯನ್ನ ಬಿಟ್ಟು ಇರಲು ಆಗಲ್ಲ ಎಂದಿದ್ದಾನೆ. ನೀವಾದ್ರೂ ಒಪ್ಸಿ ಮದ್ವೆ ಮಾಡ್ಸಿ ಸಾರ್​… ಇಲ್ಲಾ ಜೈಲಿಗೆ ಹಾಕಿ ಎಂದಿದ್ದಾನೆ. ಜೈಲಿಗೆ ಹಾಕ್ತೀರಾ.. ಮೂರೊತ್ತೂ ಊಟ ಹಾಕ್ತೀರಾ ಬಿಡಿ ಸಾರ್ ಎಂದು ಭಂಡತನ ಮೆರೆದಿದ್ದಾನೆ.
ನಾನು ಆ್ಯಸಿಡ್ ಹಾಕೋಕೆ ಯುವತಿಯೇ ಕಾರಣ. ನಾನು ಆ್ಯಸಿಡ್ ಹಾಕಬಾರದು ಅಂತಲೇ ಇದ್ದೆ. ಘಟನೆಯ ಹಿಂದಿನ ದಿನ ಬಾಯಿ ಮಾತಿಗೆ ಆ್ಯಸಿಡ್ ಹಾಕ್ತೀನಿ ಎಂದಿದ್ದೆ. ಆದ್ರೆ ಯುವತಿ ತಂದೆಗೆ ಹೇಳಿ ಬಿಟ್ಟಿದ್ಳು. ಅವರ ತಂದೆ ನನ್ನ ಅಣ್ಣನಿಗೆ ಹೇಳಿ ಬೈಸಿದ್ರು. ಇದರಿಂದ ಆ್ಯಸಿಡ್ ಹಾಕಿಯೇ ಬಿಡೋಣ ಎಂದು ನಿರ್ಧರಿಸಿ ಹಾಕಿಬಿಟ್ಟೆ ಎಂದಿದ್ದಾನೆ.
7 ವರ್ಷದ ಹಿಂದೆ ಯುವತಿ ಮನೆ ಮತ್ತು ಆರೋಪಿ ಮನೆ ಒಂದೇ ಬಿಲ್ಡಿಂಗ್​ನಲ್ಲಿ ಇತ್ತಂತೆ. ಆ ವೇಳೆ ಆರೋಪಿ ಯುವತಿಗೆ ಲವ್​ ಪ್ರಪೋಸ್ ಮಾಡಿದ್ದ. ಇದಕ್ಕೆ ಯುವತಿ ನಿರಾಕರಿಸಿದ್ದಳು. ಆದರೂ ಆಕೆಯನ್ನು ಲವ್​ ಮಾಡುವಂತೆ ಪದೇಪದೆ ಪೀಡಿಸುತ್ತಿದ್ದನಂತೆ. ಈ ಬಗ್ಗೆ ಯುವತಿ ತನ್ನ ಪಾಲಕರಿಗೆ ಹೇಳಿದ್ದಳಂತೆ. ಲವ್​ ಮಾಡುವಂತೆ ಪೀಡಿಸುತ್ತಿದ್ದ ನಾಗೇಶ್​ಗೆ ಯುವತಿಯ ಪಾಲಕರು ಬುದ್ಧಿ ಹೇಳಿ ಕಳುಹಿಸಿದ್ದರು. ಆದರೂ ಸುಮ್ಮನಾಗದ ಆತ, ಆಕೆಯ ಹಿಂದೆ ಬಿದ್ದಿದ್ದ. ಆ್ಯಸಿಡ್​ ದಾಳಿ ನಡೆಯೂಕು ಮುನ್ನಾ ದಿನ ಆಕೆಯನ್ನ ಭೇಟಿ ಮಾಡಿ ಪ್ರೀತಿ ವಿಷ್ಯ ಪ್ರಸ್ತಾಪಿಸಿದ್ದ. ಆಗ ಯುವತಿ ನೀನು ಅಣ್ಣನ ತರ. ನಿನ್ನನ್ನು ಮದುವೆ ಆಗುವ ಬಯಕೆ ಇಲ್ಲ. ಇನ್ನು ಪ್ರೀತಿಗೀತಿ ಆಗಿಬರಲ್ಲ ಎಂದಿದ್ದಳು. ಇದರಿಂದ ಸಿಟ್ಟಾದ ಆತ ಆ್ಯಸಿಡ್​ ಎರಚಿ ವಿಕೃತಿ ಮೆರೆದಿದ್ದ. ಪಾಪ ಏನೂ ತಪ್ಪು ಮಾಡದ ಯುವತಿ ನೋವಲ್ಲಿ ನರಳುತ್ತಿದ್ದಾಳೆ. ಇವನ ಹುಚ್ಚಾಟಕ್ಕೆ ಆಕೆಯ ಬದುಕೇ ಬಲಿಯಾಗಿದೆ. ಇಷ್ಟಾದರೂ ಆತ ಆಕೆ ಜತೆ ಮದ್ವೆ ಮಾಡ್ಸಿ ಎಂದು ಪೊಲೀಸರನ್ನೇ ಕೇಳಿದ್ದಾನೆ.(ದಿಗ್ವಿಜಯ ನ್ಯೂಸ್​)
ಟೆಕ್ನಿಕಲ್ ಎವಿಡೆನ್ಸ್ ಸಿಗಲೇ ಇಲ್ಲ… ಕರಪತ್ರ ಹಂಚಿ ಆ್ಯಸಿಡ್​ ನಾಗೇಶ್​ನನ್ನು ಬಂಧಿಸಿದ್ದೇ ರೋಚಕ!

ತಾಳಿ ಕಟ್ಟಿಸಿಕೊಂಡ ಮರುಕ್ಷಣವೇ ಪರೀಕ್ಷಾ ಕೇಂದ್ರಕ್ಕೆ ದೌಡಾಯಿಸಿದ ಮದುಮಗಳು! ಮಂಡ್ಯ ಯುವತಿಯ ನಡೆಗೆ ಎಲ್ಲೆಡೆ ಮೆಚ್ಚುಗೆ

ಸಿಜೇರಿಯನ್ ಹೊಲಿಗೆ ತನ್ನಿಂತಾನೇ ಓಪನ್! ಕೀವು ತುಂಬಿ ಬಾಣಂತಿಯರ ಗೋಳಾಟ… ವಿಜಯಪುರ ಆಸ್ಪತ್ರೆಯಲ್ಲಿ ಎಡವಟ್ಟು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − 10 =
Remember me
