ಬೆಂಗಳೂರು:ಬಿಗ್​ಬಾಸ್​ ಕನ್ನಡದ ಒಟಿಟಿ ಮೊದಲ ಸೀಸನ್​ ಮುಗಿಯುತ್ತಾ ಬಂದಿದ್ದು, ಬಿಗ್​ಬಾಸ್ 9ನೇ ಸೀಸನ್​ಗೆ ಭಾರೀ ಸಿದ್ಧತೆ ನಡೆಯುತ್ತಿದೆ. ಈ ನಡುವೆ ಬಿಗ್​ಬಾಸ್ 9ನೇ ಸೀಸನ್​ಗೆ ನಟ ಅನಿರುದ್ಧ್​ ಆಯ್ಕೆಯಾಗಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಜೊತೆಜೊತೆಯಲಿ’ ಧಾರಾವಾಹಿಯಿಂದ ನಾಯಕ ಅನಿರುದ್ಧ್​ ಹೊರಬಂದ ಬೆನ್ನಲ್ಲೇ ಬಿಗ್​ಬಾಸ್​ಗೆ ಅನಿರುದ್ಧ್​ ಹೋಗ್ತಾರೆ ಎಂಬ ಚರ್ಚೆ ಶುರುವಾಗಿತ್ತು. ಇದೀಗ ಈ ಕುರಿತು ಸ್ವತಃ ಅನಿರುದ್ಧ್​ ಅವರೇ ಪ್ರತಿಕ್ರಿಯಿಸಿದ್ದಾರೆ.
‘ನಾನು ಬಿಗ್​ಬಾಸ್​ಗೆ ಹೋಗುತ್ತಿಲ್ಲ’ ಎಂದು ಅನಿರುದ್ಧ್​ ಅವರು ಟ್ವೀಟ್​ ಮಾಡುವ ಮೂಲಕ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ. ‘ಜೊತೆ ಜೊತೆಯಲಿ’ ಧಾರಾವಾಹಿಯಲ್ಲಿ ನಾಯಕನ ಪಾತ್ರ ಆರ್ಯವರ್ಧನ್​ ಆಗಿ ನಟಿಸಿರುವ ಅನಿರುದ್ಧ್​ಗೆ ಸಿನಿಮಾಗಳಿಗಿಂತ ಈ ಧಾರಾವಾಹಿ ಹೆಚ್ಚು ಜನಪ್ರಿಯತೆ ತಂದುಕೊಟ್ಟಿದೆ. ಕಳೆದ ತಿಂಗಳು ಈ ಸೀರಿಯಲ್ ತಂಡದಲ್ಲಿ ಉಂಟಾದ ಮನಸ್ತಾಪದಿಂದಾಗಿ ​ಅನಿರುದ್ಧ್​ ಅವರನ್ನು ಕೈಬಿಡಲಾಗಿದೆ. ಅಷ್ಟೇ ಅಲ್ಲ, ಕನ್ನಡ ಕಿರುತೆರೆಯಿಂದಲೇ ಅನಿರುದ್ಧ್​ ಅವರನ್ನು 2 ವರ್ಷ ಬ್ಯಾನ್​ ಮಾಡಲಾಗಿದೆ ಎಂಬ ಸುದ್ದಿಯೂ ಆ ವೇಳೆ ಹರಿದಾಡಿತ್ತು. ಅಂತಿಮವಾಗಿ ಧಾರಾವಾಹಿಯಿಂದ ಅನಿರುದ್ಧ್​ ಹೊರಬರುವ ಮೂಲಕ ವಿವಾದಕ್ಕೆ ಇತಿಶ್ರೀ ಹೇಳಲಾಗಿದೆ.
ಆದರೂ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಅನಿರುದ್ಧ್​ ಪರ ಧ್ವನಿ ಎತ್ತಿದ್ದರು. ಅನಿರುದ್ಧ್​ ಇಲ್ಲದ ಧಾರಾವಾಹಿಯನ್ನು ನಾವು ನೋಡಲ್ಲ, ಅನಿರುದ್ಧ್​ ಅವರನ್ನ ವಾಪಸ್​ ಕರೆದುಕೊಳ್ಳಿ ಎಂದು ಅಭಿಯಾನ ಕೂಡ ಮಾಡಿದ್ದರು. ಇದೀಗ ಬಿಗ್​ಬಾಸ್​ಗೆ ಅನಿರುದ್ಧ್​ ಹೋಗ್ತಾರೆ ಎಂಬ ಸುದ್ದಿಯೂ ಹರಿದಾಡಿತ್ತು. ಅವರ ಅಭಿಮಾನಿಗಳು ಖುಷಿಯಿಂದ ಶುಭಕೋರುತ್ತಲೇ ಇದ್ದರು. ಆದರೆ, ಇದನ್ನು ಅಲ್ಲಗೆಳೆದಿರುವ ಅನಿರುದ್ಧ್​, ನಾನು ಬಿಗ್​ಬಾಸ್​ಗೆ ಹೋಗುತ್ತಿಲ್ಲ. ನಾನು ಸಾಮಾಜಿಕ ಕೆಲಸ ಮಾಡಬೇಕಿದೆ ಎಂದು ಸ್ಪಷ್ಟಪಡಿಸಿದ್ದಾರೆ.
‘ಜೊತೆ ಜೊತೆಯಲಿ’ ಸ್ಟಾರ್​ಗೆ ಗೇಟ್​ಪಾಸ್​: ಸುದ್ದಿಗೋಷ್ಠಿಯಲ್ಲಿ ಮನದ ನೋವನ್ನು ಬಿಚ್ಚಿಟ್ಟ ಅನಿರುದ್ಧ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 5 =
Remember me
