ಬೆಂಗಳೂರು:ತೆಲುಗಿನ ಖ್ಯಾತ ನಟ ಅಲ್ಲು ಅರ್ಜುನ್​ ಗುರುವಾರ ಕಂಠೀರವ ಸ್ಟುಡಿಯೋಕ್ಕೆ ಭೇಟಿ ನೀಡಿ ಅಪ್ಪು ಸಮಾಧಿಗೆ ನಮಿಸಿದರು.
ಇದಕ್ಕೂ ಅಪ್ಪು ನಿವಾಸಕ್ಕೆ ತೆರಳಿ ಅಶ್ವಿನಿ ಪುನೀತ್​ ರಾಜ್​ಕುಮಾರ್​ ಅವರಿಗೆ ಸಾಂತ್ವನ ಹೇಳಿದರು. ಮನೆಯಲ್ಲಿದ್ದ ಅಪ್ಪು ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಭಾವುಕರಾದರು. ನಟ ಶಿವರಾಜ್​ಕುಮಾರ್ ಅವರನ್ನ ಭೇಟಿಯಾಗಿ ಕೆಲ ಸಮಯ ಮಾತುಕತೆ ನಡೆಸಿದರು.

ಅಪ್ಪು ಸಮಾಧಿಗೆ ಪುಷ್ಪ ನಮನ ಸಲ್ಲಿಸುತ್ತಲೇ ಅಲ್ಲು ಅರ್ಜುನ್​ ಭಾವುಕರಾದರು. ಇವರ ಜತೆಗೆ ನಟ, ನಿರ್ಮಾಪಕ ರಾಕ್​ಲೈನ್​ ವೆಂಕಟೇಶ್​ ಕೂಡ ಇದ್ದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅಲ್ಲು ಅರ್ಜುನ್​, ಪುನೀತ್​ ಇಲ್ಲ ಎಂಬ ವಿಷಯವನ್ನೇ ಅರಗಿಸಿಕೊಳ್ಳೋಕೆ ಆಗ್ತಿಲ್ಲ. ನಾನು ಬೆಂಗಳೂರಿಗೆ ಬಂದಾಗ ಅಪ್ಪು ಅವರನ್ನು ಭೇಟಿ ಮಾಡುತ್ತಿದ್ದೆ. ಅವರು ಹೈದರಾಬಾದ್​ಗೆ ಬಂದಾಗ ನನ್ನನ್ನು ಭೇಟಿ ಮಾಡುತ್ತಿದ್ದರು. ‘ಅಲಾ ವೈಕುಂಟಪುರಮುಲೋ’ ಸಿನಿಮಾ ಸಂದರ್ಭದಲ್ಲಿ ಅಪ್ಪು ನನಗೆ ಕರೆ ಮಾಡಿದ್ದರು. ‘ಬುಟ್ಟಾ ಬೊಮ್ಮ’ ಸಾಂಗ್ ಚೆನ್ನಾಗಿದೆ ಎಂದು ಹೇಳಿದ್ದರು. ಮತ್ತೆ ಇಬ್ಬರೂ ಭೇಟಿ ಆಗಬೇಕು ಅಂದುಕೊಂಡಿದ್ದೆವು. ಕರೊನಾ ಹಿನ್ನೆಲೆ ಸಾಧ್ಯವಾಗಲಿಲ್ಲ. ಅವರೀಗ ಬಾರದ ಲೋಕಕ್ಕೆ ಹೋಗಿಬಿಟ್ಟಿದ್ದಾರೆ ಎಂದು ಭಾವುಕರಾದರು.
ನಂದಿ ಬೆಟ್ಟಕ್ಕೆ ಶಕ್ತಿಧಾಮ ಮಕ್ಕಳ ಪ್ರವಾಸ: ಶಿವರಾಜ್​ಕುಮಾರ್​ ಜತೆ ಅಪ್ಪು ನೆನೆಯುತ್ತಲೇ ಹೆಜ್ಜೆ ಇಟ್ಟ ಮಕ್ಕಳು

4 ವರ್ಷದಿಂದ ಅಪ್ಪ ಲೈಂಗಿಕವಾಗಿ ಹಿಂಸಿಸ್ತಿದ್ದಾನೆ, ಈ ನರಕ ಸಹಿಸೋಕೆ ಆಗ್ತಿಲ್ಲಮ್ಮ… ಶಿವಮೊಗ್ಗದಲ್ಲಿ ತಾಯಿ-ಮಗಳ ನರಳಾಟ

Sign in to your account
Please enter an answer in digits:9 + 15 =
Remember me
