ಬೆಂಗಳೂರು:ಸುಳ್ಳು ದಾವೆಗಳ ವಾಪಸ್ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಹಾಗೂ ಹೈಕೋರ್ಟ್ ನಿರ್ದೇಶನಗಳಂತೆ ಸರ್ಕಾರ ಕ್ರಮವಹಿಸಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಹೇಳಿದರು.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಗೃಹ ಸಚಿವರು, ಇಲಾಖೆ ಅಧಿಕಾರಿಗಳು ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ ಬಳಿಕ ಸುದ್ದಿಗಾರರ ಜತೆಗೆ ಮಾತನಾಡಿದ ಸಿಎಂ, ‌ಬಿಜೆಪಿ ಹಾಗೂ ಹಿಂದು ಸಂಘಟನೆಗಳ ಕಾರ್ಯಕರ್ತರ ವಿರುದ್ಧ ಹೂಡಿರುವ ಹಳೆಯ ಸುಳ್ಳು ಕೇಸ್​ಗಳನ್ನು ಹಿಂಪಡೆಯಲು ಸಚಿವ ಕೋಟ ಶ್ರೀನಿವಾಸ ಪೂಜಾರಿ ಕೋರಿದ್ದಾರೆ. ಬಿ.ಎಸ್. ಯಡಿಯೂರಪ್ಪ ಆಡಳಿತಾವಧಿಯಲ್ಲಿ ನಾನು ಗೃಹ ಸಚಿವರಾಗಿದ್ದ ಅವಧಿಯಲ್ಲಿ ರೈತರು, ‌ಕನ್ನಡಪರ ಸಂಘಟನೆಗಳ ವಿರುದ್ಧದ ಪ್ರಕರಣಗಳನ್ನು ಕೈಬಿಡಲಾಗಿತ್ತು ಎಂದು ತಿಳಿಸಿದರು. ಹಿಂಸೆಗೆ ಹಿಂಸೆಯೇ ಮದ್ದಲ್ಲವೆಂದು ನಾನೂ ಒಪ್ಪುತ್ತೇನೆ. ಆದರೆ‌‌, ಸಚಿವ ಕೆ.ಎಸ್.ಈಶ್ವರಪ್ಪ ಅವರು ನೋವು ಹಂಚಿಕೊಂಡಿದ್ದಾರೆಯೇ ಹೊರತು ಪ್ರಚೋದನಾಕಾರಿ ಹೇಳಿಕೆ ನೀಡಿಲ್ಲ. ಕಾಂಗ್ರೆಸ್ ಆಡಳಿತಾವಧಿಯಲ್ಲಿ ಹಿಂದುಪರ ಸಂಘಟನೆಗಳ ಕಾರ್ಯಕರ್ತರ ಹತ್ಯೆ ಹಾಗೂ ದೌರ್ಬಲ್ಯಗಳನ್ನು ಪ್ರಸ್ತಾಪಿಸಿದ್ದಾರೆ. ಇದಕ್ಕೆ ಬೇರೆ ಅರ್ಥ ಕಲ್ಪಿಸುವುದು ಅನಗತ್ಯವೆಂದು ಬೊಮ್ಮಾಯಿ‌ ಸಮರ್ಥಿಸಿಕೊಂಡರು.
ಬಿಜೆಪಿ, ಹಿಂದುಪರ ಸಂಘಟನೆಗಳ ಕಾರ್ಯಕರ್ತರು ಮಾತ್ರವಲ್ಲ ರೈತರು ಹಾಗೂ ಕನ್ನಡಪರ‌ ಚಳವಳಿಗಾರರ ವಿರುದ್ಧದ ಮೊಕದ್ದಮೆ ಹಿಂಪಡೆಯುವ ಕುರಿತು ಮುಖ್ಯಮಂತ್ರಿ ಜತೆಗೆ ಚರ್ಚಿಸಿ ಸೂಕ್ತ ಕ್ರಮ ವಹಿಸಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು. ಕೆ.ಎಸ್.ಈಶ್ವರಪ್ಪ ತಮ್ಮ ನೋವು ನೋಡಿಕೊಂಡಿದ್ದು, ಪ್ರಚೋದನೆ ಅಥವಾ ವಿವಾದವೆಂದು ದೊಡ್ಡದು ಮಾಡಬೇಕಾಗಿಲ್ಲ ಎಂದು ಸಮರ್ಥಿಸಿಕೊಂಡರು.
ನೂತನ ಸರ್ಕಾರದ ಧ್ಯೇಯ ಮನವರಿಕೆ ಮಾಡಿಕೊಡುವ ಉದ್ದೇಶದಿಂದ ಸಭೆ ಕರೆಯಲಾಗಿತ್ತು. ಪೊಲೀಸರು ಇನ್ನಷ್ಟು ಜನಪರ ಹಾಗೂ ದಕ್ಷವಾಗಿ ಕೆಲಸ ಮಾಡಬೇಕು. ಸುಭಿಕ್ಷ ರಾಜ್ಯಕ್ಕೆ ಕಾನೂನು ಮತ್ತು ಸುವ್ಯವಸ್ಥೆ ಪೂರ್ಣ ಬಿಗಿಯಾಗಿರುವುದು ಮುಖ್ಯ, ಅದಕ್ಕೆ ಆದ್ಯತೆ‌ ನೀಡಲಾಗುವುದು. ದಕ್ಷ, ಅನುಭವಿ ಮತ್ತು ಪ್ರಾಮಾಣಿಕ ಸಚಿವ ಆರಗ ಜ್ಞಾನೇಂದ್ರ ಅವರು ಇಲಾಖೆಗೆ ಇನ್ನಷ್ಟು ಚೈತನ್ಯ ತುಂಬುವ ಉತ್ಸಾಹದಲ್ಲಿದ್ದಾರೆ ಎಂದು ಬೊಮ್ಮಾಯಿ‌ ಹೇಳಿದರು.
ನಾನು ಕಬ್ಬನ್ ಪಾರ್ಕ್-ಲಾಲ್​ಬಾಗ್ ಸುತ್ತೋಕೆ ಬಂದಿಲ್ಲ! ನನ್ನ ಬಗ್ಗೆ ಎಚ್ಚರದಿಂದ ಮಾತಾಡಿ: ಸಚಿವರಿಗೆ ಪ್ರೀತಂ ಖಡಕ್​ ವಾರ್ನಿಂಗ್​

ನನ್ನ ತಾಯಾಣೆ.. ಅಷ್ಟೊಂದು ಹಣವನ್ನು ಜೀವನದಲ್ಲಿ ನೋಡಿಯೇ ಇರಲಿಲ್ಲ: ಮಂಜು ಪಾವಗಡ

ಅಮ್ಮನ ಮಾತು ಕೇಳಿದ್ದರೆ ವಿವೇಕ್​ ಸಾಯುತ್ತಲೇ ಇರಲಿಲ್ಲ..! ಮುಗಿಲುಮುಟ್ಟಿದೆ ಹೆತ್ತವ್ವನ ಆಕ್ರಂದನ

ಬೊಮ್ಮಾಯಿ ವಿರುದ್ಧ ಬಿಎಸ್​ವೈಗೆ ದೂರು! ಪ್ರೀತಂಗೌಡಗೆ ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಂಡ ಹಾಲಿ-ಮಾಜಿ ಸಿಎಂ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 + twenty =
Remember me
